Featured

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ : ಆರೋಪಿ ಸೈಯದ್ ನದೀಮ್‌ನನ್ನು ಬಿಡುಗಡೆ ಮಾಡಲು ನಿರಾಕರಿಸಿದ ಎನ್‌ಐಎ ನ್ಯಾಯಾಲಯ – Vishwanews24

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ : ಆರೋಪಿ ಸೈಯದ್ ನದೀಮ್‌ನನ್ನು ಬಿಡುಗಡೆ ಮಾಡಲು ನಿರಾಕರಿಸಿದ ಎನ್‌ಐಎ ನ್ಯಾಯಾಲಯ

ಬೆಂಗಳೂರು: 2022ರ ಫೆಬ್ರುವರಿ 20ರಂದು ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿ ಸೈಯದ್ ನದೀಮ್‌ನನ್ನು ಬಿಡುಗಡೆ ಮಾಡಲು ಎನ್‌ಐಎ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಹತ್ಯೆಗೆ ಸಂಬಂಧಿಸಿದಂತೆ 10 ಆರೋಪಿಗಳಲ್ಲಿ ನದೀಮ್ ಆರೋಪಿ ನಂ. 9 ಆಗಿದ್ದಾನೆ.

ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಸಾಕ್ಷಿಗಳ ಹೇಳಿಕೆಗಳು ಮತ್ತು ಇತರ ವಸ್ತುಗಳು ಅಪರಾಧದಲ್ಲಿ ನದೀಮ್ ಭಾಗಿಯಾಗಿರುವುದನ್ನು ತೋರಿಸುತ್ತವೆ ಎಂದು ನ್ಯಾಯಾಧೀಶ ಗಂಗಾಧರ ಸಿಎಂ ತಿಳಿಸಿದರು.

‘ಹರ್ಷ ಅವರ ಹತ್ಯೆಯ ನಂತರ ಅವರನ್ನು ಕಾನೂನಿನ ಕುಣಿಕೆಯಿಂದ ತಪ್ಪಿಸುವ ಉದ್ದೇಶದಿಂದ ನದೀಮ್ ಅವರು ನಂ. 1, 3 ಮತ್ತು 5ನೇ ಆರೋಪಿಗಳಾದ ರಿಹಾನ್ ಶರೀಫ್, ಆಸಿಫುಲ್ಲಾ ಖಾನ್ ಅಲಿಯಾಸ್ ಚಿಕು ಮತ್ತು ಸೈಯದ್ ಫರೋಜ್ ಅಲಿಯಾಸ್ ನಿಹಾಲ್ ಅವರಿಗೆ ಆಶ್ರಯ ನೀಡಿದ್ದರು. ಆರೋಪಿಗಳು ಹತ್ಯೆ ಮಾಡಿರುವುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಈ ಹಿನ್ನೆಲೆಯಲ್ಲಿ, ನದೀಮ್ ವಿರುದ್ಧ ಅಪರಾಧದ ಆರೋಪ ಹೊರಿಸಲು ಪ್ರಾಸಿಕ್ಯೂಷನ್ ಸಾಕಷ್ಟು ಪುರಾವೆಗಳನ್ನು ಒದಗಿಸಿದೆ’ ಎಂದು ನ್ಯಾಯಾಲಯ ಹೇಳಿದೆ.

ತನಿಖಾಧಿಕಾರಿಯು ಸಂಗ್ರಹಿಸಿದ ಸಾಕ್ಷ್ಯವು ಆಪಾದಿತ ಅಪರಾಧದಲ್ಲಿ ನದೀಮ್‌ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅವರ ವಿರುದ್ಧ ವಿಚಾರಣೆ ಮುಂದುವರಿಯಲು ಪ್ರಾಸಿಕ್ಯೂಷನ್ ಬಲವಾದ ಪ್ರಕರಣವನ್ನು ಪ್ರಸ್ತುತಪಡಿಸಿದೆ. ಪರಿಣಾಮವಾಗಿ, ನದೀಮ್ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಪ್ರಕರಣದಲ್ಲಿ ತನ್ನನ್ನು ಪೊಲೀಸರು ತಪ್ಪಾಗಿ ಸಿಲುಕಿಸಿದ್ದಾರೆ ಎಂದು ನದೀಮ್ ಆರೋಪಿಸಿದ್ದಾರೆ. ಆದಾಗ್ಯೂ, ಮೂವರು ಆರೋಪಿಗಳು ಹರ್ಷನ ಹತ್ಯೆ ಮಾಡಿದ ನಂತರ ಬಂಧನದಿಂದ ತಪ್ಪಿಸಿಕೊಳ್ಳಲು ನದೀಮ್ ಸಹಾಯದಿಂದ ಆಶ್ರಯ ಪಡೆದಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿದೆ. ಕೊಲೆಯಾದ ಬಳಿಕ ಮೂವರೂ ಆರೋಪಿಗಳನ್ನು ಶಿವಮೊಗ್ಗದ ಜೆಪಿ ನಗರದ ಪಾಳುಬಿದ್ದ ಕಟ್ಟಡಕ್ಕೆ ಕರೆದೊಯ್ದು, ರಕ್ತದಲ್ಲಿ ತೊಯ್ದಿದ್ದ ಬಟ್ಟೆ ಬದಲಿಸಲು ಬಟ್ಟೆ ಹಾಗೂ ಆಹಾರವನ್ನೂ ನದೀಮ್ ನೀಡಿದ್ದರು ಎನ್ನಲಾಗಿದೆ.

 

Vishwa News 24

Recent Posts

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ – vishwanews24

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…

2 days ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

2 days ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

3 days ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

3 days ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

3 days ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

3 days ago