ಉಡುಪಿ

ಬಂಟರ ಸಂಘ ಪಡುಬಿದ್ರಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪಡುಬಿದ್ರಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಸಂಪನ್ನ : vishwanews24

ಬಂಟರ ಸಂಘ ಪಡುಬಿದ್ರಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪಡುಬಿದ್ರಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಸಂಪನ್ನ : vishwanews24

ಬಂಟಾಶ್ರಯ ಕುಟುಂಬ ಸೇವಾಶ್ರಮ ಅಭಿವೃದ್ಧಿಗೆ ಅದಾನಿ ಸಂಸ್ಥೆ ಸಹಕಾರ ಮಾಡಲಿದೆ : ಕಿಶೋರ್ ಆಳ್ವಾ

ಭೂಮಿಗೆ ಬಂದ ಮೇಲೆ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಇರಬೇಕು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ

   ಕಾಪು: ಬಂಟರ ಸಂಘ ಪಡುಬಿದ್ರಿ ಬಂಟ್ ವೆಲ್ಫೇ ಟ್ರಸ್ಟ್ ಪಡುಬಿದ್ರಿ ಇವರ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಸಿರಿಮುಡಿ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿಗೆ ಚಾಲನೆ ಬಂಟಾಶ್ರಯ ಕುಟುಂಬ ಸೇವಾ ಶ್ರಮದ ಅನಾವರಣ ಕಾರ್ಯಕ್ರಮ ಪಡುಬಿದ್ರಿ ಬಂಟರ ಭವನದ ಆಶಾ ಪ್ರಕಾಶ್ ಶೆಟ್ಟಿ ಸಭಾಭವನದಲ್ಲಿ ಆದಿತ್ಯವಾರ ನಡೆಯಿತು.

ಕಾರ್ಯಕ್ರಮವನ್ನು ಅದಾನಿ ಸಮೂಹ ಸಂಸ್ಥೆಗಳು ದಕ್ಷಿಣ ಭಾರತದ ಅಧ್ಯಕ್ಷರಾದ ಕಿಶೋರ್ ಆಳ್ವ ಉದ್ಘಾಟಿಸಿ ಮಾತನಾಡಿ ಇವತ್ತು ನಾವು ಬಂಟ ಸಮಾಜದಲ್ಲಿ ಇಷ್ಟೊಂದು ದಾನಿಗಳನ್ನು ಸೇರಿಸಿಕೊಂಡು ಬಡ ಬಂಟರಿಗೆ ಸಹಕಾರ ಮಾಡುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ನಾವು ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯವಾಗಿ ಸಾಮಾಜಿಕವಾಗಿ ಬೆಳೆಯಬೇಕು ಆ ಮುಖೇನವಾಗಿ ನಮ್ಮ ಸಮಾಜವನ್ನು ಉಳಿದ ಸಮಾಜಗಳಿಗೆ ಮಾದರಿಯಾಗುವಂತೆ ಬದುಕಬೇಕು ಎಂದು ಅವರು ಹೇಳಿದರು. ಅದಾನಿ ಸಮೂಹ ಸಂಸ್ಥೆಗಳು ಭಾರತ ದೇಶದ ವಿವಿಧರೆ ಸಿಎಸ್ಆರ್ ಅನುದಾನವನ್ನು ನೀಡುವ ಮುಖೇನ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಅದರ ಜೊತೆಗೆ ಪಡುಬಿದ್ರಿ ಭಾಗದಲ್ಲೂ ಕೂಡ ಆದಾನಿ ಸಿಎಸ್ಆರ್ ಫಂಡ್ ನೀಡುವ ಮುಖೇನ ತನ್ನದೇ ಆದ ಕೊಡುಗೆಯನ್ನು ಈ ಸಮಾಜಕ್ಕೆ ನೀಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಪುವಿಗೆ ನೂತನವಾಗಿ ಆಯ್ಕೆಯಾದ ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿ ದಾನಿಗಳಿಂದ ಪಡೆದು ಬಡವರಿಗೆ ಹಂಚುವ ಕೆಲಸ ನಿಜವಾಗಿಯೂ ಇವತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಡೆಯುತ್ತಿದೆ ಅತ್ಯಂತ ಸಂತಸವಾಗಿದ್ದು ಸಮಾಜದ ಏಳಿಗೆಯಲ್ಲಿ ಪ್ರತಿಯೊಬ್ಬರೂ ಕೂಡ ಸಹಕಾರ ಮಾಡಬೇಕು ವಿದ್ಯಾರ್ಥಿ ವೇತನ ನೀಡುವ ಮುಖ್ಯನ ನಮ್ಮ ಊರಿನ ಮಕ್ಕಳಿಗೆ ಅವರ ಶೈಕ್ಷಣಿಕ ಜೀವನದ ಅಭಿವೃದ್ಧಿಗಾಗಿ ಸಹಕರಿಸಬೇಕು ಮಾತ್ರವಲ್ಲದೆ ಈ ಭೂಮಿಯಲ್ಲಿ ಸೃಷ್ಟಿಯಾದ ನಾವೆಲ್ಲರೂ ಅದುವೇ ನಿಜವಾದ ಮಾನವ ಧರ್ಮ ಎಂದರು.

