ಗದಗ: ಬಸವ ತತ್ವಕ್ಕೆ ಮಾರುಹೋಗಿರುವ ಮುಸ್ಲಿಂ ಯುವಕನೊಬ್ಬ,ಲಿಂಗದೀಕ್ಷೆ ಪಡೆದು ಶಾಖಾ ಮಠವೊಂದರ ಪೀಠಾಧಿಪತಿಯಾಗುತ್ತಿರುವ ಅಪರೂಪದ ವಿದ್ಯಮಾನಕ್ಕೆ ರೋಣ ತಾಲ್ಲೂಕಿನ ಅಸೂಟಿ ಗ್ರಾಮ ಸಾಕ್ಷಿಯಾಗುತ್ತಿದೆ.
ಗ್ರಾಮದ ದಿವಾನ್ ರೆಹಮಾನ್‌ಸಾಬ್ ಶರೀಫ್(33) ಎಂಬುವರ ಪಟ್ಟಾಧಿಕಾರ ಮಹೋತ್ಸವ ಫೆ.26ರಂದು ಗ್ರಾಮದಲ್ಲಿ ನಿಗದಿಯಾಗಿದೆ. ಬಸವ ಭಕ್ತರಾಗಿರುವ ದಿವಾನ್ ಶರೀಫ್ ಅವರು, ಈಗಾಗಲೇ ಗುಲ್ಬರ್ಗಾ ಜಿಲ್ಲೆ ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರ ಶ್ರೀಗಳಿಂದ ಲಿಂಗದೀಕ್ಷೆ ಪಡೆದುಕೊಂಡಿದ್ದಾರೆ.
ಪಟ್ಟಾಧಿಕಾರದ ಬಳಿಕ ದಿವಾನ್ ಶರೀಫ್ ಅವರು ಅಸೂಟಿ ಗ್ರಾಮದ ಖಜೂರಿ ಕೋರಣೇಶ್ವರ ಶಾಖಾ ಮಠದ ಪೀಠಾಧಿಪತಿಯಾಗಿ ಮುಂದುವರಿಯಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರುಘರಾಜೇಂದ್ರ ಕೋರಣೇಶ್ವರ ಶ್ರೀಗಳು, ಈಗಾಗಲೇ ದಿವಾನ್ ಶರೀಫ್ ಅವರಿಗೆ ಲಿಂಗದೀಕ್ಷೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದಿನಗಳಲ್ಲಿ ಅಸೂಟಿ ಗ್ರಾಮದ ಖಜೂರಿ ಶ್ರೀಮಠ ಮತ್ತು ಶಾಂತಿಧಾಮಕ್ಕೆ ಮುಸ್ಲಿಂ ಯುವ ದಿವಾನ್ ಶರೀಫರನ್ನು ಪೀಠಾಪತಿ ಮಾಡುವ ವಿಚಾರದ ಬಗ್ಗೆ ತಿಳಿಸಿದರು.
‘ನಮ್ಮದು ಬಸವ ತತ್ವ. ನಮ್ಮಲ್ಲಿ ಎಲ್ಲ ಧರ್ಮದವರಿಗೂ ಮುಕ್ತ ಅವಕಾಶವಿದೆ. ಇದಕ್ಕೆ ಶರೀಫ್ ನಮ್ಮ ಅಸೂಟಿ ಮಠದ ಪೀಠಾಧಿಪತಿಯಾಗುತ್ತಿರುವುದೇ ಸಾಕ್ಷಿ. 12ನೇ ಶತಮಾನದಲ್ಲಿ ಬಸವೇಶ್ವರರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುತ್ತಾ ಬಂದಿದ್ದೇವೆ’ ಎಂದು ಖಜೂರಿಮಠದ ಮುರುಘೇಂದ್ರ ಕೋರಣೇಶ್ವರ ಶ್ರೀಗಳು ಪ್ರತಿಕ್ರಿಯಿಸಿದರು.
‘ತಂದೆಯವರ ಕಾಲದಿಂದಲೇ ನಾವು ಖಜೂರಿ ಕೋರಣೇಶ್ವರ ಮಠದ ಭಕ್ತರು. ತಂದೆಯವರು ಮಠದ ಗಿರಣಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರು ನಿಧನರಾದರು. ಅವರ ನಿಧನದ ನಂತರ ಮಠದ ಜತೆಗಿನ ಒಡನಾಟವನ್ನು ಹಿರಿಯ ಮಗನಾದ ನಾನು ಮುಂದುವರಿಸಿದ್ದೇನೆ. ಬಸವತತ್ವದಿಂದ ಪ್ರಭಾವಿತನಾಗಿ ಸಮಾಜಸೇವೆ ಮಾಡುವ ಉದ್ದೇಶದಿಂದ ಇತ್ತೀಚೆಗೆ ಶ್ರೀಗಳಿಂದ ಲಿಂಗದೀಕ್ಷೆಯನ್ನೂ ಪಡೆದಿದ್ದೇನೆ’ ಎಂದು ದಿವಾನ್ ಶರೀಫ್ ಪ್ರತಿಕ್ರಿಯಿಸಿದರು.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…