Featured

ಬಂಟ್ವಾಳ: ನಾಗರಹಾವಿನ ಹೊಟ್ಟೆಯಲ್ಲಿ ಸುಣ್ಣದ ಡಬ್ಬ – ಗಾಯಗೊಂಡ ಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ – Vishwanews24

ಬಂಟ್ವಾಳ: ನಾಗರಹಾವಿನ ಹೊಟ್ಟೆಯಲ್ಲಿ ಸುಣ್ಣದ ಡಬ್ಬ – ಗಾಯಗೊಂಡ ಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪದ ಮನೆಯೊಂದರ ಬಳಿ ಗಾಯಗೊಂಡು ಪತ್ತೆಯಾಗಿದ್ದ ನಾಗರ ಹಾವೊಂದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖಗೊಳಿಸಿ ಜೂ. ೧೯ರಂದು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

ಅಲಂಪುರಿ ನಿವಾಸಿ ವಸಂತಿ ಅವರ ಮನೆ ಬಳಿಯ ಬಿಲವೊಂದರಲ್ಲಿ ಜೂ. ೬ರಂದು ನಾಗರ ಹಾವೊಂದು ಪತ್ತೆಯಾಗಿದ್ದು, ಹೊರಗೆ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಅವರು ಉರಗ ಪ್ರೇಮಿ ಸ್ನೇಕ್ ಕಿರಣ್ ಗೆ ತಿಳಿಸಿದ್ದರು. ಬಳಿಕ ಅವರು ಹಾವನ್ನು ಬಿಲದಿಂದ ಹೊರಗೆ ತೆಗೆದಿದ್ದು, ಆದರೆ ಅದರ ಹೊಟ್ಟೆ ಹಾಗೂ ಕುತ್ತಿಗೆಗೆ ಗಾಯವಾಗಿತ್ತು.

ಕಿರಣ್ ಅವರು ಅದನ್ನು ಮಂಗಳೂರಿಗೆ ಕೊಂಡು ಹೋಗಿ ಪಶುವೈದ್ಯ ಡಾ.ಯಶಸ್ವಿ ಅವರ ಬಳಿ ತೋರಿಸಿದರು. ಪರೀಕ್ಷಿಸಿದ ವೈದ್ಯರು ಪ್ರಾರಂಭದಲ್ಲಿ ಹರಿದ ಚರ್ಮಕ್ಕೆ ಹೊಲಿಗೆ ಹಾಕಿದ್ದು, ಆದರೂ ಅದರ ಹೊಟ್ಟೆಯಲ್ಲಿ ಏನೋ ಇದೆ ಎಂದು ಸಂಶಯಗೊಂಡು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಗ ಹೊಟ್ಟೆಯೊಳಗೆ ಸುಣ್ಣ ತುಂಬುವ ಪ್ಲಾಸ್ಟಿಕ್ ಪತ್ತೆಯಾಗಿದ್ದು, ಅದನ್ನು ಯಶಸ್ವಿಯಾಗಿ ಹೊರಗೆ ತೆಗೆಯಲಾಗಿದೆ.

ಡಾ.ಯಶಸ್ವಿಯವರು ಹಾವನ್ನು ಸುಮಾರು ೧೫ ದಿನಗಳ ಕಾಲ ಅಬ್ಸರ್ವೇಶಬ್ ನಲ್ಲಿಟ್ಟು ಬಳಿಕ ಸ್ನೇಕ್ ಕಿರಣ್ ಅವರು ೩ ದಿನ ಮನೆಯಲ್ಲಿಟ್ಟು ಪ್ರಸ್ತುತ ಅದನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಹಾಗೂ ರಕ್ಷಕ ಮನೋಜ್ ಅವರ ನೆರವಿನಿಂದ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

1 day ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

1 day ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

1 day ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

1 day ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

1 day ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

1 day ago