ಕಾಪು: ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಕೆ.ಎಮ್.ಸಿ ರಕ್ತ ನಿಧಿ ಮಣಿಪಾಲ ಮತ್ತು ಜಿಲ್ಲಾಡಳಿತ ಇವರ ನೇತೃತ್ವದಲ್ಲಿ ಸೌತ್ ಕೆನಾರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯ,ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಉಳಿಯಾರು,ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕರಂದಾಡಿ,ಜೆಸಿಐ ಕಾಪು,ಲಯನ್ಸ್ ಕ್ಲಬ್ ಇವರ ಜಂಟಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾಪು ವೀರಭದ್ರ ಸಭಾಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ “ಫೋಟೋಗ್ರಾಫರ್ಸ್ ಕೇವಲ ವೃತ್ತಿ ಧರ್ಮಕ್ಕೆ ಸೀಮಿತವಾಗದೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಹರ್ಷ ತಂದಿದೆ.ಆರೋಗ್ಯಕರ ಜೀವನಕ್ಕೆ ರಕ್ತದಾನ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ SKPA ಇದರ ಅವಿಭಜಿತ ದಕ ಉಡುಪಿಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಮಾತಾಡಿ” ರಕ್ತದಾನ ಮಾಡುವ ಮೊದಲು ಮಾಹಿತಿ ಪಡೆದು ರಕ್ತದಾನ ಮಾಡಬೇಕು, ಹಳ್ಳಿ ಪ್ರದೇಶದಲ್ಲಿ ಕೂಡ ರಕ್ತದಾನ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕಿದೆ,ಧಾರ್ಮಿಕ ಸಂಘಟನೆಗಳು ಪ್ರಸ್ತುತ ಕಾಲಘಟ್ಟದಲ್ಲಿ ರಕ್ತದಾನ ಶಿಬಿರ ಆಯೋಜಿಸಿಸುವುದು ಮತ್ತು ಭಾಗಿಯಾಗುವುದು ಹೊಸ ಬೆಳವಣಿಗೆ ಎಂದರು.
ಇದೇ ಸಂದರ್ಭದಲ್ಲಿ ಸುಮಾರು 46 ಬಾರಿ ರಕ್ತದಾನ ಮಾಡಿದ ಪ್ರವೀಣ್ ಪೂಜಾರಿ ಕುರ್ಕಾಲು ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಪ್ರವೀಣ್ ಪೂಜಾರಿ ಮಾತನಾಡುತ್ತಾ ” ಜಾತಿ ಧರ್ಮವನ್ನು ಮೀರಿದ ದಾನ ಇದ್ದರೆ ಅದು ರಕ್ತದಾನ ಮಾತ್ರ,ವಿಶ್ವದಲ್ಲಿ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ ಹಾಗಾಗಿ ಸದಾ ಉತ್ಪತ್ತಿಯಾಗುವ ರಕ್ತವನ್ನ ದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಲು ಅನುಕೂಲವಾಗುತ್ತೆ ಎಂದರು.
ಪತ್ರಕರ್ತ, ಜೆಸಿಐ ಪೂರ್ವ ವಲಯಧ್ಯಕ್ಷ ರಾಕೇಶ್ ಕುಂಜೂರು ನಿರೂಪಿಸಿದರು,ವೀರೆಂದ್ರ ಶಿರ್ವ ಸ್ವಾಗತಿಸಿದರು, ವರುಣ್ ಶೆಟ್ಟಿ ವಂದಿಸಿದರು
ವೀರೆಂದ್ರ ಎಸ್.ಪೂಜಾರಿ, ಸವಿತಾ ಪೂಜಾರ್ತಿ,ಹರೀಶ್ ಆಚಾರ್ಯ,ವಿನೋದ್ ಕಾಂಚನ್,ವರುಣ್ ಶೆಟ್ಟಿ,ಡಾ
ಫಾತಿಮ ಉಪಸ್ಥಿತಿತರಿದ್ದರು
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…