ಬಿಜೆಪಿಯವರು ಕೇಸರಿ ಬಾವುಟ ಹಿಡಿದರೆ, ಮುಸ್ಲಿಮರು ರಾಷ್ಟ್ರಧ್ವಜ ಹಿಡಿತಾರೆ,ಹಿಂದೂ ರಾಷ್ಟ್ರದ ಹೆಸರಿನಲ್ಲಿ ಬಿಜೆಪಿ ದೇಶವನ್ನು ಒಡೆಯಲು ಹೊರಟಿದ್ದಾರೆ: ಕುಮಾರಸ್ವಾಮಿ

ರಾಮನಗರ: ಬಿಜೆಪಿಯ ನಾಯಕರು ಕೇಸರಿಯ ಬಾವುಟವನ್ನು ಹಿಡಿದುಕೊಂಡು ಬೀದಿಯಲ್ಲಿ ಓಡಾಡುತ್ತಾರೆ. ಮುಸಲ್ಮಾನರು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ತಮ್ಮ ಬದ್ಧತೆ ಏನು ಎಂದು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಯ ನಾಯಕರಿಗೂ ಮುಸ್ಲಿಮರಿಗೂ ಇರುವಂತಹ ವ್ಯತ್ಯಾಸವನ್ನು ನಾವು ಇಲ್ಲಿಯೇ ಗುರುತಿಸಬಹುದು ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಚನ್ನಪಟ್ಟಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಸಿಎಎ, ಎನ್‍ಆರ್ ಸಿ ವಿರೋಧಿಸಿ ಪೆಟ್ಟಾ ಶಾಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೇಶ ಯಾರಪ್ಪನಾ ಆಸ್ತಿಯೂ ಅಲ್ಲ. ಬಿಜೆಪಿಯ, ಆರ್‍ಎಸ್‍ಎಸ್‍ನ ಆಸ್ತಿ ಅಲ್ಲ. ಈ ದೇಶದ ಆಸ್ತಿ. ಸರ್ವಧರ್ಮಗಳ ಆಸ್ತಿ ಎಂಬುದು ಇತಿಹಾಸ ನೋಡ್ತಾ ಬಂದಾಗ ಗೊತ್ತಾಗುತ್ತೆ ಎಂದು ತಿಳಿಸಿದರು.

ಹಿಂದೂ ರಾಷ್ಟ್ರದ ಹೆಸರಿನಲ್ಲಿ ದೇಶವನ್ನು ಒಡೆಯಲು ಹೊರಟಿದ್ದಾರೆ. ದೇಶಕ್ಕೆ ಹಲವಾರು ರೀತಿಯ ಸಂಪತ್ತನ್ನು ಕೊಡುವಲ್ಲಿ ಮುಸ್ಲಿಮರ ಕಾಣಿಕೆಯೂ ಇದೆ. ಎಂದು ತಿಳಿಸಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292