Featured

ಪ್ರೀತಿಸಿ ಮದುವೆ ಆಗಿದ್ದ ಹೆಂಡತಿ ಸ್ನೇಹಿತನ ಜೊತೆ ಪರಾರಿ : ಮನನೊಂದ ಪತಿ ನೇಣಿಗೆ ಶರಣು – vishwanews24

ಪ್ರೀತಿಸಿ ಮದುವೆ ಆಗಿದ್ದ ಹೆಂಡತಿ ಸ್ನೇಹಿತನ ಜೊತೆ ಪರಾರಿ : ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ

ಗುಬ್ಬಿ: ಪ್ರೀತಿಸಿ ಮದುವೆ ಆಗಿದ್ದ ದಂಪತಿಗಳ ಮಧ್ಯೆ ಬಂದ ಸ್ನೇಹಿತ ಪತ್ನಿಯನ್ನು ಮೋಹಿಸಿ ಕರೆದೊಯ್ದ ವಿಚಾರಕ್ಕೆ ಮನ ನೊಂದ ಪತಿ ಸೆಲ್ಸಿ ವಿಡಿಯೋ ಮೂಲಕ ನನ್ನ ಸಾವಿಗೆ ಓಡಿ ಹೋದ ಪತ್ನಿ ಹಾಗೂ ಸ್ನೇಹಿತ ಕಾರಣ ಎಂದು ಹೇಳಿ ನ್ಯಾಯ ಕೊಡಿಸಿ ಎಂದು ಸ್ನೇಹಿತರಲ್ಲಿ ಮನವಿ ಮಾಡಿದ ವಿಡಿಯೋ ಫೇಸ್ ಬುಕ್‌ಗೆ ಅಪ್ಲೋಡ್ ಮಾಡಿ ನೇಣಿಗೆ ಶರಣಾದ ಧಾರುಣ ಘಟನೆ ಪಟ್ಟಣದ ಗಟ್ಟಿ ಲೇಔಟ್ ಬಡಾ ವಣೆಯಲ್ಲಿ ನಡೆದಿದೆ.

ನಾಗೇಶ್ (35) ನೇಣಿಗೆ ಶರಣಾದ ಪತಿ. ಕಳೆದ 12 ವರ್ಷದ ಹಿಂದೆ ರಂಜಿತಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ ನಾಗೇಶ್ ಈಚೆಗೆ ಸ್ವಂತ ಮನೆ ಮಾರಾಟ ಮಾಡಿ ಗಟ್ಟಿ ಲೇಔಟ್ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈಚೆಗೆ ಈ ದಂಪತಿಗಳ ಮಧ್ಯೆ ಬಿರುಗಾಳಿಯಂತೆ ಬಂದ ಸ್ನೇಹಿತ ಭರತ್ ಎಂಬಾತ ರಂಜಿತಾಳನ್ನು ಮೋಹಕ್ಕೆ ಸಿಲುಕಿಸಿಕೊಂಡು ಓಡಿ ಹೋದ ಘಟನೆ ನಡೆದಿದೆ.

ತೀವ್ರ ಮನನೊಂದ ನಾಗೇಶ್ ಜಿಗುಪ್ಪೆಗೊಂಡು ಎರಡು ಮಕ್ಕಳನ್ನು ಬಿಟ್ಟು ಮಂಗಳವಾರ ಮನೆಯಲ್ಲಿ ಸೆಲ್ಸಿ ವಿಡಿಯೋ ಮಾಡಿ ತನ್ನ ಸಂಸಾರದಲ್ಲಿ ಬಂದ ಸ್ನೇಹಿತ ಭರತ್ ತನ್ನ ಪತ್ನಿ ರಂಜಿತಾ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಈಚೆಗೆ ಇಬ್ಬರು ಪರಾರಿಯಾದ ಘಟನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣನಾಗುತ್ತಾನೆ. ನನ್ನ ಸಾವಿಗೆ ಪತ್ನಿ ರಂಜಿತಾ ಹಾಗೂ ಸ್ನೇಹಿತ ಭರತ್ ಕಾರಣ ಎಂದು ಹೇಳಿ ವಿಡಿಯೋ ಫೇಸ್ ಬುಕ್‌ಗೆ ಅಪ್ಲೋಡ್ ಮಾಡಿ ನೇಣಿಗೆ ಶರಣಾಗಿದ್ದಾನೆ. ವಿಡಿಯೋ ನೋಡಿದ ಹಲವು ಸ್ನೇಹಿತರು ಮನೆಯತ್ತ ಬರುವ ವೇಳೆಗೆ ನಾಗೇಶ್ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಗುಬ್ಬಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

6 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

6 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

6 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

6 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

7 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

7 hours ago