Featured

ಬಾಂಗ್ಲಾದಲ್ಲಿ ನದಿಗೆ ಉರುಳಿದ ಬಸ್‌ : 23 ಜನ ಸಾವು, ಹಲವರು ನಾಪತ್ತೆ – vishwanews24

ಬಾಂಗ್ಲಾದಲ್ಲಿ ನದಿಗೆ ಉರುಳಿದ ಬಸ್‌ : 23 ಜನ ಸಾವು, ಹಲವರು ನಾಪತ್ತೆ

ಢಾಕಾ: ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸಾರಿಗೆ ಬೋಟ್‌ ಏರುವ ವೇಳೆ ನದಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 23 ಜನರು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದ  ರಾಜಧಾನಿಯಲ್ಲಿ ನಡೆದಿದೆ.

ಬುಧವಾರ ಸಂಜೆ 5:15 ಗಂಟೆ ಸುಮಾರಿಗೆ ನೈಋತ್ಯ ಜಿಲ್ಲೆ ರಾಜ್‌ಬರಿಯಿಂದ ಪ್ರಯಾಣಿಸುತ್ತಿದ್ದ ಬಸ್ ಸಾರಿಗೆ ಬೋಟ್‌  ಏರುವಾಗ ಅಪಘಾತ ಸಂಭವಿಸಿದೆ. ಹಲವಾರು ಪ್ರಯಾಣಿಕರು ಬಸ್‌ ಕಿಟಕಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಬಹುತೇಕರು ಒಳಗಡೆಯೇ ಲಾಕ್‌ ಆಗಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: 

ಬಸ್‌ ಸಾರಿಗೆ ಬೋಟ್‌ ಏರುತ್ತಿದ್ದಾಗ ʻಪದ್ಮಾʼ ನದಿಗೆ ಬಿದ್ದಿದೆ. ಈವರೆಗೆ 23 ಮೃತದೇಹಗಳನ್ನ ಹೊರತೆಗೆಯಲಾಗಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಬಳಿಕ ಸಾಲ್ವೆಜ್‌ ಬೋಟ್‌ನಲ್ಲಿದ್ದ ಕ್ರೇನ್‌ಗಳನ್ನ ಬಳಸಿಕೊಂಡು ಬಸ್‌ ಅನ್ನು ಹೊರತೆಗೆಯಲಾಯಿತು. ಇದಾದ ಬಳಿಕ ಬುಧವಾರ ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು (ಗುರುವಾರ) ಮತ್ತೆ ಕಾರ್ಯಾಚರಣೆ ಮುಂದುವರಿದಿದೆ. ಅಗ್ನಿಶಾಮಕ ಸೇವೆ, ನೌಕಾಪಡೆ, ಪೊಲೀಸ್ ಮತ್ತು ಇತರ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿವೆ ಎಂದು ಇನ್ಸ್‌ಪೆಕ್ಟರ್ ರಸೆಲ್ ಮೊಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: 

Vishwa News 24

Recent Posts

ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿಯಿಂದ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾವು – vishwanews24

ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿಯಿಂದ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾವು ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿಯಿಂದ…

25 minutes ago

ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ ಸಾಧ್ಯತೆ ; ಕರಾವಳಿ ಜಿಲ್ಲೆಗೆ ಆರೆಂಜ್ ಅಲರ್ಟ್  ಘೋಷಣೆ – vishwanews24

ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ ಸಾಧ್ಯತೆ ; ಕರಾವಳಿ ಜಿಲ್ಲೆಗೆ ಆರೆಂಜ್ ಅಲರ್ಟ್  ಘೋಷಣೆ ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ…

35 minutes ago

ಮೇ 16ರಂದು ಇತಿಹಾಸ ಪ್ರಸಿದ್ದ ಕಾಪು “ಪಿಲಿಕೋಲ” – vishwanews24

ಮೇ 16ರಂದು ಇತಿಹಾಸ ಪ್ರಸಿದ್ದ ಕಾಪು "ಪಿಲಿಕೋಲ" ಕಾಪು: ತನ್ನದೇ ಆದ ವಿಶಿಷ್ಟ- ವೈಶಿಷ್ಟ್ಯತೆಗಳಿಂ­ದಾಗಿ ಕರಾ­ವಳಿ ಜಿಲ್ಲೆ­ಗಳು ಮಾತ್ರವಲ್ಲದೇ ದೇಶ-ವಿದೇ­ಶ­ಗ­ಳ­ಲ್ಲಿಯೂ…

1 hour ago

ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: SDPI ಖಂಡನೆ -vishwanews24

ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: ಎಸ್‌ ಡಿ ಪಿ ಐ ಖಂಡನೆ…

3 hours ago

ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂ. ಅನುದಾನ: ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು ಧನ್ಯವಾದ ಸಲ್ಲಿಕೆ – vishwanews24

ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂಪಾಯಿ ಅನುದಾನ: ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು ಧನ್ಯವಾದ ಸಲ್ಲಿಕೆ ಕಾರ್ಕಳದಲ್ಲಿ…

3 hours ago

ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ  ಕೇಂದ್ರ ಸಚಿವರಿಗೆ ಮನವಿ – vishwanews24

ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ  ಕೇಂದ್ರ ಸಚಿವರಿಗೆ ಮನವಿ ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ…

3 hours ago