ಕೋಲ್ಕತಾ,: ಬಿಜೆಪಿಯನ್ನು ಸೋಲಿಸಲು ತನ್ನೊಂದಿಗೆ ಕೈಜೋಡಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮನವಿಯನ್ನು ಸಿಪಿಐ, ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳು ಗುರುವಾರ ತಳ್ಳಿಹಾಕಿವೆ.
”ಪಶ್ಚಿಮಬಂಗಾಳದಲ್ಲಿ ಎಡಪಕ್ಷಗಳ ನೂರಾರು ಕಚೇರಿಗಳನ್ನು ಈಗಲೂ ತೃಣಮೂಲ ಕಾಂಗ್ರೆಸ್ ಆಕ್ರಮಿಸಿಕೊಂಡಿದೆ” ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ ಹೇಳಿದ್ದಾರೆ. ”ಎಡಪಕ್ಷಗಳಿಗೆ ಸೇರಿದ ನೂರಕ್ಕೂ ಅಧಿಕ ಮಂದಿಯನ್ನು ಹತ್ಯೆಗೈಲಾಗಿದೆ. ಸಾವಿರಾರು ಮಂದಿಯನ್ನು ಅವರ ಗ್ರಾಮಗಳಿಂದ ಹೊರದಬ್ಬಲಾಗಿದೆ. ಈಗಲೂ ಆ ರೀತಿಯ ದಾಳಿಗಳು ನಡೆಯುತ್ತಲೇ ಇವೆ” ಎಂದವರು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿಯವರು ಪ್ರತಿಪಕ್ಷಗಳನ್ನು ರಾಜಕೀಯ ವಿರೋಧಿಗಳ ಹಾಗೆ ಕಾಣದೆ, ಶತ್ರುಗಳೆಂಬಂತೆ ನೋಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಆಕೆ ನೀಡಿರುವ ಕೊಡುಗೆ ಅರ್ಥಹೀನವೆಂದು ಅವರು ಹೇಳಿದ್ದಾರೆ.
ಬಿಜೆಪಿಯ ವಿರುದ್ಧ ಹೋರಾಟ ನಡೆಸುವ ಬಗ್ಗೆ ನಿಜಕ್ಕೂ ಮಮತಾ ಅವರು ಗಂಭೀರವಾಗಿ ಯೋಚಿಸುತ್ತಿರುವರಾದರೆ ಅವರು ಆ ಬಗ್ಗೆ ನಮ್ಮ ಹಿರಿಯ ನಾಯಕತ್ವದ ಜೊತೆ ಮಾತನಾಡಲಿ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ. ”ಮಮತಾಜಿ ಅವರ ವೈಫಲ್ಯಗಳಿಂದಾಗಿಯೇ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಬೆಳೆಯುತ್ತಾ ಹೋಗುತ್ತಿದೆ” ಎಂದವರು ಹೇಳಿದ್ದಾರೆ.
ಬಂಗಾಳದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕರೆ ನೀಡುವ ಹಕ್ಕನ್ನು ಕೂಡಾ ಮಮತಾ ಕಳೆದುಕೊಂಡಿದ್ದಾರೆ. ಫ್ಯಾಶಿಸಂ ವಿರುದ್ಧ ಹೋರಾಡುವಂತಹ ವಿಶ್ವಾಸಾರ್ಹತೆಯನ್ನು ಟಿಎಂಸಿ ಹೊಂದಿಲ್ಲವೆಂದು ಅವರು ಹೇಳಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…