Featured

ಪ್ರಧಾನಿ ಮೋದಿ ‘ಭಾರತ್ ಮಾತಾ ಕೀ ಜೈ’ ಹೇಳಬಾರದು : ರಾಹುಲ್ ಗಾಂಧಿ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಭಾರತ್ ಮಾತಾ ಕೀ ಜೈ ಬದಲು ಅಂಬಾನಿ ಕೀ ಜೈ ಎಂದು ಹೇಳಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಚುನಾವಣಾ ನಿಮಿತ್ತ ರಾಜಸ್ಥಾನದ ಆಲ್ವಾರ್‍ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಎಲ್ಲೇ ಹೋಗಲಿ, ತಮ್ಮ ಭಾಷಣಗಳಲ್ಲಿ ಮೊದಲು ‘ಭಾರತ್ ಮಾತಾ ಕೀ ಜೈ’ ಎನ್ನುವ ಘೋಷ ವಾಕ್ಯವನ್ನು ಹೇಳುತ್ತಾರೆ. ಭಾರತ ಮಾತೆ ದೇಶದ ರೈತರು, ಯುವಜನತೆ, ಮಹಿಳೆಯರು ಹಾಗೂ ಕಾರ್ಮಿಕರ ಭಾವನೆಗೆ ಸಂಬಂಧಿಸಿದ್ದಾಗಿದೆ. ಆದರೆ ಮೋದಿ ಅವರು ಉದ್ಯಮಿ ಅಂಬಾನಿಗಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಮೋದಿ ‘ಭಾರತ್ ಮಾತಾ ಕೀ ಜೈ’ ಎನ್ನುವ ಬದಲು, ‘ಅನಿಲ್ ಅಂಬಾನಿ ಕೀ ಜೈ’, ‘ನೀರವ್ ಮೋದಿ ಕೀ ಜೈ’ ಎಂದು ಹೇಳಬೇಕೆಂದು ವ್ಯಂಗ್ಯವಾಡಿದ್ದಾರೆ,
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳು ಈಡೇರಿಲ್ಲ. ಪ್ರಧಾನಿ ಮೋದಿಯವರ ಭರವಸೆಯಂತೆ ಉದ್ಯೋಗಗಳು ಸೃಷ್ಟಿಯಾಗಿದ್ದರೇ, ಆಲ್ವಾರ್ ನಲ್ಲಿ ಯುವಕರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಭಾರತ್ ಮಾತೆ ರೈತರ, ದೇಶದ ಯುವಜನತೆಯ, ಮಹಿಳೆಯರ ಕಾರ್ಮಿಕರ ಭಾವನೆಗೆ ಸಂಬಂಧಿಸಿದ್ದಾಗಿದೆ, ಭಾರತ ಮಾತೆ ಬಗ್ಗೆ ಮಾತಾಡುತ್ತೀರಿ ಎಂದಾದರೆ ನೀವು ರೈತರನ್ನು ಹೇಗೆ ನಿರ್ಲಕ್ಷಿಸಲು ಸಾಧ್ಯ ಎಂದು ಮೋದಿಗೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
vishwanews24

 

 

Vishwa News 24

Recent Posts

ಇನ್ನು ಮುಂದೆ ಭಕ್ತರು ಗೋಕರ್ಣದ ಮಹಾಗಣಪತಿ ವಿಗ್ರಹವನ್ನು ಸ್ಪರ್ಶಿಸಿ ಪೂಜಿಸುವಂತಿಲ್ಲ – vishwanews24

ಭಕ್ತರು ಗೋಕರ್ಣದ ಗಣೇಶನ ವಿಗ್ರಹ ಸ್ಪರ್ಶಿಸಿ ಪೂಜೆ ಮಾಡುವಂತಿಲ್ಲ ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿರುವ ಸಾವಿರಾರು ವರ್ಷಗಳಷ್ಟು…

16 minutes ago

ಕೊಲಂಬೊ : 9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ – vishwanews24

ಕೊಲಂಬೊ : ಅಕ್ರಮ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಆರೋಪ : 9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ಕೊಲಂಬೊ :…

49 minutes ago

ಸುಳ್ಯ: ಬೈಕ್-ಕಾರು ಅಪಘಾತ ; ದ್ವಿತೀಯ ಪಿಯು ವಿದ್ಯಾರ್ಥಿ ಸಾವು – vishwanews24

ಸುಳ್ಯ: ಬೈಕ್-ಕಾರು ಅಪಘಾತ;  ದ್ವಿತೀಯ ಪಿಯು ವಿದ್ಯಾರ್ಥಿ ಸಾವು ಅರಂತೋಡು: ಅರಂತೋಡು ಕುಲ್ಚಾರ್ ಸಮೀಪ ಬೈಕ್ ಕಾರು ನಡುವೆ ಅಪಘಾತ…

60 minutes ago

ಮಂಗಳೂರು: ವಿದ್ಯಾರ್ಥಿಗಳು, ವಿಪಕ್ಷ ನಾಯಕನ ಜೊತೆ ಆಡಳಿತ ಪಕ್ಷ ನಡೆಸಿಕೊಂಡ ರೀತಿ ಖಂಡನೀಯ: ರಮಾನಾಥ ರೈ – vishwanews24

ಮಂಗಳೂರು: ವಿದ್ಯಾರ್ಥಿಗಳು, ವಿಪಕ್ಷ ನಾಯಕನ ಜೊತೆ ಆಡಳಿತ ಪಕ್ಷ ನಡೆಸಿಕೊಂಡ ರೀತಿ ಖಂಡನೀಯ: ರಮಾನಾಥ ರೈ ಮಂಗಳೂರು: ನೀಟ್ ಪರೀಕ್ಷೆಯಲ್ಲಿನ…

1 hour ago

ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರ ಯಾರನ್ನೂ ಕಾಪಾಡಬಾರದು : ಡಿ ಕೆ ಶಿ ಆಗ್ರಹ – vishwanews24

ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರ ಯಾರನ್ನೂ ಕಾಪಾಡಬಾರದು : ಡಿ ಕೆ ಶಿವಕುಮಾರ್ ಆಗ್ರಹ ಬೆಂಗಳೂರು: ಪ್ರಶ್ನೆ ಪತ್ರಿಕೆ…

1 hour ago

ಕಾಂಗ್ರೆಸ್ ವಿದ್ಯಾರ್ಥಿಗಳ ಹಿತಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟಿಸುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ – vishwanews24

 ವಿದ್ಯಾರ್ಥಿಗಳ ಹಿತಕ್ಕಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟಿಸುತ್ತಿದ್ದಾರೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು:…

1 hour ago