Featured

ಬಿಜೆಪಿ ಸೇರಿದ ಸೂಪರ್ ಸ್ಟಾರ್..! ದೇಶದ ಹಿತಾದೃಷ್ಟಿಯಿಂದ ನಾನು ಮೋದಿಯವರನ್ನು ಬೆಂಬಲಿಸುತ್ತೇನೆ ಎಂದ ತಲೈವ…

ತಮಿಳುನಾಡಿನಲ್ಲೂ ಕಮಲ ಅರಳಿಸಲಿದ್ದಾರೆ ರಜನಿಕಾಂತ್..

ತಮಿಳುನಾಡು :೨೦೧೯ರಲ್ಲಿ ಮತ್ತೆ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯೋದು ಅನುಮಾನವೇ ಇಲ್ಲ. ಈಗಾಗಲೇ ಹಲವಾರು ಸಮೀಕ್ಷೆಗಳು ಸಹಿತ ಮಾಧ್ಯಮಗಳು ನಡೆಸಿದ ಸರ್ವೇಗಳಲ್ಲಿಯೂ ಮೋದಿಯೇ ಟಾಪ್ ಎಂದಿದೆ. ಆದರೆ ಈಗ ಬಿಜೆಪಿ ಮುಂದಿರೋದು ಕೇವಲ ಗೆಲ್ಲಬೇಕೆನ್ನುವ ಉದ್ದೇಶ ಮಾತ್ರವಲ್ಲ. ಬದಲಾಗಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ತಂದುಕೊಳ್ಳಬೇಕು ಎನ್ನುವ ಉದ್ದೇಶ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲದ ತಮಿಳುನಾಡಿನಲ್ಲಿ ಸಹಿತ ದೇಶದಾದ್ಯಂತ ಕಮಲ ಅರಳಿಸಲು ಯೋಜನೆ ರೂಪಿಸಿಕೊಂಡಿದೆ..

ರಜನಿಕಾಂತ್ ಗೆ ಭಾರತೀಯ ಜನತಾ ಪಕ್ಷದ ಮೇಲಿನ ಒಲವು  ಇದೀಗ ಮತ್ತೆ ಭಾರತೀಯ ಜನತಾ ಪಕ್ಷ ಸೇರುವ ಇಚ್ಛೆಯನ್ನು ರಜನಿ ಚರ್ಚಿಸುತ್ತಿದ್ದಾರೆ. ಕಳೆದ ೭ ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ರಜನಿಕಾಂತ್ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹಿತ ಅನೇಕ ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಏಳು ದಿನದಿಂದ ಬರೋಬ್ಬರಿ ಐದು ಸಭೆಗಳನ್ನು ರಜನಿಕಾಂತ್ ಬಿಜೆಪಿ ನಾಯಕರೊಂದಿಗೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ರಜನಿಕಾಂತ್ ಬಿಜೆಪಿ ಸೇರೋದು ಪಕ್ಕಾ ಎನ್ನಲಾಗಿದೆ.

ಜಾಹೀರಾತು : ವಿಶ್ವ ಬಂಟರ ಸಮ್ಮಿಲನ 2018

ತನ್ನದೇ ಪಕ್ಷದ ಸೈನ್ಯವನ್ನು ಕಮಲ ಪಾಳಯ ಸಂಘಟಿಸುತ್ತಿದೆ. ತಮಿಳುನಾಡಿನ ಪುದುಚೇರಿಯಲ್ಲಿ ಈಗಾಗಲೇ 10000 ಕಾರ್ಯಕರ್ತರನ್ನು ಸಂಘಟಿಸಿ ಬೂತ್ ಸಬಲೀಕರಣದತ್ತ ಬಿಜೆಪಿ ಪಕ್ಷವನ್ನು ಸಂಘಟಿಸುತ್ತಿದೆ. ಡಿಎಂಕೆ ಪಕ್ಷದ ನಾಯಕ, ಕರುಣಾ ನಿಧಿಯವರ ಮಗ ಸ್ಟಾಲಿನ್ ಇದ್ದರೂ ಬಿಜೆಪಿ ಹಾಗೂ ರಜನಿಕಾಂತ್ ಒಂದಾದರೆ ಅವರನ್ನು ಎದುರಿಸೋದು ಕಷ್ಟ. ರಜನಿಕಾಂತ್‍ಗೂ ಒಬ್ಬಂಟಿಯಾಗಿ ಪಕ್ಷವನ್ನು ಗೆಲ್ಲಿಸೋದು ಸುಲಭದ ಮಾತಲ್ಲ. ಅತ್ತ ಕಮಲ್ ಹಸನ್ ಪಕ್ಷ ಸಂಘಟಿಸುತ್ತಿದ್ದರೂ ಅವರ ಮೇಲೆ ಜನರಿಗೆ ಉತ್ತಮ ಅಭಿಪ್ರಾಯವಿಲ್ಲ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕಮಲ್ ಹಸನ್ ಜನರಿಂದ ದೂರವಾಗಿದ್ದಾರೆ. ಆದರೆ ರಜನಿಕಾಂತ್ ಮಾತ್ರ ನರೇಂದ್ರ ಮೋದಿ ರೀತಿಯ ನಡವಳಿಕೆಯಿಂದ ಹೆಸರಾಗಿದ್ದಾರೆ. ಹೀಗಾಗಿ ಇಂತಹಾ ನಾಯಕ ಬೇಕು ಎಂದು ಜನರೂ ಅಪೇಕ್ಷಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ರಜನಿಕಾಂತ್ ಒಂದಾದರೆ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಕ್ರಾಂತಿಗೂ ಒಳಗಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿದೆ.

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

22 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

22 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

23 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

23 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

1 day ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

1 day ago