ಬೆಂಗಳೂರು; ರೆಬೆಲ್ ಶಾಸಕರನ್ನು ಅನರ್ಹತೆಗೊಳಿಸಿದ ಸ್ಪೀಕರ್ ತೀರ್ಪನ್ನು ವಿರೋಧಿಸಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಇಲ್ಲ, ಮಾನ ಮರ್ಯಾದೆಯೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ..
ಸೋಮವಾರ ಬಿಜೆಪಿ ವಿಶ್ವಾಸಮತ ಯಾಚನೆ ಹಿನ್ನೆಲೆ ವಿಧಾನಸೌಧದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, “ಸ್ಪೀಕರ್ ಆದೇಶವನ್ನ ಬಿಜೆಪಿಯವರು ವಿರೋಧಿಸಿದ್ದಾರೆ. ಆದರೆ, ಅತೃಪ್ತ ಶಾಸಕರ ಮೇಲೆ ಅವರಿಗೆ ಯಾಕೆ ಇಷ್ಟು ಕಾಳಜಿ ಎಂದು ಅರ್ಥವಾಗುತ್ತಿಲ್ಲ. ಅಸಲಿಗೆ ಸ್ಪೀಕರ್ ತೀರ್ಪು ಪಕ್ಷಾಂತರ ಮಾಡುವವರಿಗೆ ಇದು ಶಾಸ್ತಿ. ಅವರ ತೀರ್ಪನ್ನು ಬಿಜೆಪಿ ನಾಯಕರು ಶ್ಲಾಘಿಸಬೇಕಿತ್ತು. ಅದನ್ನು ಬಿಟ್ಟು ತೀರ್ಪನ್ನು ವಿರೋಧಿಸುವುದು ಸರಿಯಲ್ಲ. ಅವರ ಅವಧಿಯಲ್ಲಿ ಸ್ಪೀಕರ್ ಕೆ.ಜಿ. ಬೋಪಯ್ಯ ಕಾನೂನು ಬಾಹೀರವಾದ ತೀರ್ಪು ನೀಡಿದ್ದರು. ಹೀಗಾಗಿ ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ವಿರೋಧಿಸಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಉಳಿದಿಲ್ಲ, ಅವ್ರಿಗೆ ಮಾನ ಮರ್ಯಾದೆಯೂ ಇಲ್ಲ” ಎಂದು ಕಿಡಿಕಾರಿದ್ದಾರೆ.
ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್-ಜೆಡಿಎಸ್‌ನ ಎಲ್ಲ 17 ಶಾಸಕರು ಅನರ್ಹಗೊಳಿಸುವ ಮಹತ್ವದ ತೀರ್ಮಾನವನ್ನು ಸ್ಪೀಕರ್ ರಮೇಶ್ ಕುಮಾರ್ ಪ್ರಕಟಿಸಿದ್ದಾರೆ. ಕಳೆದ ಗುರುವಾರ ಮೂವರನ್ನು ಅನರ್ಹಗೊಳಿಸಿದ್ದ ಅವರು ಭಾನುವಾರ ಉಳಿದ 14 ಮಂದಿಯನ್ನು ಶಾಸಕತ್ವದಿಂದ ಮುಕ್ತಗೊಳಿಸಿದ್ದಾರೆ. ಇದರಿಂದಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವುದು ಸರಾಗವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ತೀರ್ಮಾನದಿಂದ ಬಂಡಾಯಗಾರರ ಭವಿಷ್ಯ ಡೋಲಾಯಮಾನವಾಗಿದ್ದರೂ ಬಿಜೆಪಿಗೆ ಇದು ವರದಾನವಾದಂತಾಗಿದೆ. ವಿಶ್ವಾಸಮತ ಸಾಬೀತಿನಲ್ಲಿ ಹೊಸ ಸರಕಾರ ಯಶಸ್ವಿಯಾದರೆ ಮುಂದಿನ 6 ತಿಂಗಳು ನಿರಾತಂಕವಾಗಲಿದೆ ಎನ್ನಲಾಗಿದೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…