Featured

ಪ್ರಧಾನಿ ಮೋದಿ ಜತೆಗೆ ಕನ್ನಡದಲ್ಲಿ ಸಂವಾದ ನಡೆಸಿದ ಪುತ್ತೂರಿನ ಕೃಷಿಕ – Vishwanews24

ಪುತ್ತೂರು:ಲೈವ್ ವೆಬ್ ಕಾಸ್ಟಿಂಗ್ ಮೂಲಕ ಕರ್ನಾಟಕರ ತುಮಕುರು ಹಾಗೂ ಪುತ್ತೂರು ರೈತರೊಡನೆ  ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಮಟ್ಟರ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿದ್ದಾರೆ.ಪುತ್ತೂರಿನ ಗೇರು ಸಂಶೋಧನಾ ಕೇಂದ್ರದಲ್ಲಿ ಪ್ರಧಾನಿಗಳ ಜತೆಗಿನ ನೇರ ಸಂವಾದ ಲೈವ್ ವೆಬ್ ಕಾಸ್ಟಿಂಗ್ ಆಯೋಜನೆ ಮೂಲಕ ಪುತ್ತೂರಿನ ಸೇಡಿಯಾಪು ಜನಾರ್ದನ್ ಭಟ್ ರಸಗೊಬ್ಬರ ಪೂರೈಕೆ ವಿಚಾರದ ಕುರಿತು ಮಾತುಕತೆ ನಡೆಸಿದ್ದಾರೆ.

ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರ ದೇಶಾದ್ಯಂತ ನಡೆಯಿತು. ಇದರ ಜತೆಗೆ ಪ್ರಧಾನಿ ಅವರೊಂದಿಗೆ ಸಂವಾದವನ್ನೂ ಏರ್ಪಡಿಸಿತ್ತು. ಇದಕ್ಕಾಗಿ ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ಕೇಂದ್ರದಲ್ಲಿ ಲೈವ್ ವೆಬ್ ಕಾಸ್ಟಿಂಗ್ ಆಯೋಜಿತವಾಗಿತ್ತು. ಈ ಸಂದರ್ಭ ಪುತ್ತೂರಿನ ಸೇಡಿಯಾಪು ಜನಾರ್ದನ್ ಭಟ್ ಪ್ರಧಾನಿಯೊಂದಿಗೆ ನೇರ ಮಾತುಕತೆ ನಡೆಸಿದ್ದಾರೆ.

“ನಾನೊಬ್ಬ ಗೇರು ಕೃಷಿಕ, ಬಾಳೆ, ಕಾಳುಮೆಣಸು, ಅಡಿಕೆ ಬೆಳೆಯುವ ಸಣ್ಣ ರೈತ.ನಮ್ಮ ಸುತ್ತಲೂ ಇದೇ ಬೆಳೆ ಬೆಳೆಯುವ ಅನೇಕ ಸಣ್ಣ ರೈತರಿದ್ದಾರೆ. ನೀವು ರೈತರಿಗೆ ನೆರವಾಗುವ ಅನೇಕ ಯೋಜನೆಯನ್ನು ಜಾರಿಗೆ ತಂದಿದ್ದೀರಿ.ಅದರಲ್ಲಿಯೂ ನೀಮ್ ಕೋಟಿಂಗ್ ಇರುವ ಯೂರಿಯಾ ರಸಗೊಬ್ಬರ, ಫಸಲ್ ಭೀಮಾ ಯೋಜನೆಗಳು ನಮಗೆ ಅನುಕೂಲವಾಗಿದೆ.ಈಗ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆ ಸಹ ಸಣ್ಣ ರೈತರಿಗೆ ಲಾಭ ತರಲಿದೆ.” ಎಂದು ಅವರು ಪ್ರಧಾನಿಗಳಿಗೆ ಹೇಳಿದ್ದಾರೆ.

