Featured

ಬಸ್ ಚಾಲನೆ ಮಾಡಿದ ಕೋತಿ ; ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಡ್ರೈವರ್.. ವೀಡಿಯೋ ವೈರಲ್

ದಾವಣಗೆರೆ,: ಕೆಎಸ್‍ಆರ್‍ಟಿಸಿ ಬಸ್ಸನ್ನು ಕೋತಿಯೊಂದು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೆಎಸ್‍ಆರ್‍ಟಿಸಿ ಅಧಿಕಾರಿಗಳು, ಆ ಬಸ್‍ನ ಚಾಲಕನನ್ನು ಅಮಾನತು ಮಾಡಿದ್ದಾರೆ.

ದಾವಣಗೆರೆ ಕೆಎಸ್‍ಆರ್‍ಟಿಸಿ ಡಿಪೋದ ಪ್ರಕಾಶ್ ಅಮಾನತುಗೊಂಡ ಚಾಲಕ. ದಾವಣಗೆರೆ ಡಿಪೋಗೆ ಸೇರಿರುವ ಬಸ್ಸಿನಲ್ಲಿ ಅಕ್ಟೋಬರ್ 1 ರಂದು ಘಟನೆ ನಡೆದಿದೆ. ಚಾಲಕ ಪ್ರಕಾಶ್ ಅವರು ಗೇರ್ ಹಾಕಿದರೆ, ಕೋತಿ ಸ್ಟೇರಿಂಗ್ ತಿರುಗಿಸುತ್ತಿತ್ತು. ಇದನ್ನು ನೋಡುತ್ತಿದ್ದ ಪ್ರಯಾಣಿಕರಿಗೆ ಕೊಂಚ ಮನರಂಜನೆಯಾಗಿತ್ತು. ಇದನ್ನು ಪ್ರಯಾಣಿಕರೊಬ್ಬರು ಮೊಬೈಲ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು.

ದಾವಣಗೆರೆಯಿಂದ ಚಿತ್ರದುರ್ಗ ಜಿಲ್ಲೆಯ ಭರಮಸಾಗರ-ಆಲಿಕಲ್ಲುಗೆ ಬಸ್ ಹೊರಟಿತ್ತು. ಮಾರ್ಗ ಮಧ್ಯದಲ್ಲಿ ಕೋತಿಗೆ ಬಸ್ ಚಾಲನೆ ಮಾಡಲು ಪ್ರಕಾಶ್ ಕೊಟ್ಟಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ಸಿನಲ್ಲಿ ಸುಮಾರು ಪ್ರಯಾಣಿಕರಿದ್ದು, ಒಂದು ವೇಳೆ ಅನಾಹುತ ಸಂಭವಿಸಿದ್ದರೆ ಕೆಎಸ್‍ಆರ್‍ಟಿಸಿಗೆ ಭಾರೀ ನಷ್ಟವಾಗುತ್ತಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚಾಲಕ ಪ್ರಕಾಶ್‍ನನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಬೇಜವಾಬ್ದಾರಿ ಕರ್ತವ್ಯ ದೋಷಕ್ಕೆ ಕಿಡಿಕಾರಿದ್ದಾರೆ. ಬಳಿಕ ಪ್ರಕಾಶ್‍ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Vishwa News 24

Recent Posts

ರನ್‌ವೇಯಲ್ಲಿ ಮುಖಾಮುಖಿಯಾದ ಏರ್ ಇಂಡಿಯಾ, ಇಂಡಿಗೋ ವಿಮಾನಗಳು : ತಪ್ಪಿದ ಭಾರೀ ದುರಂತ – vishwanews24

ರನ್‌ವೇಯಲ್ಲಿ ಮುಖಾಮುಖಿಯಾದ ಏರ್ ಇಂಡಿಯಾ, ಇಂಡಿಗೋ ವಿಮಾನಗಳು : ತಪ್ಪಿದ ಭಾರೀ ದುರಂತ ಅಹಮದಾಬಾದ್,: ಗುಜರಾತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್…

9 minutes ago

ಬೆಳ್ತಂಗಡಿ : ಹೊತ್ತಿ ಉರಿದ ಸ್ಕೂಟಿ ; ಗಾಯಗೊಂಡಿದ್ದ ಬಾಲಕ ಮೃತ್ಯು – vishwanews24

ಬೆಳ್ತಂಗಡಿ : ಹೊತ್ತಿ ಉರಿದ ಸ್ಕೂಟಿ ; ಗಾಯಗೊಂಡಿದ್ದ ಬಾಲಕ ಮೃತ್ಯು ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲುವಿನಲ್ಲಿ ಸ್ಕೂಟಿಯೊಂದು…

19 minutes ago

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಮತ್ತೆ ಆರಂಭ ; ಗುರುತಿನ ಚೀಟಿ, ಶುಲ್ಕ ಕಡ್ಡಾಯ – vishwanews24

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಆರಂಭ - ಈ ನಿಯಮ ಪಾಲನೆ ಕಡ್ಡಾಯ ಅಧಿಕೃತ ವೆಬ್‌ಸೈಟ್‌ ಮೂಲಕ ಪೂರ್ವ ನೋಂದಣಿ ಮಾಡಿಸಿಕೊಳ್ಳುವುದು…

26 minutes ago

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ – vishwanews24

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ ಉಡುಪಿ: ಅಲ್-ಇಬಾದಾ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ವೊಂದು ಗುರುವಾರ…

48 minutes ago

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

19 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

19 hours ago