ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಫೋರ್ಬ್ಸ್‌ನ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಈ ವರ್ಷವೂ ಸತತ 12 ನೇ ಬಾರಿಗೆ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಈ ವರ್ಷ ಅವರ ಒಟ್ಟು ಆಸ್ತಿ ಮೌಲ್ಯ 51.4 ಶತಕೋಟಿ ಡಾಲರ್‌ಗೆ ಏರಿದೆ.
‘ಅಂಬಾನಿ ಅವರು ತಮ್ಮ ಆಸ್ತಿಗೆ 4.1 ಬಿಲಿಯನ್ ಡಾಲರ್ ಹೆಚ್ಚುವರಿ ಸೇರಿಸಿದ್ದಾರೆ. ತಮ್ಮ ರಿಲಯನ್ಸ್ ಇಂಡಸ್ಟ್ರೀಸ್‌ನ ಮೂರು ವರ್ಷದ ಹಳೆಯ ಟೆಲಿಕಾಂ ಘಟಕವಾದ ಜಿಯೋ, 340 ದಶಲಕ್ಷ ಚಂದಾದಾರರನ್ನು ಹೊಂದಿರುವ ಭಾರತದ ಅತಿದೊಡ್ಡ ಮೊಬೈಲ್ ಸೇವಾ ಕಂಪೆನಿಗಳಲ್ಲಿ ಒಂದಾಗಿದೆ.’ ಎಂದು ಫೋರ್ಬ್ಸ್ ಹೇಳಿದೆ.
ಮೂಲಸೌಕರ್ಯ ವಲಯದ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತಿನಲ್ಲೂ ಗಣನೀಯ ಹೆಚ್ಚಳವಾಗಿದೆ. 15.7 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಏರಿಕೆಯೊಂದಿಗೆ ಹಿಂದಿನ ವರ್ಷ ಎಂಟನೇ ಸ್ಥಾನದಲ್ಲಿದ್ದ ಅದಾನಿ, ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.