ಪ್ರಧಾನಿ ಜತೆ ಸಂವಾದದ ನಂತರ ಸುದ್ದಿಗಾರರೊಡನೆ ಮಾತನಾಡಿದ ರೈತ ಜನಾರ್ಧನ ಭಟ್, ಪ್ರಧಾನಿ ಜೊತೆಗಿನ ಮಾತುಕತೆ ಬಗೆಗೆ ಸಂತಸ ವ್ಯಕ್ತಪಡಿಸುತ್ತಾ”ನಾನು ಕನ್ನಡದಲ್ಲೇ ಮಾತನಾಡಿದೆ. ಹಿಂದಿ ಭಾಷಾಂತರಕಾರರು ನನ್ನ ಮಾತನ್ನು ಅವರಿಗೆ ಮನವರಿಕೆ ಮಾಡಿಸಿದ್ದಾರೆ. ಕರಾವಳಿ ಭಾಗದ ಎಲ್ಲಾ ರೈತರ ಪರವಾಗಿ ಪ್ರಧಾನಿ ಜತೆ ಮಾತನಾಡಲು, ಅವರಿಗೆ ಧನ್ಯವಾದ ಹೇಳಲು ನನಗೆ ಅವಕಾಶ ದೊರಕಿದ್ದು ಸಂತಸ ತಂದಿದೆ.ಇದೊಂದು ಅವಿಸ್ಮರಣೀಯ ಕ್ಷಣ” ಎಂದಿದ್ದಾರೆ.

 

Vishwa News 24

Recent Posts

ಪ್ರವಾಸಿ ಬೋಟ್ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ – vishwanews24

ಪ್ರವಾಸಿ ಬೋಟ್ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ ಜಬಲ್ಪುರ : ಮಧ್ಯಪ್ರದೇಶದ ಜಬಲ್ಪುರದಲ್ಲಿನ ಬಾರ್ಗಿ ಅಣೆಕಟ್ಟು ಬಳಿ ದುರಂತಕ್ಕೀಡಾದ…

3 hours ago

ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ಪಕ್ಷದ ಎಲ್ಲರೂ ಸ್ವಾಗತಿಸುತ್ತಾರೆ : ಗೃಹ ಸಚಿವ ಪರಮೇಶ್ವರ್ – vishwanews24

ಖರ್ಗೆ ಅವರು  ರಾಜ್ಯದ ಮುಖ್ಯಮಂತ್ರಿಯಾದರೆ ಪಕ್ಷದ ಎಲ್ಲರೂ ಸ್ವಾಗತಿಸುತ್ತಾರೆ : ಗೃಹ ಸಚಿವ ಪರಮೇಶ್ವರ್ ಬೆಂಗಳೂರು: ಅನುಭವ ಹೊಂದಿರುವ ಎಐಸಿಸಿ…

4 hours ago

ಪವನ್ ಖೇರಾಗೆ ಕಾನೂನು ಹೋರಾಟದಲ್ಲಿ ಗೆಲುವು : ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶ – vishwanews24

ಪವನ್ ಖೇರಾಗೆ ಕಾನೂನು ಹೋರಾಟದಲ್ಲಿ ಗೆಲುವು - ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶ ನವದೆಹಲಿ: ಪವನ್ ಖೇಡಾ ವಿರುದ್ಧ ಅಸ್ಸಾಂ…

5 hours ago

ಸಿಲಿಂಡರ್ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ – vishwanews24

ಸಿಲಿಂಡರ್ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ ಬೆಳಗಾವಿ : ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು…

5 hours ago

ಬೆಳ್ತಂಗಡಿ : ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತ್ಯು – vishwanews24

ಬೆಳ್ತಂಗಡಿ : ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತ್ಯು ಬೆಳ್ತಂಗಡಿ : ಮನೆಯಲ್ಲಿ ಇಲಿಪಾಷಣ ತೆಗೆದುಕೊಂಡು…

5 hours ago

ಉಡುಪಿ: ಮಹಿಳೆಯ ಉಸಿರುಗಟ್ಟಿಸಿ ಕೊಲೆ ಯತ್ನ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ – vishwanews24

ಉಡುಪಿ: ಮಹಿಳೆಯ ಉಸಿರುಗಟ್ಟಿಸಿ ಕೊಲೆ ಯತ್ನ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಉಡುಪಿ: ನಾಲ್ಕು ವರ್ಷಗಳ ಹಿಂದೆ ಮಂಚಿಕುಮೇರಿಯಲ್ಲಿ…

5 hours ago