ಬಾಗಲಕೋಟೆ,: ರಫೇಲ್ ಡೀಲ್ ಗೆ ಸಂಬಂಧಿಸಿದ ಅವ್ಯವಹಾರದ ಸತ್ಯಾಂಶ ಶೀಘ್ರದಲ್ಲೇ ಹೊರಬೀಳಲಿದೆ, ಇದರ ಪರಿಣಾಮ ಪ್ರಧಾನಿ ನರೇಂದ್ರ ಮೋದಿಯವರು ಜೈಲಿಗೆ ಹೋಗುವುದು ಖಂಡಿತಾ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಳಿ ನಡೆಸಿದರು.
ಬಾಗಲಕೋಟೆಯ ಜಮಖಂಡಿಯಲ್ಲಿ ನಾಳೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಆನಂದ ನ್ಯಾಮಗೌಡ ಪರ ಪ್ರಚಾರ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರನ್ನುದ್ದೇಸಿಸಿ ಮಾತನಾಡಿದರು.
ಬಿಜೆಪಿ ಗೆ ಮಾತನಾಡಲು ಯಾವುದೇ ಅಭಿವೃದ್ದಿ ಕಾರ್ಯಗಳಿಲ್ಲ..ಹೀಗಾಗಿಯೇ ರಾಮ ಮಂದಿರದ ವಿಷಯವನ್ನು ಮತ್ತೆ ಮತ್ತೆ ಕೆದಕಿ ಅದನ್ನೇ ಮುಂದಿಟ್ಟುಕೊಂಡು ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಮತಕ್ಕಾಗಿ ಕೋಮು ರಾಜಕೀಯದ ಮೂಲಕ ದೇಶವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿರುವ ಕೇಸರಿ ಪಕ್ಷವನ್ನು ಅಧಿಕಾರದಿಂದ ದೂರವಿಡಿ’ ಎಂದು ಅವರು ಕರೆ ನೀಡಿದರು.
ರಫೇಲ್ ಡೀಲ್ ನಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆಗಳು ಹೊರಬೀಳಲಿವೆ. ಆಗ ಮೋದಿಯವರು ಜೈಲಿಗೆ ಹೋಗುವುದು ಖಂಡಿತ. ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೈಲಿಗೆ ಹೋದಂತೆ, ಮೋದಿಯವರೂ ಹೋಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಜಾಹೀರಾತುಗಳು
ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…
ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…
ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…
ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…
ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ , ಪುತ್ರ ನಾಪತ್ತೆ ; ಪ್ರಕರಣ ದಾಖಲು…
ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…