ಬೆಂಗಳೂರು: ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಾಲ್ಕು ಆನೆಗಳನ್ನು ವಿಮಾನದ ಮೂಲಕ ಜಪಾನ್‌ಗೆ ಕಳುಹಿಸಿಕೊಡಲಾಯಿತು.
ಬನ್ನೇರುಘಟ್ಟ ಉದ್ಯಾನವನವು ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್ನೊಂದಿಗೆ ಪ್ರಾಣಿ ವಿನಿಮಯ ಒಪ್ಪಂದ ಮಾಡಿಕೊಂಡಿದೆ. ಸುರೇಶ್ (8 ವರ್ಷ), ಗೌರಿ (9 ವರ್ಷ), ಶ್ರುತಿ (7 ವರ್ಷ) ಮತ್ತು ತುಳಸಿ (5 ವರ್ಷ) ಎಂಬ ಆನೆಗಳನ್ನು ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್ ಗೆ ಕೊಡಲಾಗುತ್ತಿದೆ.
ಇದಕ್ಕೆ ಪ್ರತಿಯಾಗಿ ಹಿಮೇಜಿ ಸೆಂಟ್ರಲ್ ಪಾರ್ಕ್ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತಲಾ ನಾಲ್ಕು ಚಿರತೆಗಳು, ಜಾಗ್ವಾರ್‌ಗಳು, ಪೂಮಾಗಳು, ಮೂರು ಚಿಂಪಾಂಜಿಗಳು ಮತ್ತು ಎಂಟು ಕ್ಯಾಪುಚಿನ್ ಕೋತಿಗಳನ್ನು ಹಸ್ತಾಂತರಿಸಲಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ವಿಶಾಲ್ ಸೂರ್ಯ ಸೇನ್ ತಿಳಿಸಿದ್ದಾರೆ.
ಆನೆಗಳನ್ನು ಕ್ರಾಲ್‌ನಲ್ಲಿ ಇರಿಸಿ ಲಾರಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿಸಲಾಯಿತು. ರಾತ್ರಿ 8 ಗಂಟೆ ಸುಮಾರಿಗೆ ಕತಾರ್ ಏರ್‌ವೇಸ್‌ನ ಸರಕು ಸಾಗಣೆ ವಿಮಾನದಲ್ಲಿ ಆನೆಗಳನ್ನು ಕೊಂಡೊಯ್ಯಲಾಯಿತು.
ವಿಮಾನದಲ್ಲಿ 8 ಗಂಟೆ ಪ್ರಯಾಣ ಬೆಳೆಸಿ ಆನೆಗಳು ಜಪಾನ್‌ನ ಒಸಾಕಾದ ಕನ್ಸಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿವ ಅಲ್ಲಿಂದ ಹಿಮೇಜಿ ಸೆಂಟ್ರಲ್ ಪಾರ್ಕ್ ರಸ್ತೆ ಮಾರ್ಗದಲ್ಲಿ ತಲುಪಲಿವೆ. ಒಟ್ಟಾರೆ 20 ಗಂಟೆಗಳ ಕಾಲ ಪ್ರಯಾಣದ ಮೂಲಕ ಆನೆಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ.
ಬೆಂಗಳೂರು: ಏರ್‌ಪೋರ್ಟ್‌ನಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ, ಮಾದಕ ವಸ್ತು ವಶಕ್ಕೆ ಬೆಂಗಳೂರು: ಇಲ್ಲಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1.37…
ಬಾರ್, ಪಬ್‍ಗಳಿಗೆ ವಿದ್ಯಾರ್ಥಿಗಳು: ದೂರು ಬಂದ ಕಾರಣ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ : ಪ್ರಿಯಾಂಕ್ ಖರ್ಗೆ ಬೆಂಗಳೂರು : ಬಾರ್,…
ಕಾಂಗ್ರೆಸ್ ಬಡವರ ಪಕ್ಷ , ಶಾಲು, ಹೂವು ಹಾಕುವ ಬದಲು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿ: ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್…
ಸ್ವಯಂ ಉದ್ಯೋಗದ ಹೆಸರಲ್ಲಿ ಗೃಹಿಣಿಯರಿಗೆ ಪಂಗನಾಮ : 10 ಕೋಟಿ ವಂಚಿಸಿ ಪರಾರಿ ಹಾವೇರಿ : “ಮನೆಯಲ್ಲೇ ಕುಳಿತು ಕೈತುಂಬಾ…
ಉಡುಪಿ: ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಉಡುಪಿ: ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ…
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್…