Featured

ಬಂಟ್ವಾಳ: ಗೂಂಡಾ,ಕೋಮುವಾದದ ರಾಜಕೀಯ ಇನ್ನು ಮುಂದೆ ನಡೆಯಲು ಅವಕಾಶವಿಲ್ಲ: ಉಳಿಪಾಡಿ ರಾಜೇಶ್ ನಾಯ್ಕ್

ಮಂಗಳೂರು ಉಭಯ ಜಿಲ್ಲೆಗಳ ಬಿಜೆಪಿ ಶಾಸಕರು ಅಭಿವೃದ್ದಿ,ಉತ್ಥಾನ ಮತ್ತುಸಾಮರಸ್ಯಕ್ಕೆ ಒತ್ತುನೀಡಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.  ಮಂಗಳವಾರ  ಬ್ರಹ್ಮರಕೊಟ್ಲುವಿನಲ್ಲಿರುವ  ಬಂಟವಾಳದ ಬಂಟರಭವನದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ
ಹಾಗೂ ಪೇಜ್ ಪ್ರಮುಖರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು,ಬಂಟ್ವಾಳ ಸೇರಿದಂತೆ ಉಭಯ ಜಿಲ್ಲೆಯಲ್ಲಿ ಬಿಜೆಪಿ ಗೆಲುವಿಗೆ ಕಾರ್ಯಕರ್ತರ ಮತ್ತು ಪೇಜ್ ಪ್ರಮುಖರ ಅವಿರತ ಶ್ರಮ ಅಭಿನಂದನೀಯವಾಗಿದೆ ಎಂದರು.         

ಜಿಲ್ಲೆಯಲ್ಲಿ ಬಿಜೆಪಿಯ ಗೆಲುವಿನಿಂದ ವಿಲವಿಲ ಒದ್ದಾಡುತ್ತಿರುವ ಕಾಂಗ್ರೆಸ್ ಮತ್ತೆ ಜಿಲ್ಲೆಯ ವಿವಿದೆಡೆ ಗಲಭೆ ಸೃಷ್ಟಿಸಲು ಹುನ್ನಾರನಡೆಸುತ್ತಿದ್ದು,ದ್ವೇಷದ ರಾಜಕೀಯ ಮುಂದವರಿಸಿದಲ್ಲಿ ಮತದಾರರು ಕಾಂಗ್ರೆಸ್ ನ್ನು ಸಮುದ್ರಕ್ಕೆ ಎಸೆಯು ವುದು ನಿಶ್ಚತ ಎಂದರು.

 ಸಜ್ಜನಿಕ ಹಾಗೂ ಆದರ್ಶದ ರಾಜಕಾರಣಿಯಾಗಿರುವ ರಾಜೇಶ್ ನಾಯ್ಕ್ ರನ್ನು ಜನತೆ ಆಯ್ಕೆ
ಮಾಡಿದ್ದಾರೆ.  ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ಮುಕ್ತ ಬಂಟ್ವಾಳವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ.ಪೇಜ್ ಪ್ರಮುಖರು ತಮ್ಮಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.ಹಿಂದಿನ ಎಲ್ಲಾ ಇತಿಹಾಸ ಮೀರಿ ಈ ಬಾರಿಯಗೆಲುವಿನ ಸಾಧನೆ ಆಗಿದೆ ಎಂದರು.     

*ಡೈವರ್ಸ್ ನತ್ತ ಸರಕಾರ* :

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಡೈವಸ್೯ ಹಂತಕ್ಕೆ ಬಂದಿದ್ದು,ಮೂರು ತಿಂಗಳ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಭವಿಷ್ಯ ನುಡಿದರು.                 ಜಿಲ್ಲೆಯ ಅಭಿವೃದ್ದಿಗೆ ಪ್ರದಾನಿ
ನರೇಂದ್ರಮೋದಿಯವರು 15 ಸಾವಿರ ಕೋಟಿ ರೂ .ಅನುದಾನ ಮಂಜೂರಾಗಿದೆ.ಇದರಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ 1375 ಕೋ.ರೂ.ಅನುದಾನದಲ್ಲಿ ಅಭಿವೃದ್ದಿ ಕಾರ್ಯ ನಡೆಸಲಾಗಿದೆ ಎಂದರು.

