ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಇದೀಗ ಅವರ ಮನೆಯಲ್ಲಿ ಕಂತೆ ಕಂತೆ ನೋಟು ಹಣ ಪತ್ತೆಯಾಗಿದೆ. ಬದುಕಿದ್ದಾಗ ಭಿಕ್ಷುಕಿಯಾಗಿದ್ದವರು ಇದೀಗ ಸತ್ತ ಮೇಲೆ ಲಕ್ಷಾಧಿಪತಿಯಾಗಿದ್ದಾರೆ.
ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಿನ್ನೆ (ಆ.23) ಬರೋಬ್ಬರಿ 8 ಲಕ್ಷ ರೂ. ಹಣ ಪತ್ತೆಯಾಗಿತ್ತು. ಇದೀಗ ಒಟ್ಟು 30 ಲಕ್ಷ ರೂ. ಹಣ ಸಿಕ್ಕಿದೆ.
ಮೃತ ನೂರ್ ಉನ್ನೀಸ್ ಅವರು ಸಹೋದರಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರು ಸಹೋದರಿಯರು ಮದುವೆ ಆಗಿರಲಿಲ್ಲ. ಎರಡು ವರ್ಷದ ಹಿಂದೆ ಅಕ್ಕ ನಿಧನರಾಗಿದ್ದರು. ಅದಾದ ಬಳಿಕ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದರು. ನಿನ್ನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು, ಸಾವಿನ ಬಳಿಕ ಸ್ಥಳೀಯರು ಮನೆ ಪರಿಶೀಲಿಸಿದ್ದರು. ಈ ವೇಳೆ 30ಕ್ಕೂ ಹೆಚ್ಚು ಮೂಟೆಗಳಲ್ಲಿ ಹಣ ಪತ್ತೆಯಾಗಿದೆ.
ಸದ್ಯ ಪತ್ತೆಯಾದ ಹಣ ಗುತ್ತಲು ಬಡಾವಣೆಯ ಮಸೀದಿ ಸುಪರ್ದಿಯಲ್ಲಿದೆ. ನಿನ್ನೆ ಸುಮಾರು 8-9 ಲಕ್ಷ ರೂ. ಹಣ ಎಣಿಕೆ ಮಾಡಲಾಗಿದ್ದು, ಇದೀಗ 20 ಮೂಟೆಯಲ್ಲಿರುವ ಹಣ ಎಣಿಕೆ ಬಾಕಿಯಿದೆ. ಸಂಪೂರ್ಣ ಹಣ ಎಣಿಕೆ ಬಳಿಕ ಯಾರಿಗೆ ನೀಡಬೇಕು ಎಂದು ನಿರ್ಧಾರ ಮಾಡುವುದಾಗಿ ಮುಸ್ಲಿಂ ಸಮುದಾಯದ ಮುಖಂಡರು ಮಾಹಿತಿ ಎಂದು ತಿಳಿಸಿದ್ದಾರೆ
ವೃದ್ಧೆ ಜೀವಂತವಾಗಿದ್ದಾಗ ಯಾರೊಬ್ಬರೂ ಆಕೆಯನ್ನು ನೋಡಿಕೊಳ್ಳಲಿಲ್ಲ, ಊಟಕ್ಕೂ ಗತಿಯಿಲ್ಲದೆ ಭಿಕ್ಷೆ ಬೇಡಿ ಬದುಕಿದ್ದರು. ಆದರೆ ಸಾವಿನ ನಂತರ ಆಕೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಸಂಬಂಧಿಕರು ಹಂಚಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತವಾಗಿದೆ.
ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…
ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…
25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…
ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]
ದ.ಕ./ಉಡುಪಿ ಜಿಲ್ಲೆಯಲ್ಲಿ ಮೀಲಾದುನ್ನೆಬಿ : ಆ.25ರಂದು ಸಾರ್ವತ್ರಿಕ ರಜೆಗೆ ಸಚಿವ ಯು.ಟಿ.ಖಾದರ್ ಸೂಚನೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ.…
ಕೋಳಿ ಫಾರ್ಮ್ ಹೆಸರಲ್ಲಿ ಡ್ರಗ್ಸ್ ಫ್ಯಾಕ್ಟರಿ : ಮೂರು ರಾಜ್ಯಗಳಿಗೆ ಸಪ್ಲೈ ಮಾಡ್ತಿದ್ದ 7 ಮಂದಿ ಪೊಲೀಸರ ವಶಕ್ಕೆ ಬೆಳಗಾವಿ:…