 

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಶಕ್ತರಿಗೆ ನೆರವು ವಿತರಣೆ ಮಾಡಿದರು, ಹೇರಂಭಾ      ಇಂಡಸ್ಟ್ರೀಸ್ ಮುಂಬೈ ಇದರ ಮುಖ್ಯಸ್ಥರಾದ ಕನ್ಯಾನ ಸದಾಶಿವ ಶೆಟ್ಟಿ ಅವರು ಸಿರಿಮುಡಿ ಕ್ರೆಡಿಟ್ ಸೊಸೈಟಿಗೆ ಚಾಲನೆ ನೀಡಿದರು, ಕೆ.ಎಂ ಶೆಟ್ಟಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿದರು, ಮಾತೃ ಭೂಮಿ ಕಾರ್ಪೊರೇಟರ್ ಸೊಸೈಟಿ ಮುಂಬೈ ಇದರ ಕಾರ್ಯದರ್ಶಿ ಪ್ರವೀಣ್ ಬೋಜ ಶೆಟ್ಟಿ ಅವರು ಬಂಟಾಶ್ರಯ ಕುಟುಂಬ ಸೇವಾಶ್ರಮದ ನೀಲಿನಕಾಶೆ ಅನಾವರಣ ಮಾಡಿದರು ರಾಜೇಂದ್ರ ಶೆಟ್ಟಿ ಸಾಧಕರಿಗೆ ಗೌರವಾರ್ಪಣೆ ಮಾಡಿದರು.

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ” ಇಂದು ಬಂಟರ ಸಂಘ ಪಡುಬಿದ್ರಿ ತನ್ನದೇ ಆದ ಇತಿಹಾಸದ ದಾಪುಗಾಲನ್ನ ಇಡುತ್ತಿದೆ. ಇದಕ್ಕೆ ಮೂಲ ಕಾರಣ ಬಂಟ ಸಮಾಜದ ದಾನಿಗಳು ಅವರಿಂದ ಸಂಗ್ರಹಿಸಿ ಇಷ್ಟೊಂದು ದೊಡ್ಡ ಮೊತ್ತದ ಸಹಾಯಧನ ವಿತರಣೆ ಮತ್ತು ಸಾಮಾಜಿಕ ಕಾರ್ಯಕ್ರಮ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯುತ್ತಿದೆ ಮುಂದಿನ ದಿನದಲ್ಲಿ ನಡೆಯುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಗೂ ಕೂಡ ಪಡುಬಿದ್ರಿ ಬಂಟರ ಸಂಘ ಸಾಕ್ಷಿ ಆಗಲಿದೆ ಎಲ್ಲಾ ಬಂಟ ಸಮಾಜದ ದಾನಿಗಳಿಂದ ಸಂಗ್ರಹಿಸಿ ಬಡ ಬಂಟ ಸಮಾಜದ ಆಶಕ್ತರಿಗೆ ನೀಡುವ ಮುಖೇನ ಜನಸೇವೆಯ ಜನಾರ್ದನ ಸೇವೆ ಎಂಬ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬೈ ಇದರ ಅಧ್ಯಕ್ಷರಾದ ಎರ್ಮಾಳು ಚಂದ್ರಹಾಸ ಕೆ ಶೆಟ್ಟಿ, ಬಾಂಬೆ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಸಿರಿಮುಡಿ ದತ್ತಿನಿ ಬಂಟರ ಸಂಘ ಪಡುಬಿದ್ರಿ ಇದರ ಸ್ಥಾಪಕ ಅಧ್ಯಕ್ಷರಾದ ಸಂತೂರ್ ಭಾಸ್ಕರ್ ಶೆಟ್ಟಿ ,ಬಂಟ್ಸ್ ವೆಲ್ಫೇರ್ ಟ್ರಸ್ಟ್ ರಿಜಿಸ್ಟರ್ ಪಡುಬಿದ್ರಿ ಇದರ ಅಧ್ಯಕ್ಷರಾದ ಎರ್ಮಾಳು ಶಶಿಧರ ಶೆಟ್ಟಿ ಬಂಟರ ಸಂಘ ಪಡುಬಿದ್ರಿ ಇದರ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ಕೋಶ ಅಧಿ ಯುವ ಬಂಟರ ಸಂಘದ ಮುಖ್ಯಸ್ಥರಾದ ನವೀನ್ ಶೆಟ್ಟಿ ಪಡುಬಿದ್ರಿ ಮಹಿಳಾ ವಿಭಾಗದ ಅಧ್ಯಕ್ಷರಾದ ಜ್ಯೋತಿ ಶೆಡ್ತಿ, ಮೊದಲಾದವರು ಉಪಸ್ಥಿತರಿದ್ದರು.
ಬಂಟರ ಸಂಘದ ಸದಸ್ಯರಿಂದ ಭಾರತ ದರ್ಶನ ಹಾಗೂ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನೆರವೇರಿತು.

Vishwa News 24

Recent Posts

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ…

38 minutes ago

ಆಟೋ ಎಲ್‌ಪಿಜಿ ದರ 10 ರೂ. ಇಳಿಕೆ – vishwanews24

ಆಟೋ ಚಾಲಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ದರ 10 ರೂ. ಇಳಿಕೆ ಬೆಂಗಳೂರು: ನಿರಂತರ ಎಲ್‌ಪಿಜಿ  ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ…

1 hour ago

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ – ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ – vishwanews24

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ - ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ ಬೆಂಗಳೂರು:…

1 hour ago

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ –  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ – vishwanews24

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ -  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ ಮಂಗಳೂರು: ಬೈಕಂಪಾಡಿ…

2 hours ago

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ – vishwanews24

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ…

3 hours ago

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

23 hours ago