*ಹಿಂದುಗಳ ಸ್ವಾಭಿಮಾನ ಗೆದ್ದಿದೆ*  :             

ಜಿಲ್ಲೆಯಲ್ಲಿ ಬಿಜೆಪಿಯನ್ನುಹಿಂದುತ್ವ ಗೆಲ್ಲಿಸಿದೆ.ಮುಂದಿನ ಚುನಾವಣೆಯಲ್ಲೂ ಹಿಂದತ್ವದ ಆಧಾರದಲ್ಲಿಯೇ ಗೆಲ್ಲಲಿದೆ.ಬಂಟ್ವಾಳದಲ್ಲಿ ಹಿಂದುಗಳ ಸ್ವಾಭಿಮಾನ ಗೆದ್ದಿದೆ.ರಾಮನನ್ನು ಗೆಲ್ಲಿಸಿದ ಮತದಾರರಿಗೆ ಅಭಿನಂದನೆ ಎಂದು ವಿಧಾನಸಭೆಯ ಪ್ರತಿಪಕ್ಷದ ಮುಖ್ಯಸಚೇತಕ ಸುನೀಲ್ ಕುಮಾರ್
ಕಾರ್ಕಳ ಹೇಳಿದರು. ಅಲ್ಲಾಹುವಿನ ಕೃಪೆಯಲ್ಲಿ ಗೆದ್ದಿರುವುದಾಗಿ ಹೇಳಿದ ರಮಾನಾಥ ರೈ ತನಗೆ ನ್ಯಾಯ ಬೇಕಾದಾಗ ಹಿಂದೂ ದೇವರ ಮೋರೆ ಹೋಗಿದ್ದಾರೆ ಎಂದ ಅವರು  ನೆಮ್ಮದಿಯ ವಾತಾವರಣ ಬಂಟ್ವಾಳದಲ್ಲಿ ಸೃಷ್ಟಿಯಾಗಬೇಕಾಗಿದೆ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವ
ಬಂಟ್ವಾಳದಲ್ಲಿ ಶಾಂತಿ ,ನೆಮ್ಮದಿ ವಾತಾವರಣ ಸೃಷ್ಟಿಸಲು ಕಾರ್ಯಕರ್ತರು ಸಹಕರಿಸಬೇಕುಎಂದರು.  ಮುಖ್ಯಮಂತ್ರಿ ಕುಮಾರಸ್ವಾಮಿಯವರು   ತನ್ನ ಸ್ಥಾನ ಭದ್ರ ಪಡಿಸಲು  ಭ್ರಷ್ಟಚಾರವನ್ನು ಪರೋಕ್ಷವಾಗಿ ಪೋಷಿಸುತ್ತಿದ್ದಾರೆ ಎಂದು ಟೀಕಿಸಿದರು. 

                 *ಧಮ್ ಇದ್ದರೆ ಎಂಪಿಗೆ ನಿಲ್ಲಿ*

ಸಾಮಾನ್ಯ ಕಾರ್ಯಕರ್ತರೊಬ್ಬರನ್ನುನಿಲ್ಲಿಸಿ ಚುನಾವಣೆ ಗೆಲ್ಲುವ ಮೂಲಕ ಮಾಜಿ ಸಚಿವ ರಮಾನಾಥ ರೈ ಅವರ ಸವಾಲನ್ನುಗೆದ್ದಿದ್ದೆವೆ.ಧಮ್ ಇದ್ದರೆ ರಮಾನಾಥ ರೈ ಅವರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲಿ,ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ವಿಶ್ವಾಸ ವ್ಯಕ್ತಪಡಿಸಿದರು.  ಬಿಜೆಪಿ ದೇಶದಹೃದಯವಿದ್ದಂತೆ ಅದು ಸ್ತಬ್ದಗೊಂಡರೆ ದೇಶವೆ ಸ್ಥಬ್ದವಾದಂತೆ,ಮುಂದಿನ ಲೋಕಸಭಾಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮೋದಿಯ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.

