Featured

ಬಿಗ್ ಬಾಸ್ 13 ವಿನ್ನರ್, ಹಿಂದಿ ಕಿರುತೆರೆಯ ಪ್ರಖ್ಯಾತ ನಟ ಸಿದ್ದಾರ್ಥ್ ಶುಕ್ಲ ನಿಧನ -Vishwanews24

‘ಬಿಗ್ ಬಾಸ್ 13’ ವಿನ್ನರ್ ಸಿದ್ದಾರ್ಥ್ ಶುಕ್ಲಾ ಇನ್ನಿಲ್ಲ..

ಹೃದಯಾಘಾತದಿಂದ ಮೃತಪಟ್ಟ ಸಿದ್ದಾರ್ಥ್ ಶುಕ್ಲಾ..

ಹಿಂದಿ ಕಿರುತೆರೆಯ ಪ್ರಖ್ಯಾತ ನಟ ಸಿದ್ದಾರ್ಥ್ ಶುಕ್ಲಾ ಕೊನೆಯುಸಿರೆಳೆದಿದ್ದಾರೆ. ‘ಬಿಗ್ ಬಾಸ್ 13’ ಕಾರ್ಯಕ್ರಮದಲ್ಲಿ ವಿಜೇತರಾಗಿ ಹೊರಹೊಮ್ಮಿದ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ. 40 ವರ್ಷ ವಯಸ್ಸಿನ ಸಿದ್ದಾರ್ಥ್ ಶುಕ್ಲಾ ಅಕಾಲಿಕ ನಿಧನದಿಂದ ಹಿಂದಿ ಕಿರುತೆರೆ ತಾರೆಯರು ಮತ್ತು ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ.

ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ, ಸಿದ್ದಾರ್ಥ್ ಶುಕ್ಲಾ ಮೃತಪಟ್ಟಿರುವುದನ್ನು ಮುಂಬೈನ ಕೂಪರ್ ಆಸ್ಪತ್ರೆ ದೃಢಪಡಿಸಿದೆ. ನಿದ್ದೆ ಮಾಡುವ ಮುನ್ನ ಕೆಲ ಔಷಧಿಗಳನ್ನು ಸಿದ್ದಾರ್ಥ್ ಶುಕ್ಲಾ ಸೇವಿಸಿದ್ದರು ಎನ್ನಲಾಗಿದೆ. ಹೃದಯಾಘಾತದಿಂದ ಸಿದ್ದಾರ್ಥ್ ಶುಕ್ಲಾ ನಿಧನರಾಗಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸದ್ಯ ಸಿದ್ದಾರ್ಥ್ ಶುಕ್ಲಾ ಅವರ ಮೃತದೇಹದ ಪೋಸ್ಟ್ ಮಾರ್ಟಂ ನಡೆಯುತ್ತಿದೆ.

ಸಿದ್ದಾರ್ಥ್ ಶುಕ್ಲಾ ….

ಡಿಸೆಂಬರ್ 12, 1980 ರಂದು ಮುಂಬೈನಲ್ಲಿ ಜನಿಸಿದವರು ಸಿದ್ದಾರ್ಥ್ ಶುಕ್ಲಾ. ಅಶೋಕ್ ಶುಕ್ಲಾ-ರಿತಾ ಶುಕ್ಲಾ ದಂಪತಿಯ ಮಗನಾಗಿ ಜನಿಸಿದ ಸಿದ್ದಾರ್ಥ್ ಶುಕ್ಲಾ ಇಂಟೀರಿಯರ್ ಡಿಸೈನಿಂಗ್‌ನಲ್ಲಿ ಪದವಿ ಪಡೆದಿದ್ದರು. ಇಂಟೀರಿಯರ್ ಡಿಸೈನರ್ ಆಗಿ ಕೆಲ ವರ್ಷ ಕೆಲಸ ಮಾಡಿದ ಸಿದ್ದಾರ್ಥ್ ಶುಕ್ಲಾ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟರು. 2005ರಲ್ಲಿ ಟರ್ಕಿಯಲ್ಲಿ ನಡೆದ ‘ವರ್ಲ್ಡ್ಸ್ ಬೆಸ್ಟ್ ಮಾಡೆಲ್’ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನ ನಗೆ ಬೀರಿದರು. ನಂತರ ಅನೇಕ ಜಾಹೀರಾತುಗಳಲ್ಲಿ ಸಿದ್ದಾರ್ಥ್ ಶುಕ್ಲಾ ಕಾಣಿಸಿಕೊಂಡರು.

