ಉಡುಪಿ

ಬಂಟಕಲ್ : ಪ್ರಗತಿಯತ್ತ ಒಂದು ಹೆಜ್ಜೆ- ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ -Vishwanews24

ಬಂಟಕಲ್ : ಪ್ರಗತಿಯತ್ತ ಒಂದು ಹೆಜ್ಜೆ- ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ -Vishwanews24

ಬಂಟಕಲ್, ಉಡುಪಿ ಸೋದೆ ಶ್ರೀ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದಿಂದ ಪ್ರವರ್ತಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ತನ್ನ ಶೈಕ್ಷಣಿಕ ಸೇವೆಯಲ್ಲಿ ಹನ್ನೊಂದು ವರ್ಷಗಳನ್ನು ಪೂರೈಸುತ್ತಿರುವ ಸುಸಂದರ್ಭದಲ್ಲಿ ಇನ್ನೊಂದು ಮೈಲಿಗಲ್ಲನ್ನು ದಾಟಿದೆ. ತಾಂತ್ರಿಕಕ್ಷೇತ್ರದ ನೂತನ ಮಜಲುಗಳಾದ ಕೃತಕ ಬುದ್ಧಿಮತ್ತೆ (Artificial Intelligence and Machine Learning)  ದತ್ತಾಂಶ ವಿಜ್ಞಾನ  (Artificial Intelligence and Data Science) ಎಂಬ ವಿಷಯಗಳಲ್ಲಿ ನೂತನ ಇಂಜಿನಿಯರಿoಗ್ಕೋರ್ಸ್ಗಳನ್ನು ೨೦೨೧-೨೨ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಅನುಮತಿ ದೊರಕಿದೆ. ಇದರೊಂದಿಗೆ ಈಗಾಗಲೇ ಇರುವ ಸಿವಿಲ್ ಇಂಜಿನಿಯರಿoಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿoಗ್, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿoಗ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿoಗ್ ವಿಭಾಗಗಳಲ್ಲೂ ಅಧ್ಯಯನಕ್ಕೆ ಅವಕಾಶ ಇದೆ. ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುವ, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಅವಕಾಶ ನೀಡಬಲ್ಲ ಈ ಕೋರ್ಸ್ಗಳಿಂದ ಪ್ರಾರಂಭಿಸುವುದರಿoದ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಜೀವನವನ್ನು ಸುಭದ್ರಗೊಳಿಸಲು ಸಹಕಾರಿಯಾಗಲಿದೆ. ಈ ಮೇಲಿನ ಕೋರ್ಸ್ಗಳಿಗೆ ಬೇಕಾದ ಸೂಕ್ತ ಅಧ್ಯಾಪಕ ವೃಂದ ಹಾಗೂ ತಾಂತ್ರಿಕ ಕ್ಷೇತ್ರಗಳ ತಂತ್ರಜ್ಞರ ಮಾರ್ಗದರ್ಶನವು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ.

ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಮಾರ್ಗದರ್ಶನ, ಪಠ್ಯ, ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯ ಸೌಲಭ್ಯ, ಉಡುಪಿ ಜಿಲ್ಲೆಯ ಹಲವಾರು ಪ್ರದೇಶಗಳಿಂದ ಕಾಲೇಜು ಬಸ್ಸಿನ ಸೌಲಭ್ಯ, ಉತ್ತಮ ಸುಸಜ್ಜಿತ ಗ್ರಂಥಾಲಯ ಹಾಗೂ ಪ್ರಯೋಗಾಲಯಗಳು, ಜ್ಞಾನ ಮತ್ತು ಕೌಶಲ್ಯ ಅಭಿವೃದ್ದಿಗೆ ಸಹಕಾರಿಯಾಗುವ ನುರಿತ ಪ್ರಾಧ್ಯಾಪಕ ವರ್ಗ ಹಾಗೂ ತರಬೇತುದಾರರು ಇಲ್ಲಿನ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧರಾಗಿದ್ದಾರೆ.