ಕ್ರಿಮಿನಲ್ ಚಟುವಟಿಕೆಗೆಆಸ್ಪದವಿಲ್ಲ* :

ಆಡಳಿತದಲ್ಲಿ ರಾಜಧರ್ಮ ಪಾಲಿಸುವುದರ ಜತೆಗೆ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಬಂಟ್ವಾಳ ಕ್ಷೇತ್ರದಲ್ಲಿ ಕ್ರಿಮಿನಲ್ಚಟುವಟಿಕೆಗೆ ಅಸ್ಪದನೀಡುವುದಿಲ್ಲ ಎಂದು ಶಾಸಕ ರಾಜೇಶ್ ನಾಯ್ಕ್ ಈ ಸಂದರ್ಭಲ್ಲಿ ಖಡಕ್ ಸಂದೇಶ ರವಾನಿಸಿದರು.  ಈಗಾಗಲೇ ತನಗೆ ಕ್ಷೇತ್ರದಾಧ್ಯಂತ ಕಾರ್ಯಕರ್ತರು,ಅಭಿಮಾನಿಗಳು ತೊಡಿಸಿದ ಪೇಟ,ಹಾರ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ.ಮುಂದಿನ ದಿನದಲ್ಲೂ ಕಾರ್ಯಕರ್ತರಜತೆಯಲ್ಲಿಯೇ ಇದ್ದು,ಅವರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ತಿಳಿಸಿದ ಅವರು,ತನ್ನಗೆಲುವು ಕಾರ್ಯಕರ್ತರಿಗೆ ಸಂದ ಗೆಲುವಾಗಿದೆ ಎಂದರು.

ಈ ಸಂದರ್ಭದಲ್ಲಿ ನೂತನ ಶಾಸಕರನ್ನು ಅಭಿನಂದಿಸಲಾಯಿತು. ಶಾಸಕರಾದ . ಲಾಲಾಜಿ ಆರ್ ಮೆಂಡನ್  ಸಂಜೀವಮಠಂದೂರು,ಎಸ್.ಅಂಗಾರ,ವಿಪಸದಸ್ಯ ಕೋಟ ಶ್ರೀನಿವಾಸ ಪೂಜಾರಿ,ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಬಿಜೆಪಿ  ಮಾಜಿ ಅಧ್ಯಕ್ಷಪ್ರತಾಪಸಿಂಹ ನಾಯಕ್ ಬೆಳ್ತಂಗಡಿ, ಸಭೆಯನ್ನುದ್ದೇಶಿಸಿ ಮಾತನಾಡಿ ಕಾರ್ಯಕರ್ತರು ಹಾಗೂ
ಪೇಜ್ ಪ್ರಮುಖರನ್ನು ಅಭಿನಂದಿಸಿ ಮುಂದಿನ ಲೋಕಸಭಾ ಚುನಾವಣೆಗೂ ಸಜ್ಜಾಗುವಂತೆ ಕರೆನೀಡಿದರು.