ಸಿದ್ದಾರ್ಥ್ ಶುಕ್ಲಾ ಹಿಂದಿ ಕಿರುತೆರೆಗೆ ಪದಾರ್ಪಣೆ ಮಾಡಿದ್ದು 2008 ರಲ್ಲಿ. ಅದು ‘ಬಾಬುಲ್ ಕಾ ಆಂಗನ್ ಚೂಟೇ ನಾ’ ಧಾರಾವಾಹಿ ಮೂಲಕ. ಬಳಿಕ ‘ಲವ್ ಯೂ ಜಿಂದಗಿ’, ‘ಬಾಲಿಕಾ ವಧು’, ‘ದಿಲ್ ಸೇ ದಿಲ್ ತಕ್’ ಧಾರಾವಾಹಿಗಳಲ್ಲಿ ಸಿದ್ದಾರ್ಥ್ ಶುಕ್ಲಾ ಅಭಿನಯಿಸಿದರು. ಇವು ಸಿದ್ದಾರ್ಥ್ ಶುಕ್ಲಾಗೆ ಅಪಾರ ಜನಪ್ರಿಯತೆ ತಂದುಕೊಡ್ತು.

2019 ರಲ್ಲಿ ‘ಬಿಗ್ ಬಾಸ್ 13’ ಕಾರ್ಯಕ್ರಮದಲ್ಲಿ ಸಿದ್ದಾರ್ಥ್ ಶುಕ್ಲಾ ಸ್ಪರ್ಧಿಸಿದ್ದರು. ‘ಬಿಗ್ ಬಾಸ್’ ಕಾರ್ಯಕ್ರಮದ ಮೂಲಕ ಸಿದ್ದಾರ್ಥ್ ಶುಕ್ಲಾ ವೀಕ್ಷಕರ ಮನ ಗೆದ್ದರು. ಹಾಗೇ, ‘ಬಿಗ್ ಬಾಸ್ 13’ ವಿಜೇತರಾಗಿ ಹೊರಹೊಮ್ಮಿದರು. ‘ಬಿಗ್ ಬಾಸ್ 13’ ಬಳಿಕ ಮ್ಯೂಸಿಕ್ ವಿಡಿಯೋಗಳಲ್ಲೂ ಸಿದ್ದಾರ್ಥ್ ಶುಕ್ಲಾ ಕಾಣಿಸಿಕೊಂಡಿದ್ದರು. ‘ಬಿಗ್ ಬಾಸ್ 14’ ಕಾರ್ಯಕ್ರಮದ ‘ವೀಕೆಂಡ್ ಕಾ ವಾರ್’ ಸಂಚಿಕೆಗೆ ಸಲ್ಮಾನ್ ಖಾನ್ ಮಿಸ್ ಆದಾಗ ಅವರ ಸ್ಥಾನ ತುಂಬಿದ್ದವರು ಇದೇ ಸಿದ್ದಾರ್ಥ್ ಶುಕ್ಲಾ.

‘ಝಲಕ್ ದಿಖಲಾಜಾ 6’, ‘ಫಿಯರ್ ಫ್ಯಾಕ್ಟರ್: ಖತರೋಂಕೆ ಖಿಲಾಡಿ 7’ ಕಾರ್ಯಕ್ರಮಗಳಲ್ಲೂ ಸಿದ್ದಾರ್ಥ್ ಶುಕ್ಲಾ ಸ್ಪರ್ಧಿಸಿದ್ದರು. ‘ಫಿಯರ್ ಫ್ಯಾಕ್ಟರ್: ಖತರೋಂಕೆ ಖಿಲಾಡಿ 7’ ರಿಯಾಲಿಟಿ ಶೋನಲ್ಲೂ ಸಿದ್ದಾರ್ಥ್ ಶುಕ್ಲಾ ವಿನ್ನರ್ ಆದರು.

ಬಾಲಿವುಡ್‌ನ ಕೆಲ ಸಿನಿಮಾಗಳಲ್ಲೂ ಅಭಿನಯಿಸಿರುವ ಸಿದ್ದಾರ್ಥ್ ಶುಕ್ಲಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿರುವಾಗಲೇ ಸಿದ್ದಾರ್ಥ್ ಶುಕ್ಲಾ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಸಿದ್ದಾರ್ಥ್ ಶುಕ್ಲಾ ನಿಧನಕ್ಕೆ ಬಾಲಿವುಡ್, ಹಿಂದಿ ಕಿರುತೆರೆ ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Vishwa News 24

Recent Posts

ಉಡುಪಿ : ಬಾಲಕಿ ನಾಪತ್ತೆ -vishwanews24

ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…

12 hours ago

ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಉಬರ್’ ಸೇವೆ ಆರಂಭ -vishwanews24

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…

16 hours ago

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ -vishwanews24

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…

18 hours ago

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ -vishwanews24

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…

19 hours ago

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ -vishwanews24

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…

20 hours ago

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ -vishwanews24

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…

20 hours ago