ಇದಲ್ಲದೆ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು, ೨೦೨೧-೨೨ರ ಸಾಲಿನಿಂದಲೇ ನ್ಯಾಕ್/ಎನ್.ಬಿ.ಎ. ಮಾನ್ಯತೆ ಪಡೆದಿರುವ ತಾಂತ್ರಿಕ ಕಾಲೇಜುಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ನಾಲ್ಕು ವರ್ಷಗಳ ಬಿ.ಎಸ್ಸಿ. ಪದವಿ ತರಗತಿಯನ್ನು ಪ್ರಾರಂಭಿಸುವ ತಯಾರಿ ನಡೆಸುತ್ತಿದ್ದು ನಮ್ಮ ವಿದ್ಯಾಲಯವೂ ಕೂಡಾ ಈ ಕೋರ್ಸ್ ನಡೆಸಲು ಅರ್ಹತೆ ಪಡೆದಿರುತ್ತದೆ. ತಾಂತ್ರಿಕ ವಿದ್ಯಾಲಯಗಳಲ್ಲಿ ನಡೆಸಲ್ಪಡುವ ಈ ಕೋರ್ಸ್ಗಳು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ತಂದುಕೊಡುವ ಜೊತೆಗೆ ಅಪಾರ ಜನಮನ್ನಣೆಯನ್ನು ಕೂಡಾ ಪಡೆಯಲಿದೆ ಎನ್ನುವುದು ನಮ್ಮ ಅಭಿಪ್ರಾಯ.

ಪ್ರಶಾಂತವಾದ ಗ್ರಾಮೀಣ ಪ್ರದೇಶದಲ್ಲಿ ಇದ್ದರೂ ಸಹಾ, ಈ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ನೀಡಬೇಕು ಎನ್ನುವುದು ಪೂಜ್ಯ ಶ್ರೀಪಾದರ ಕನಸು. ಈ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖವಾಗಿರುವ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರೊಡನೆ ವಿದ್ಯಾರ್ಥಿಗಳ ಸಂವಾದ, ಉತ್ತಮ ಮಟ್ಟದ ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳು, ಪಠ್ಯ, ಪಠ್ಯೇತರ ಹಾಗೂ ಪಠ್ಯಪೂರಕ ಚಟುವಟಿಕೆಗಳಿಗೆ ನಿರಂತರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಇವೇ ಮುಂತಾದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳಿಂದಾಗಿ, ರಾಷ್ಟ್ರೀಯ ಮೌಲ್ಯಾಂಕನ ಹಾಗೂ ಮಾನ್ಯತಾ ಸಂಸ್ಥೆ (ನ್ಯಾಕ್) ಇದರಿಂದ ಎ ಶ್ರೇಣಿಯನ್ನು ಸಂಸ್ಥೆಯು ಪಡೆದುಕೊಳ್ಳುವುದು ಸಾಧ್ಯವಾಗಿದೆ.

ವಿದ್ಯಾರ್ಥಿಗಳಿಗೆ ಅಗತ್ಯವಾದ ಕ್ಯಾಂಪಸ್ ಪ್ಲೇಸ್‌ಮೆಂಟ್ ಬಗ್ಗೆ ಗಮನ ಹರಿಸಲು, ತರಬೇತಿ ಮತ್ತು ನೇಮಕಾತಿ ವಿಭಾಗವು ಕಾಲೇಜಿನಲ್ಲಿ ಕ್ರಿಯಾಶೀಲವಾಗಿದ್ದು, ವಿದ್ಯಾರ್ಥಿಗಳಿಗೆ ನಿರಂತರವಾಗಿ ಉದ್ಯೋಗ ನೇಮಕಾತಿ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ನುರಿತ ತರಬೇತುದಾರರ ಮೂಲಕ ನಿಯಮಿತವಾಗಿ ತರಬೇತಿಯನ್ನು ನೀಡುತ್ತಿದೆ. ಈ ತರಬೇತಿಯನ್ನು ಸರಿಯಾಗಿ ಬಳಸಿಕೊಂಡ ವಿದ್ಯಾರ್ಥಿಗಳು ಹಲವಾರು ರಾಷ್ಟ್ರೀಯ/ಬಹುರಾಷ್ಟ್ರೀಯ ಕಂಪೆನಿಗಳ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗಳಲ್ಲಿ ಆಯ್ಕೆಯಾಗಿ ಉದ್ಯೋಗವನ್ನು ಪಡೆದುಕೊಂಡಿರುತ್ತಾರೆ. ಕೊರೋನಾದಿಂದಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಭವವಾಗಿರುವ ಅನಿಶ್ಚಿತತೆಯ ಹೊರತಾಗಿಯೂ ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ಸಂಸ್ಥೆಯ ೧೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ೩೫ಕ್ಕೂ ಮಿಕ್ಕಿ ಉತ್ತಮ ಕಂಪೆನಿಗಳಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಉದ್ಯೋಗವನ್ನು ಪಡೆದುಕೊಂಡಿರುವುದು ನಮ್ಮ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಅವರನ್ನು ಈ ಮಟ್ಟಕ್ಕೆ ತಯಾರಿಸಿದ ಅಧ್ಯಾಪಕರ ಪರಿಶ್ರಮಕ್ಕೆ ಸಂದ ಪ್ರತಿಫಲವಾಗಿದೆ.

