Featured

ಪ್ರ್ಯಾಂಕ್‌ ಮಾಡೋಕೆ ಜೀವಂತ ವ್ಯಕ್ತಿ ಪಾರ್ಸೆಲ್ : ಕೊರಿಯರ್ ಆಫೀಸಲ್ಲಿ ಸಿಕ್ಕಿಬಿದ್ದ ಕುಟುಂಬ – vishwanews24

ಪ್ರ್ಯಾಂಕ್‌ ಮಾಡೋಕೆ ಜೀವಂತ ವ್ಯಕ್ತಿ ಪಾರ್ಸೆಲ್ : ಕೊರಿಯರ್ ಆಫೀಸಲ್ಲಿ ಸಿಕ್ಕಿಬಿದ್ದ ಕುಟುಂಬ

ಬೆಂಗಳೂರು: ಪ್ರ್ಯಾಂಕ್‌ ಮಾಡೋಕೆ ಜೀವಂತ ವ್ಯಕ್ತಿಯನ್ನು ಚೀಲದಲ್ಲಿ ತುಂಬಿಸಿ, ಮಂಗಳೂರಿಗೆ ಕೊರಿಯರ್ ಮೂಲಕ ಪಾರ್ಸೆಲ್ ಮಾಡಲು ಬಂದಿರುವ ಘಟನೆ ವೈಯಾಲಿಕಾವಲ್‌ನಲ್ಲಿ ನಡೆದಿದೆ.

ಸಂಜೆ 4:30ರ ಸುಮಾರಿಗೆ ಬಿಳಿಬಣ್ಣದ ಮೂಟೆಯೊಂದಿಗೆ ನಾಲ್ವರು ವೈಯಾಲಿಕಾವಲ್‌ನಲ್ಲಿರುವ ಕೊರಿಯರ್ ಆಫೀಸ್‌ಗೆ ಬಂದಿದ್ದರು. ಇದನ್ನು ಮಂಗಳೂರಿಗೆ ಕಳುಹಿಸಬೇಕೆಂದು ಕೊರಿಯರ್ ಸಿಬ್ಬಂದಿಗೆ ಹೇಳಿದ್ದಾರೆ. ಮೂಟೆ ಅಲುಗಾಡ್ತಿರೋದು ನೋಡಿ ಕೊರಿಯರ್ ಕಚೇರಿಯಲ್ಲಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಗಾಬರಿಯಾಗಿದ್ದಾರೆ. ಮೂಟೆಯನ್ನ ಓಪನ್ ಮಾಡಿದಾಗ ವೃದ್ದನೊಬ್ಬ ಮೂಟೆಯಿಂದ ಎದ್ದು ಹೊರನಡೆದಿದ್ದಾನೆ.

ಇದನ್ನೂ ಓದಿ:

ವೃದ್ಧ ಹೊರನಡೆಯುತ್ತಿದ್ದಂತೆ ಕೊರಿಯರ್ ಪಾರ್ಸೆಲ್ ಮಾಡಲು ಬಂದಿದ್ದ ಇಬ್ಬರು ಮಹಿಳೆಯರು, ಪುರುಷರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮೂಟೆಯಲ್ಲಿದ್ದ ವ್ಯಕ್ತಿಗೆ ಮಾತನಾಡಲು ಕೂಡ ಬರುತ್ತಿರಲಿಲ್ಲ. ಈ ಬಗ್ಗೆ ಕೊರಿಯರ್ ಆಫೀಸ್‌ನ ಸಿಬ್ಬಂದಿ ಭಯಪಟ್ಟಿದ್ದು, ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಐವರನ್ನು ಕರೆಸಿ ವಿಚಾರಣೆ ನಡೆಸಿದಾಗ ಒಂದೇ ಕುಟುಂಬದವರು ಸೇರಿಕೊಂಡು ಪ್ರ್ಯಾಂಕ್‌ ಮಾಡಿರುವುದು ಗೊತ್ತಾಗಿದೆ. ಯುಗಾದಿ ಮತ್ತು ರಂಜನ್ ಹಬ್ಬ ಒಟ್ಟಿಗೆ ಬಂದಿದೆ. ಹೀಗಾಗಿ ಬಸ್‌ನಲ್ಲಿ ಸೀಟ್ ಸಿಗಲ್ಲ ಅನ್ನೋ ಕಾರಣಕ್ಕೆ ವ್ಯಕ್ತಿಯನ್ನು ಪಾರ್ಸೆಲ್ ಮಾಡುವ ವಿಷಯ ಇಟ್ಟುಕೊಂಡು ವಿಡಿಯೋ ಮಾಡಲು ಈ ರೀತಿ ಮಾಡಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಪೊಲೀಸರು ಈ ರೀತಿ ಒಬ್ಬ ವ್ಯಕ್ತಿಯನ್ನ ಚೀಲದಲ್ಲಿ ತರೋದು ತಪ್ಪು ಅನ್ನೋದು ಗೊತ್ತಿಲ್ವಾ? ನಿಮ್ಮ ಹುಡುಗಾಟಕ್ಕೆ ಚೀಲದಲ್ಲಿದ್ದ ವ್ಯಕ್ತಿ ಉಸಿರುಗಟ್ಟಿ ಸತ್ತಿದ್ರೆ, ಇಲ್ಲ ಆರೋಗ್ಯ ಸಮಸ್ಯೆ ಆಗಿದ್ರೇ ಯಾರು ಹೊಣೆ? ಒಂದು ವೇಳೆ ಕೊರಿಯರ್ ಕಚೇರಿಯ ಸಿಬ್ಬಂದಿಗೆ ಏನಾದರೂ ಆಗಿದ್ರೇ ಯಾರು ಹೊಣೆ? ರೀಲ್ಸ್‌ಗಾಗಿ ಈ ರೀತಿ ಹುಡುಕಾಟ ಮಾಡೋದು ಸರಿನಾ? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:

ಈ ಫ್ಯಾಮಿಲಿ `ಮಾಂಕ್ ಪ್ರಾಂಕ್’ ಎಂಬ ಅಕೌಂಟ್‌ನ್ನು ಹೊಂದಿದ್ದು, ಗಂಡ, ಹೆಂಡತಿ, ಅತ್ತೆ, ಮಾವ ಮತ್ತು ಮೈದುನ ಸೇರಿಕೊಂಡು ರೀಲ್ಸ್, ಪ್ರ್ಯಾಂಕ್‌ ಮಾಡುತ್ತಿರುತ್ತಾರೆ. ಈ ಬಗ್ಗೆ ಕುಟುಂಬಸ್ಥರು ಮಾತನಾಡಿ, ನಾವು ಬಸ್ ರಶ್ ವಿಚಾರದಲ್ಲಿ ಪ್ರ್ಯಾಂಕ್‌ ಮಾಡಲು ಹೋಗಿದ್ವಿ, ಅದು ಈ ರೀತಿ ತಪ್ಪಾಗುತ್ತೆ ಅಂತಾ ಗೊತ್ತಿರಲಿಲ್ಲ. ನಾವು ತಪ್ಪು ಮಾಡಿದ್ದೇವೆ, ಅದರಿಂದ ಹೀಗೆ ಕಷ್ಟ ಆಗುತ್ತೆ ಅಂತಾ ಗೊತ್ತಿರಲಿಲ್ಲ. ಪೊಲೀಸರು ಕರೆಸಿ ಬುದ್ಧಿ ಹೇಳಿದ್ರು, ಇನ್ಮುಂದೆ ಈ ರೀತಿ ನಾವು ಮಾಡಲ್ಲ. ಯಾರು ರೀತಿ ನೀವು ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ

Vishwa News 24

Recent Posts

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

1 hour ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

1 hour ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

1 hour ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

5 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

5 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

5 hours ago