ಶಿವಮೊಗ್ಗ : ಬದುಕಿನ ಕೊನೆ ಉಸಿರಿರುವವರೆಗೆ ರಾಜ್ಯದ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ದುಡಿಯುತ್ತೇನೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಬಿಎಸ್ವೈ ಅಭಿಮಾನಿ ಬಳಗ ಆಯೋಜಿಸಿದ್ದ ‘ನಮ್ಮೊಲುಮೆ ಭಾವಾಭಿನಂದನೆ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ಮಂಡ್ಯದಲ್ಲಿ ನನ್ನ ಮಾವ ಹಾಗೂ ತಾತನೊಂದಿಗೆ ತರಕಾರಿ ಮಾರುತ್ತಿದ್ದೆ.ನಾನು ಅಲ್ಲಿ ನಿಂಬೆಹಣ್ಣು ಮಾರುತ್ತಿದ್ದುದ್ದನ್ನು ಇನ್ನೂ ಅಲ್ಲಿಯ ಜನ ನೆನೆಸಿಕೊಳ್ಳುತ್ತಿದ್ದಾರೆ. ಬಡತನದಲ್ಲಿ ಹುಟ್ಟಿ ಬೆಳೆದ ನಾನು, ಈ ಮಟ್ಟಕ್ಕೆ ಬೆಳೆದಿದ್ದೇನೆ ಅಂದರೆ ಜನರ ಪ್ರೀತಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರಣ. ಒಂದು ವಿಶೇಷ ಕಾರಣಕ್ಕೆ ನಾನು ಮಂಡ್ಯದಿಂದ ಶಿವಮೊಗ್ಗಕ್ಕೆ ಬರಬೇಕಾಯಿತು. ದೇವರು ಎಲ್ಲರಿಗೂ ಎಲ್ಲ ಶಕ್ತಿ ನೀಡಿದ್ದಾನೆ. ದೊಡ್ಡ ಗುರಿ ಮುಂದಿಟ್ಟುಕೊಂಡು ದೃಢ ಹೆಜ್ಜೆ ಇಟ್ಟರೆ ಮುಂದೆ ಬರಲು ಸಾಧ್ಯ.
ಹೋರಾಟದಿಂದಾಗಿಯೇ ನಾನು ಈ ಸ್ಥಿತಿಗೆ ಬಂದಿದ್ದೇನೆ. ತಪ್ಪು ಹೆಜ್ಜೆಯನ್ನಿಡದೇ ಮುಂಬರುವ ಅವಧಿಯಲ್ಲಿ ಶಿವಮೊಗ್ಗ ಮಾತ್ರವಲ್ಲದೆ, ರಾಜ್ಯವನ್ನು ಶಕ್ತಿಮೀರಿ ಅಭಿವೃದ್ಧಿ ಮಾಡುತ್ತೇನೆ. ಶಿವಮೊಗ್ಗಕ್ಕೆ ಎಲ್ಲವನ್ನೂ ಮಾಡಿದ್ದೇನೆ. ಇನ್ನೇನು ಬೇಕೋ ಹೇಳಿ ಅದನ್ನು ಮಾಡೋಣ. ಮುಂದೆ ಅಧಿಕಾರಕ್ಕೆ ಬರುವವರಿಗೆ ಶಿವಮೊಗ್ಗದಲ್ಲಿ ಏನು ಕೆಲಸ ಮಾಡಲು ಇರಬಾರದು.
ಯಾರೂ ಏನೇ ಟೀಕೆ ಮಾಡಲಿ, ನಾವು ಹೋಗುವ ದಾರಿ ಸರಿಯಿದ್ದರೆ ಟೀಕೆಗಳಿಗೆ ತಲೆಬಾಗಬೇಕಿಲ್ಲ. ನಾನು ಎಂದೂ ಟೀಕೆಗಳಿಗೆ ತಲೆ ಬಾಗಿಲ್ಲ.ಜಿಲ್ಲೆಯ ಜನರು ನನ್ನ ಸೋಲು, ಗೆಲುವು, ಕಿಚ್ಚು ಹೋರಾಟಗಳಿಗೆ ಸಾಕ್ಷಿಯಾಗಿ, ನನಗೆ ಬೆಂಬಲ ನೀಡಿದ್ದಾರೆ. ನಾನು ಎಷ್ಟು ಜನ್ಮ ಪಡೆದರೂ ತೀರಿಸಲು ಆಗದ ಪ್ರೀತಿ ನೀಡಿದ್ದೀರಿ. ನನ್ನ ಬೆಳವಣಿಗೆಗೆ ಶಿವಮೊಗ್ಗ ಜನತೆ ಮೆಟ್ಟಿಲುಗಳಾಗಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…