ಶ್ರೇಷ್ಠ ವಿದ್ಯಾಸಂಸ್ಥೆಯಾಗುವ ಹಾದಿಯ ಕೆಲವು ಮೈಲಿಗಲ್ಲುಗಳು…… 

  • ನ್ಯಾಕ್ ಕಡೆಯಿಂದ ಎ ಶ್ರೇಣೀಯ ಮಾನ್ಯತೆ,
  • ರಾಷ್ಟç ಮಟ್ಟದ ಹಾಕಥಾನ್, ಪ್ರಾಜೆಕ್ಟ್ ಎಕ್ಸಿಬಿಶನ್ ಮುಂತಾದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುವಿಕೆ ಮತ್ತು ಪ್ರಶಸ್ತಿಗಳನ್ನು ಪಡೆದುಕೊಳ್ಳುವುದು
  • ಭಾರತ ಸರಕಾರದ ಇನ್ನೋವೇಶನ್ ಕೌನ್ಸಿಲ್‌ನಿಂದ ಸ್ವೋದ್ಯೋಗ ಪ್ರೋತ್ಸಾಹಿ ಕ್ರಮಗಳಿಗೆ ರಾಷ್ಟçಮಟ್ಟದಲ್ಲಿ ೪.೫ ರೇಟಿಂಗ್
  • ಐ.ಎಸ್.ಟಿ.ಇ. ಸಂಸ್ಥೆಯು ಕೊಡಮಾಡುವ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಸತತ ಐದು ವರ್ಷಗಳಲ್ಲಿ ನಮ್ಮ ವಿದ್ಯಾರ್ಥಿಗಳು ಪಡೆದಿರುವುದು
  • ಐ.ಎಸ್.ಟಿ.ಇ. ಪ್ರಾಧ್ಯಾಪಕರ ಘಟಕಕ್ಕೆ ರಾಷ್ಟçಮಟ್ಟದ ಉತ್ತಮ ಘಟಕ ಪ್ರಶಸ್ತಿ
  • ಮೆಕ್ಯಾನಿಕಲ್ ಇಂಜಿನೀಯರಿoಗ್ ವಿಭಾಗದಲ್ಲಿ ಕರ್ನಾಟಕ ಸರ್ಕಾರದ ವಾಣಿಜ್ಯ ಇಲಾಖೆಯ“ಕರ್ನಾಟಕ ತಾಂತ್ರಿಕ ಉನ್ನತೀಕರಣ ಕೌನ್ಸಿಲ್”ನಿಂದ ಪ್ರವರ್ತಿತವಾದ “ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ”ದ ಸ್ಥಾಪನೆ.
  • ಸಿವಿಲ್ ಇಂಜಿನಿಯರಿoಗ್ ವಿಭಾಗದಲ್ಲಿ ಸಂಪೂರ್ಣ ಕ್ರಿಯಾಶೀಲವಾಗಿರುವ ಅತ್ಯಾಧುನಿಕ ಟೆಸ್ಟಿಂಗ್ ಮತ್ತು ಕನ್‌ಸಲ್ಟೆನ್ಸಿ ಕೇಂದ್ರ.
  • ವಿದ್ಯಾರ್ಥಿಗಳಲ್ಲಿ ಸಂಶೋಧನಾ ಅಭಿರುಚಿಯನ್ನು ಉದ್ದೀಪನಗೊಳಿಸಲು, KSCST ಮತ್ತು VGST ಪ್ರಾಯೋಜಿತ ಸಮಾಜಮುಖಿ ಯೋಜನೆಗಳಿಗಾಗಿ ಅನುದಾನಗಳು.
  • ವಿದ್ಯಾರ್ಥಿ ಪ್ರತಿಭೆಗಳ ಅನಾವರಣಕ್ಕಾಗಿ ರಾಜ್ಯ ಮಟ್ಟದ, ಅಂತರ್ಕಾಲೇಜು ಮಟ್ಟದ ತಾಂತ್ರಿಕ ಹಾಗೂ ಸಾಂಸ್ಕೃತಿಕ ಹಬ್ಬಗಳು ಮತ್ತು ಪ್ರಾಜೆಕ್ಟ್ಗಳ ಪ್ರದರ್ಶನ ಮತ್ತು ಸ್ಪರ್ಧೆಗಳ ಆಯೋಜನೆ.
  • ISTE ವಿದ್ಯಾರ್ಥಿ ಘಟಕ, ರೋರ‍್ಯಾಕ್ಟ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವರೆಡ್‌ಕ್ರಾಸ್ ಘಟಕಗಳ ಆಶ್ರಯದಲ್ಲಿ ವಿವಿಧ ತಾಂತ್ರಿಕ/ಸಮಾಜ ಸೇವಾ ಕಾರ್ಯಕ್ರಮಗಳ ನಿಯಮಿತವಾದ ಆಯೋಜನೆ.

SMVITM ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ನೀಡುವ ಜೊತೆಗೆ ವಿದ್ಯಾರ್ಥಿಗಳಲ್ಲಿ ನಾವೀನ್ಯವನ್ನು ಉತ್ತೇಜಿಸಿ, ನಾಯಕತ್ವ ಮತ್ತು ಸ್ವೋದ್ಯೋಗದ ಚಿಂತನೆಯನ್ನು ಅಭಿವೃದ್ಧಿಪಡಿಸಿ, ಅವರ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ. ತನ್ಮೂಲಕ ಈ ವಿದ್ಯಾರ್ಥಿಗಳು ದೇಶದ ಉಜ್ವಲ ಭವಿಷ್ಯಕ್ಕೆ ಕಾರಣಿಭೂತರಾಗುವಂತೆ ಮಾಡುವಲ್ಲಿ ಬಹು ಆಯಾಮದ ಮಹತ್ವದ ಹೆಜ್ಜೆಗಳನ್ನು ಇರಿಸುತ್ತಾ ವಿಶ್ವ ಮಟ್ಟದ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲು ಉದ್ದೇಶಿಸಿದೆ. ಸಂಸ್ಥೆಯ ಬಗ್ಗೆ ಆಸಕ್ತರು ಹೆಚ್ಚಿನ ಮಾಹಿತಿಗಳನ್ನು ಸಂಸ್ಥೆಯ ಅಂತರ್ಜಾಲ ತಾಣ www.sode-edu.in ಸಂದರ್ಶಿಸುವ ಮೂಲಕ ಅಥವಾ ದೂರವಾಣಿ ಸಂಖ್ಯೆ +೯೧ ೭೪೮೩೦೩೧೧೯೯ಅಥವಾ ೭೪೮೩೦೩೨೨೦೦, ಕರೆಮಾಡುವ ಮೂಲಕ ಅಥವಾ ಇ-ಮೈಲ್ ವಿಳಾಸ info@sode-edu.in ಕ್ಕೆ ವಿಚಾರಣೆಯನ್ನು ಕಳುಹಿಸುವ ಮೂಲಕ ಪಡೆದುಕೊಳ್ಳಬಹುದು.

Vishwa News 24

Recent Posts

ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ – vishwanews24

ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ…

6 minutes ago

ಬೆಂಗಳೂರು: ಡೇ ಕೇರ್‌ ಸೆಂಟರ್‌ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ – vishwanews24

ಬೆಂಗಳೂರು: ಡೇ ಕೇರ್‌ ಸೆಂಟರ್‌ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ ಬೆಂಗಳೂರು: ಇಲ್ಲಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಡೇಕೇರ್ ಸೆಂಟರ್…

14 minutes ago

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ – vishwanews24

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ…

48 minutes ago

ಮುಂಬಯಿ : ಮುಂಗಾರು ಮಳೆ ಅಬ್ಬರ; ಜನಜೀವನ  ಅಸ್ತವ್ಯಸ್ತ: ಆರೆಂಜ್‌ ಅಲರ್ಟ್‌ ಘೋಷಣೆ – vishwanews24

ಮುಂಬಯಿ : ಮುಂಗಾರು ಮಳೆ ಅಬ್ಬರ; ಜನಜೀವನ  ಅಸ್ತವ್ಯಸ್ತ: ಆರೆಂಜ್‌ ಅಲರ್ಟ್‌ ಘೋಷಣೆ ಮುಂಬಯಿ: ಮುಂಬಯಿಯಲ್ಲಿ ಮುಂಗಾರು ಮಳೆಯ ಅಬ್ಬರ…

1 hour ago

ಉಡುಪಿ: ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡುವಂತೆ ಕೆಥೋಲಿಕ್ ಸಭಾದಿಂದ ಸಿಎಂಗೆ ಮನವಿ – vishwanews24

ಉಡುಪಿ: ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡುವಂತೆ ಕೆಥೋಲಿಕ್ ಸಭಾದಿಂದ ಸಿಎಂಗೆ ಮನವಿ ಉಡುಪಿ: ಕಥೊಲಿಕ್ ಸಭಾ ಉಡುಪಿ ಹಾಗೂ…

2 hours ago

ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ – vishwanews24

ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ ಉಡುಪಿ:…

2 hours ago