ಬಂಟ್ವಾಳ : ಗಣೇಶೋತ್ಸವಕ್ಕೆ ಹಾಕಿದ್ದ ಬ್ಯಾನರ್ ಹರಿದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಓರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಫರಂಗಿಪೇಟೆಯ ನಿವಾಸಿಯಾದ ಹೈದರ್ ಎಂದು ಗುರುತಿಸಲಾಗಿದೆ.
ಬಂಟ್ವಾಳ ಫರಂಗಿಪೇಟೆ ನಿವಾಸಿ ಚಂದ್ರಶೇಖರ್ ಆಳ್ವ ಎನ್ನುವವರು ಪರಂಗಿಪೇಟೆ ಸೇವಾಂಜಲಿ ಭವನದಲ್ಲಿ ನಡೆಯುತ್ತಿರುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರನ್ನು, ಅಗತ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದು, ದಿನಾಂಕ: 25.08.2025 ರಂದು ರೂ 3,500/- ವೆಚ್ಚದಲ್ಲಿ ಪರಂಗಿಪೇಟೆಯ ಕುಂಪಣ ಮಜಲು ಕ್ರಾಸ್ ಬಳಿ ಬ್ಯಾನರ್ ಅಳವಡಿಸಿರುತ್ತಾರೆ.
ಸದ್ರಿ ಬ್ಯಾನರನ್ನು ದಿನಾಂಕ 27.08.2025 ರಂದು ರಾತ್ರಿ ವೇಳೆ, ಫರಂಗಿಪೇಟೆಯ ನಿವಾಸಿಯಾದ ಹೈದರ್ ಎಂಬಾತನು ಹರಿದು ಹಾಕಿದ್ದಾನೆ. ಈ ಕೃತ್ಯದಿಂದಾಗಿ ಸಾರ್ವಜನಿಕರು ಪ್ರಚೋದನೆಗೊಂಡು ಗಲಭೆ ಏಳಬಹುದೆಂದು ತಿಳಿದಿದ್ದರೂ ಕೂಡಾ, ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿ ಸಾರ್ವಜನಿಕ ವಲಯದಲ್ಲಿ ಭೀತಿಯನ್ನುಂಟು ಮಾಡಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:129/2025, ಕಲಂ: 299,192,353 (1), (b),57,324(4) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಆರೋಪಿ ಹೈದರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ವೀಕೆಂಡ್‌ನಲ್ಲಿ ಧರ್ಮಸ್ಥಳ ಹಾಗೂ ಕುಕ್ಕೆಗೆ ಹೋಗುವವರಿಗೆ ಗುಡ್‌ನ್ಯೂಸ್: ವಿಶೇಷ ದರ್ಶನದೊಂದಿಗೆ KSTDC ಹೊಸ ಟೂರ್ ಪ್ಯಾಕೇಜ್ ಬೆಂಗಳೂರು: ಕರಾವಳಿ ಕರ್ನಾಟಕದ…
ಸಾಲವಾಗಿ ನೀಡಿದ್ದ ಹಣ ಮರುಪಾವತಿಯಾಗದೇ ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಕಾರವಾರ: ಕಾಲೇಜು ಶುಲ್ಕ ಕಟ್ಟಲು ತಂದೆ…
ಉಡುಪಿ: ತುಳು ಅಭಿವೃದ್ಧಿ ನಿಗಮ ಸ್ಥಾಪನೆ, ತುಳು ಭವನ ನಿರ್ಮಾಣಕ್ಕೆ ಸಿಎಂಗೆ ಉದಯ್ ಶೆಟ್ಟಿ ಮುನಿಯಾಲ್ ಮನವಿ ಉಡುಪಿ: ಪಂಚ ದ್ರಾವಿಡ…
ಒಟ್ಟಾಗಿ ನಿಂತು ವಿರೋಧಿಸಿದರೆ ಬಿಜೆಪಿಯನ್ನು ಸೋಲಿಸುವುದು ಸುಲಭ .. ಬಿಜೆಪಿ ನಡೆಸುತ್ತಿರುವ ಪ್ರಚಾರಕ್ಕೆ ಪಕ್ಷದ ನಾಯಕರು ಬಲಿಯಾಗಬಾರದು :ರಾಹುಲ್ ಗಾಂಧಿ…
ಬೆಂಗಳೂರು ಅಭಿವೃದ್ಧಿ ಖಾತೆ ವಹಿಸಿಕೊಳ್ಳದ ಕೃಷ್ಣ ಬೈರೇಗೌಡ ; ಖಾತೆ ವಿಚಾರಕ್ಕೆ ಸ್ಪಷ್ಟತೆ ಬೇಕು ಎಂದ ಸಚಿವ ಬೆಂಗಳೂರು: ಪ್ರಮಾಣವಚನ…
ಪೆಟ್ರೋಲ್, ಗ್ಯಾಸ್ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್ : ಗಗನಕ್ಕೇರಿದ ಅಕ್ಕಿ ಬೆಲೆ ; ಕೆಜಿಗೆ 10 ರಿಂದ 20…