ನ್ಯೂಯಾರ್ಕ್:ನವದೆಹಲಿ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಪ್ರಪಂಚದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜೀನ್ 2019ರ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಜಗತ್ತಿನ ನಟರ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ 65 ಮಿಲಿಯನ್ ಅಮೆರಿಕನ್ ಡಾಲರ್ ಗಳಿಕೆಯೊಂದಿಗೆ (ಅಂದಾಜು ರೂ. 446 ಕೋಟಿ) ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಲಿವುಡ್ ನಟ, ‘ದಿ ರಾಕ್’ ಎಂದೇ ಖ್ಯಾತರಾದ ಡ್ವಾಯ್ನೆ ಜಾನ್ಸನ್ ಅವರಿಗೆ ಹೋಗಿದ್ದು ಅವರ ಗಳಿಕೆ 89.4 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ (ಅಂದಾಜು ರೂ. 640 ಕೋಟಿ).
‘ಮಿಷನ್ ಮಂಗಲ್’ ಯಶಸ್ಸಿನಿಂದ ಬೀಗುತ್ತಿರುವ ಅಕ್ಷಯ್ ಕುಮಾರ್, ಈ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಹತ್ತು ಮಂದಿಯಲ್ಲಿ ಸ್ಥಾನ ಪಡೆದ ಏಕೈಕ ಬಾಲಿವುಡ್ ನಟರಾಗಿದ್ದಾರೆ.
ಜಾಹಿರಾತು
ಫೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಟಾಪರ್ ಆಸ್ಟ್ರೇಲಿಯಾದ ನಟ ಕ್ರಿಸ್ ಹೆಮ್ಸ್ ವರ್ತ್ (76.4 ಮಿಲಿಯನ್ ಅಮೆರಿಕನ್ ಡಾಲರ್ -ಅಂದಾಜು ರೂ. 547 ಕೋಟಿ) ಅವರಿಗೆ ಹೋಗಿದ್ದರೆ ಜಾಕಿ ಚಾನ್ ಅವರು ತಮ್ಮ 58 ಮಿಲಿಯನ್ ಯುಎಸ್ ಡಾಲರ್ ಗಳಿಕೆಯೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ. ಒಂಬತ್ತನೇ ಹಾಗೂ ಹತ್ತನೇ ಸ್ಥಾನ ಪೌಲ್ ರುಡ್ಡ್ ಹಾಗೂ ವಿಲ್ ಸ್ಮಿತ್ ಅವರಿಗೆ ಕ್ರಮವಾಗಿ ಹೋಗಿದೆ.
ಈ ವರ್ಷ ಈಗಾಗಲೇ ಅಕ್ಷಯ್ ಕುಮಾರ್ ಅಭಿನಯದ ಅನುರಾಗ್ ಸಿಂಗ್ ನಿರ್ದೇಶನದ ಕೇಸರಿ ಮತ್ತು ಜಗನ್ ಶಕ್ತಿ ನಿರ್ದೇಶನದ ಮಿಷನ್ ಮಂಗಲ್ ಬಿಡುಗಡೆಯಾಗಿ ಯಾಶಸ್ವಿ ಪ್ರದರ್ಶನ ಕಂಡಿವೆ. ಇದರ ಜೊತೆಗೆ ಬಾಲಿವುಡ್‍ನಲ್ಲಿ ತುಂಬ ಬೇಡಿಕೆಯ ನಟನಾಗಿರುವ ಅಕ್ಕಿ ಮುಂಬರುವ ಚಿತ್ರಗಳಲ್ಲಿ ಫರ್ಹಾದ್ ಸಂಜಿಯ ಹೌಸ್‍ಫುಲ್ 4, ರಾಜ್ ಮೆಹ್ತಾ ಅವರ ಗುಡ್ ನ್ಯೂಸ್, ರಾಘವ ಲಾರೆನ್ಸ್ ಅವರ ಲಕ್ಷ್ಮಿ ಬಾಂಬ್, ರೋಹಿತ್ ಶೆಟ್ಟಿಯ ಸೂರ್ಯವಂಶಿ ಮತ್ತು ಫರ್ಹಾದ್ ಸಂಜಿಯ ಬಚ್ಚನ್ ಪಾಂಡೆ ಚಿತ್ರಗಳಲ್ಲಿ ಅಭಿನಯ ಮಾಡಲಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…