ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅತಿಹೆಚ್ಚು ಜನರ ಇಷ್ಟದ ವಿಶ್ವ ನಾಯಕ ಎಂದು ಗುರುತಿಸಲ್ಪಟ್ಟಿದ್ದಾರೆ. ಜನಪ್ರಿಯತೆಯಲ್ಲಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತಲೂ ತುಂಬಾ ಮುಂದಿದ್ದಾರೆ.
ಫೇಸ್‌ಬುಕ್‌ನಲ್ಲಿ ಮೋದಿ 4.32 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಬ್ರೂಸನ್ ಕೊನ್ ಮತ್ತು ವೋಲ್ಫ್ ಬಿಡುಗಡೆಗೊಳಿಸಿರುವ ‘ಫೇಸ್‌ಬುಕ್‌ನಲ್ಲಿ ವಿಶ್ವ ನಾಯಕರು’ ವರದಿಯ ಪ್ರಕಾರ, ಟ್ರಂಪ್‌ಗೆ 2.31 ಕೋಟಿ ಹಿಂಬಾಲಕರಿದ್ದು, ಮೋದಿಯವರ ನಂತರದ ಸ್ಥಾನದಲ್ಲಿದ್ದಾರೆ. 2017ರ ಜ.1ರಿಂದ ಇಲ್ಲಿ ವರೆಗೆ ಸುಮಾರು 650 ಪ್ರತಿಷ್ಠಿತ ಮಂದಿಯ ಫೇಸ್‌ಬುಕ್ ಪುಟದ ವಿಶ್ಲೇಷಣೆ ನಡೆಸಿ, ವರದಿ ಸಿದ್ಧಪಡಿಸಲಾಗಿದೆ. ಕಳೆದ 14 ತಿಂಗಳಿನಲ್ಲಿ ಟ್ರಂಪ್ ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು ಸಂವಾದ ನಡೆಸಿದ ಮುಖಂಡ.
ಟ್ರಂಪ್ ಒಟ್ಟಾರೆ 20 ಕೋಟಿ ಬಾರಿ ಫೇಸ್‌ಬುಕ್ ಮೂಲಕ ಸಂವಹನ ನಡೆಸಿದ್ದಾರೆ. ಈ ಅವಧಿಯಲ್ಲಿ ಮೋದಿ 11 ಕೋಟಿ ಬಾರಿ ಸಂವಹನ ನಡೆಸಿದ್ದಾರೆ. 2017ರಲ್ಲಿ 5 ಅತಿಹೆಚ್ಚು ಲೈಕ್ ಮಾಡಲಾದ ಚಿತ್ರಗಳಲ್ಲಿ ಎಲ್ಲ 5 ಚಿತ್ರಗಳೂ ಮೋದಿ ಪೋಸ್ಟ್ ಮಾಡಿದ್ದಾಗಿದೆ. ಅದರಲ್ಲಿ ಒಡಿಶಾದ ಲಿಂಗರಾಜ್ ದೇಗುಲ ಫೋಟೊ ಅತಿಹೆಚ್ಚು ಲೈಕ್ ಮಾಡಲ್ಪಟ್ಟಿದೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…