ಬೆಂಗಳೂರು : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಅನ್ನು ಈಗ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗಾಗಿ ಬುಕ್ ಮಾಡಬಹುದಾಗಿದೆ.
ಪ್ರವಾಸೋದ್ಯಮ ಇಲಾಖೆಯ ಅಂಬಾರಿ ಡಬಲ್ ಡೆಕರ್ ಬಸ್ಗಳು ಇನ್ಮುಂದೆ ಬೆಂಗಳೂರು ನಗರದಲ್ಲಿ ಓಡಾಡಲು ಸೀಮಿತವಾಗಿರುವುದಿಲ್ಲ. ಬದಲಾಗಿ ಪ್ರಿ ವೆಡ್ಡಿಂಗ್ ಶೂಟ್, ಬರ್ತ್ ಡೇ ಸೆಲೆಬ್ರೆಶನ್ಗೆ ಬಸ್ಗಳು ಬಾಡಿಗೆಗೆ ಸಿಗಲಿವೆ.
2026ರ ಜನವರಿಯಲ್ಲಿ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್‌ಗಳ ಸೇವೆಯನ್ನು ಪ್ರಾರಂಭಿಸಲಾಯಿತು. ಕೆಎಸ್‌ಟಿಡಿಸಿ ನಿರ್ವಹಿಸುವ ಮೂರು ಬಸ್‌ಗಳು ಇದುವರೆಗೆ ಪ್ರವಾಸಿಗರಿಗೆ ನಗರ ಪರ್ಯಟನೆಯ ‘ಹಾಪ್-ಆನ್, ಹಾಪ್-ಆಫ್’ ಸೇವೆಯನ್ನು ನೀಡುತ್ತಿದ್ದವು. ಇವು ರವೀಂದ್ರ ಕಲಾಕ್ಷೇತ್ರ, ಹಡ್ಸನ್ ಸರ್ಕಲ್, ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ಕಬ್ಬನ್ ರಸ್ತೆ, ವಿಧಾನ ಸೌಧ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ಒಟ್ಟು 26 ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಸುತ್ತಾಡುತ್ತಿತ್ತು.
ಇನ್ನು ಈ ಬಸ್ ಒಂದು ದಿನಕ್ಕೆ ವಾರದ ದಿನಗಳಲ್ಲಿ 32 ಸಾವಿರ ರೂಪಾಯಿ, ವಾರಾಂತ್ಯದಲ್ಲಿ 40 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇನ್ನು ಸಮಾರಂಭಗಳು ಮತ್ತು ಪಾರ್ಟಿಗಳಿಗೆ 5 ಗಂಟೆಗಳ ಅವಧಿಗೆ ವಾರಾಂತ್ಯ (Sat-Sun): 28,000 + 5% GST, ವಾರದ ದಿನಗಳು (Mon-Fri 26,000 ರೂ. + 5% GST. ಒಂದು ವೇಳೆ ನಿಯಮಿತ ಸಮಯ ಮೀರಿದರೆ, ಇಡೀ ದಿನದ ದರ ಅನ್ವಯಿಸುತ್ತದೆ.
ಫೋಟೋಶೂಟ್‌ಗಳಿಗೆ (2 ಗಂಟೆಗಳ ಅವಧಿ) ವಾರಾಂತ್ಯ (Sat-Sun): 16,000 ರೂ. + 5% GST. ವಾರದ ದಿನಗಳು (Mon-Fri):12,000 ರೂ. + 5% GST.
2 ಗಂಟೆಗಿಂತ ಹೆಚ್ಚುವರಿ ಸಮಯಕ್ಕೆ ವಾರಾಂತ್ಯದಲ್ಲಿ ಪ್ರತಿ ಗಂಟೆಗೆ 7,000 ಹಾಗೂ ವಾರದ ದಿನಗಳಲ್ಲಿ ಪ್ರತಿ ಗಂಟೆಗೆ 6,000 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಕೆಎಸ್‌ಟಿಡಿಸಿ ಅಧಿಕಾರಿಯೊಬ್ಬರು,ಜನವರಿಯಿಂದ ಇದುವರೆಗೆ ಸುಮಾರು 20,000 ಜನರು ಈ ಹಾಪ್-ಆನ್, ಹಾಪ್-ಆಫ್ ಸೇವೆಯನ್ನು ಬಳಸಿಕೊಂಡಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ ಹಾಗೂ ವಾರದ ದಿನಗಳಲ್ಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಜನ್ಮದಿನದ ಆಚರಣೆಗಳು, ಕಾರ್ಪೊರೇಟ್ ಈವೆಂಟ್‌ಗಳು ಹಾಗೂ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಅಂಬಾರಿ ಬಸ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…