ಶಿರ್ವ: ಬಂಟಕಲ್ಲು- ಬಿ.ಸಿ.ರೋಡ್ ಮುಖ್ಯರಸ್ತೆಯ ಪಾಸ್ಕಲ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಮಂಗಳವಾರ ಮುಂಜಾನೆ ಕಾರೊಂದು ಹೈಟೆನ್ಶನ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಂಬ ಮುರಿದು ಹಾನಿ ಸಂಭವಿಸಿದೆ.
ಕಟಪಾಡಿ ಕಡೆಯಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಕ್ವಾಲೀಸ್ ಕಾರು ಎಡ ಭಾಗದಿಂದ ಬಲ ಭಾಗಕ್ಕೆ ಚಲಿಸಿ ಹೈಟೆನ್ಶನ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಿಂತಿದೆ.
ಢಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬದ ಬುಡ ಮತ್ತು ನಡುವೆ ಮುರಿದಿದ್ದು ಸುಮಾರು ಒಂದು ಮೀಟರ್ ಮುಂದಕ್ಕೆ ಹೋಗಿ ವಯರ್‌ನ ಆಧಾರದಲ್ಲಿ ವಾಲಿ ನಿಂತಿದೆ.
ಕಂಬದಲ್ಲಿದ್ದ ಗ್ರಾ.ಪಂ.ನ ವಿದ್ಯುತ್ ಮೀಟರ್ ಸಂಪೂರ್ಣ ಹಾನಿಗೊಂಡಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮೆಸ್ಕಾಂ ಸಿಬಂದಿ ಮಂಜು ತತ್‌ಕ್ಷಣ ಧಾವಿಸಿ ವಿದ್ಯುತ್ ಕಡಿತಗೊಳಿಸಿದ್ದಾರೆ.
ಕಾರಿಗೂ ಹಾನಿ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುತ್ಯಾರು ಮೂಲದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಉದ್ಯಾವರದಲ್ಲಿ ನೇಮವೊಂದಕ್ಕೆ ತೆರಳಿ ವಾಪಾಸಾಗುತ್ತಿದ್ದ ಕಾರು ಚಾಲಕನ ನಿದ್ದೆಯ ಮಂಪರಿನಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…
ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ .. ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026 ರೂಪಿಸುವ ಕುರಿತು ಸಭೆ…
ಟೋಲ್ ಪ್ಲಾಜಾಗೆ ಎಲ್‌ಪಿಜಿ ಟ್ಯಾಂಕರ್ ಡಿಕ್ಕಿ: ಐವರು ದುರ್ಮರಣ ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ ನವದೆಹಲಿ: ಉತ್ತರ ಪ್ರದೇಶದ ಕೌಶಂಬಿ…
ಕೊಪ್ಪಳ : ಅಂಜನಾದ್ರಿ ದೇಗುಲಕ್ಕೆ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ದಂಪತಿ ಭೇಟಿ ಕೊಪ್ಪಳ: ಖ್ಯಾತ ಕ್ರಿಕೆಟ್ ಆಟಗಾರ, ಟೀಂ…
ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ…