ಬಜೆಟ್: ರೈತರಿಗಾಗಿ 16 ಅಂಶಗಳ ಕ್ರಿಯಾ ಯೋಜನೆಗಳ ಘೋಷಣೆ -Vishwanews24

ನವದೆಹಲಿ: ಸಂಸತ್ ನಲ್ಲಿ ಇಂದು 2020ನೇ ಸಾಲಿನ ಬಜೆಟ್ ಭಾಷಣ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ರೈತರಿಗಾಗಿ 16 ಅಂಶಗಳ ಕ್ರಿಯಾ ಯೋಜನೆಯನ್ನು ಘೋಷಣೆ ಮಾಡಿದರು.

1. ಮಾದರಿ ಕೃಷಿ ನಿಯಮಾವಳಿ ಅಳವಡಿಸಿಕೊಳ್ಳಲು ರಾಜ್ಯಗಳಿಗೆ ಪ್ರೋತ್ಸಾಹ
2. ನೀರಿನ ತೀವ್ರ ಅಭಾವ ಎದುರಿಸುತ್ತಿರುವ 100 ಜಿಲ್ಲೆಗಳಲ್ಲಿ ಪರಿಣಾಮಕಾರಿ ಸಮಗ್ರ ಕ್ರಮ
3. ಪ್ರಧಾನ ಮಂತ್ರಿ ಕುಸುಮ್ ಯೋಜನೆ ಸೀಮೆಎಣ್ಣೆ ಮೇಲಿನ ಅವಲಂಬನೆಯನ್ನು ತೆಗೆದುಹಾಕುತ್ತದೆ ಮತ್ತು ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುತ್ತದೆ
4. ನಮ್ಮ ಸರ್ಕಾರ ರಸಗೊಬ್ಬರ ಬಳಕೆಯನ್ನು ಉತ್ತೇಜಿಸುತ್ತದೆ. ಆದರೆ ಪ್ರಸ್ತುತ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿರುವ ಈ ಸಮಯದಲ್ಲಿ ಸರ್ಕಾರದ ಈ ಕ್ರಮ ಅತ್ಯಂತ ಪ್ರಮುಖವಾಗುತ್ತದೆ.
5. ನಾಬಾರ್ಡ್ ಯೋಜನೆ ಕೃಷಿ ಗೋದಾಮುಗಳು, ಕೋಲ್ಡ್ ಸ್ಟೋರೇಜ್ ಮತ್ತು ಇತರ ದಾಸ್ತಾನು ಸಂಗ್ರಹಣೆಗಳನ್ನು ಮ್ಯಾಪಿಂಗ್ ಮತ್ತು ಜಿಯೋ ಟ್ಯಾಗಿಂಗ್ ಮಾಡುವ ಕಾರ್ಯ ಮಾಡುತ್ತದೆ.
6. ಗ್ರಾಮೀಣ ಸ್ಟೋರೇಜ್ ಯೋಜನೆಗಳನ್ನು ಎಸ್ಎಚ್ಇಗಳು ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ರೈತರು ಹೆಚ್ಚಿನ ಪ್ರಮಾಣದ ಉತ್ಪಾದನೆಗಳನ್ನು ಸಂಗ್ರಹಿಸಲು ನೆರವಾಗುತ್ತದೆ. ಅಲ್ಲದೆ ರೈತರ ಲಾಜಿಸ್ಚಿಕ್ ವೆಚ್ಚವನ್ನು ಇದು ಕಡಿಮೆ ಮಾಡಲು ನೆರವಾಗುತ್ತದೆ. ಅಂತೆಯೇ ತಡೆರಹಿತ ಶೇಖರಣಾ ಕಾರ್ಯ ವಿಧಾನವನ್ನು ನಿರ್ವಹಿಸುವ ಜವಾಬ್ದಾರಿ ಗ್ರಾಮದ ಮಹಿಳೆಯರ ಮೇಲಿರುತ್ತದೆ.
7. ರೈತರಿಗೆ ನೆರವಾಗಲೆಂದು ವಿಶೇಷ ರೆಫ್ರಿಜರೇಟೆಡ್ ರೈಲುಗಳ ಘೋಷಣೆ. ಕೃಷಿ ಉಡಾನ್ ಮೂಲಕ ಕೃಷಿ ಉತ್ಪನ್ನಗಳ ರಫ್ತಿಗೆ ವಿಶೇಷ ಸರಕು ಸಾಗಣೆ ವಿಮಾನಗಳು. ಕೃಷಿ ಉಡಾನ್ ಯೋಜನೆಯನ್ನು ಏವಿಯೇಷನ್ ಸಚಿವಾಲಯ ಆರಂಭಿಸಲಿದೆ.
8. ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ, ಉದ್ಯೋಗ ಖಾತ್ರಿ ಯೋಜನೆಗೆ ಬಲತುಂಬುವ ಭರವಸೆ
9. ಬರಡು ಭೂಮಿಯಲ್ಲಿ ಸೋಲಾರ್‌ ಯೋಜನೆ
10. ಸಾವಯವ ಉತ್ಪನ್ನಗಳ ಆನ್‌ಲೈನ್ ಮರಾಟ
11. 2025ರ ವೇಳೆಗೆ ಹಾಲು ಉತ್ಪಾದನೆಯನ್ನು 53.5 ಟನ್‌ನಿಂದ 108 ಟನ್‌ಗೆ ಹೆಚ್ಚಿಸುವ ಗುರಿ.
12. ತೋಟಗಾರಿಕೆ ವಲಯದಲ್ಲೂ ಆಹಾರ ಧಾನ್ಯಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ನಾವು ಇದನ್ನು ಒಂದು ಪದಾರ್ಥ, ಒಂದು ಜಿಲ್ಲೆಯಡಿಗೆ ತರಲು ಯೋಜಿಸಿದ್ದೇವೆ.
13. ಗೋದಾಮುಗಳು ಹಣಕಾಸು ಇತರೆ ಸೇವೆಗಳನ್ನು ಇ ಸೇವೆಗಳಡಿಗೆ ತರುವುದು
14. 2021 ರ ಕೃಷಿ ಸಾಲ ಲಭ್ಯತೆಯನ್ನು 15 ಲಕ್ಷ ಕೋಟಿಗೆ ಏರಿಕೆ ಮಾಡಲಾಗುತ್ತದೆ.
15. 2025ರ ವೇಳೆಗೆ ರಾಸುಗಳಲ್ಲಿ ಕಾಲುಬಾಯಿ ರೋಗ, ಕುರಿ ಮತ್ತು ಮೇಕೆಗಳಲ್ಲಿ ಪಿಪಿಪಿ ಕಾಯಿಲೆ ಮುಕ್ತ ಭಾರತದ ಘೋಷಣೆ
16.ಸಾಗರ್ ಮಿತ್ರ ಯೋಜನೆ ಮೂಲಕ ಮೀನುಗಾರಿಕೆಯಲ್ಲಿ ಹೆಚ್ಚೆಚ್ಚು ಯುವಕರ ಪಾಲ್ಗೊಳ್ಳುವಿಕೆ ಹೆಚ್ಚಳಕೆ ಕ್ರಮ.

Vishwa News 24

Recent Posts

ಬಾಂಗ್ಲಾದಲ್ಲಿ ನದಿಗೆ ಉರುಳಿದ ಬಸ್‌ : 23 ಜನ ಸಾವು, ಹಲವರು ನಾಪತ್ತೆ – vishwanews24

ಬಾಂಗ್ಲಾದಲ್ಲಿ ನದಿಗೆ ಉರುಳಿದ ಬಸ್‌ : 23 ಜನ ಸಾವು, ಹಲವರು ನಾಪತ್ತೆ ಢಾಕಾ: ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ…

53 minutes ago

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ : ಓರ್ವ ಆರೋಪಿಗೆ ಜಾಮೀನು – vishwanews24

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ : ಓರ್ವ ಆರೋಪಿಗೆ ಜಾಮೀನು ಸುಳ್ಯ: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ…

59 minutes ago

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು – vishwanews24

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…

18 hours ago

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ – vishwanews24

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…

18 hours ago

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ – vishwanews24

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…

18 hours ago

ಕಾಪು: ತಮಿಳುನಾಡು ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಬಿದ್ದು ಮೀನುಗಾರ ನಾಪತ್ತೆ – vishwanews24

ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ  ಕಾಪು: ಕಾಪು ಕಡಲ ಕಿನಾರೆಯಲ್ಲಿ…

18 hours ago