ಶಾಸಕರಾದ  ವೇದವ್ಯಾಸ ಕಾಮತ್,ಡಾ.ಭರತ್ ಶೆಟ್ಟಿ, ಮಾಜಿಶಾಸಕರಾದ ರುಕ್ಮಯ ಪೂಜಾರಿ,ಪದ್ಮನಾಭ ಕೊಟ್ಟಾರಿ,ಮಲ್ಲಿಕಾ ಪ್ರಸಾದ್ ಭಂಡಾರಿ, ಜಿಪಂ
ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಸದಸ್ಯರಾದ ರವೀಂದ್ರ ಕಂಬಳಿ,ತುಂಗಪ್ಪಬಂಗೇರ,ಕಮಾಲಾಕ್ಷಿ ಪೂಜಾರ್ತಿ,ಧನಲಕ್ಷ್ಮಿ ಗಟ್ಟಿ,,ರಾಜ್ಯ ಸಹ ವಕ್ತಾರೆ ಸುಲೋಚನಜಿ.ಕೆ.ಭಟ್, ಡಾ.ಪ್ರಸಾದ್ ಭಂಡಾರಿ ಪುತ್ತೂರು,ಪಕ್ಷದ ಪ್ರಮುಖರಾದ  ಚಂದ್ರಶೇಖರ
ಉಚ್ಚಿಲ್, ಜಿ.ಆನಂದ , ಗೋವಿಂದ ಪ್ರಭು,ದಿನೇಶ್      ಅಮ್ಟೂರು,ಸತೀಶ್ ಕುಮೇರಡ್ಕ, ಕ್ಯಾ.ಬ್ರಿಜೇಶ್
ಚೌಟ,ರುಕ್ಮಯ ನಾಯ್ಕ್,ಸುಮೀತ್ ರಾಜ್,ಪೂಜಾ ಪೈ, ಸಚ್ಚಿದಾನಂದ ಶೆಟ್ಟಿಮುನ್ನಲಾಯಿಗುತ್ತು, ಮೊದಲಾವರು ವೇದಿಕೆಯಲ್ಲಿದ್ದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವಿಸಿ,ಸ್ವಾಗತಿಸಿದರು.ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು. ಇನ್ನೊರ್ವಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ ನಿರೂಪಿಸಿದರು . ಗಂಗಾಧರ ಮಾಣಿ  ವಂದೆ ಮಾತರಂ ಗೀತೆ ಹಾಡಿದರು.
 ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಕಲಾವಿದರನ್ನೊಳಗೊಂಡ ತಂಡದಿಂದ ಪಟ್ಲ ಸತೀಶ್ ಶೆಟ್ಟಿಅವರ ನೇತೃತ್ವದಲ್ಲಿ ಯಕ್ಷ-ಗಾನ-ವೈಭವ ನಡೆಯಿತು.
ಲೋಕಸಭಾ ಚುನಾವಣೆಗೆ ಮುನ್ನಡಿ: ಕಾರ್ಯಕರ್ತರ ಹಾಗೂ ಪೇಜ್ ಪ್ರಮುಖರ ಅಭಿನಂದನಾ ಸಭೆ ವಸ್ತುಶ: ಮುಂದಿನ ಲೋಕಸಭಾ ಚುನಾವಣೆಗೆ ಮುನ್ನಡಿಯಾಗಿತ್ತು.ಸಭೆಯಲ್ಲಿಮುಂದಿನ ವರ್ಷ ನಡೆಯುವ ಲೋಕ ಸಭಾಚುನಾವಣೆಯ ಗೆಲುವಿನದೃಷ್ಟಿಯನ್ನಿಟ್ಟು ಕೊಂಡು ಕಾರ್ಯಕರ್ತರು ,ಪೇಜ್ ಪ್ರಮುಖರನ್ನು ಹುರಿದುಂಬಿಸಿದರು.ಸಭೆಯಲ್ಲಿ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಭಾಗವಹಿಸಿದ್ದರು.ಸಭಾಂಗಣ ಹೊರಭಾಗ,ಬೋಜನ
ಶಾಲೆಯಲ್ಲೂ ಕಾರ್ಯಕ್ರಮ ವೀಕ್ಷಿಸಲು ಎಲ್ ಇಡಿ ಪರದೆ ಅಳವಡಿಸಲಗಿತ್ತು.ಬಂಟ್ವಾಳ ಶಾಸಕಯು.ರಾಜೇಶ್ ನಾಯ್ಕ್ ಅವರ ಅಪೇಕ್ಷೆ ,ಮಾರ್ಗದರ್ಶನದಲ್ಲಿ ಕ್ಷೇತ್ರಾಧ್ಯಕ್ಷ ದೇವದಾಸಶಟ್ಟಿ ಮತ್ತು ಸಮಿತಿ ಪ್ರಮುಖರ ನೇತೃತ್ವದಲ್ಲಿ  ವಿನೂತನ ರೀತಿಯಲ್ಲಿ ಈ  ಅಭಿನಂದನಾ
ಕಾರ್ಯಕ್ರಮ  ಆಯೋಜಿಸಲಾಗಿತ್ತು.

Vishwa News 24

Recent Posts

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

12 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

12 hours ago

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…

13 hours ago

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ – vishwanews24

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ…

15 hours ago

ಉಡುಪಿ : ಯುವಕ ನಾಪತ್ತೆ – vishwanews24

ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…

15 hours ago

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ – vishwanews24

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…

15 hours ago