ಉಡುಪಿ

ಬಿಜೆಪಿ ಅಧಿಕಾರಕ್ಕೇರಿಸಲು ಆರೆಸ್ಸೆಸ್‌ ಕಾರ್ಯತಂತ್ರ..

ಕುಂದಾಪುರ: “ಬಿಜೆಪಿಗೆ ನಮ್ಮದೇನಿದ್ದರೂ ಮಾರ್ಗದರ್ಶನ ಮಾತ್ರ. ನೇರ ರಾಜಕೀಯಕ್ಕಿಳಿಯುವುದಿಲ್ಲ’ ಎಂದು ಈ ಹಿಂದೆ ಹೇಳಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಪರ ನೇರವಾಗಿ ಅಖಾಡಕ್ಕಿಳಿದ ಲಕ್ಷಣಗಳು ಗೋಚರಿಸಿವೆ.

ಈ ಮೊದಲು ಚುನಾವಣೆಗೆ ಸ್ಪರ್ಧಿಸುವವರನ್ನು ಸಂಘವು ಜವಾಬ್ದಾರಿ ಮುಕ್ತಗೊಳಿಸಿ ಬಿಜೆಪಿಗೆ ಕಳುಹಿಸುತ್ತಿತ್ತು. ಪರಿವಾರ‌ದವರನ್ನು ಹೊರತುಪಡಿಸಿ ಉಳಿದವರಾರೂ ಪ್ರಚಾರದಲ್ಲಿ ನೇರವಾಗಿ ಭಾಗಿಯಾಗುತ್ತಿರಲಿಲ್ಲ. ಆದರೆ ಈ ಬಾರಿ 6 ತಿಂಗಳಿನಿಂದ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಪ್ರತಿನಿಧಿಗಳ ಮೂಲಕ ಚುನಾವಣೆ ತಯಾರಿ ನಡೆಸಿದೆ. ತ್ರಿಪುರಾದಲ್ಲಿ ಮಾಣಿಕ್‌ ಶಾ ಸರಕಾರವನ್ನು ಕೆಳಗಿಳಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿತ್ತು.

 ಸಿದ್ಧತೆ 
ಸಂಘದಿಂದ ವಿಸ್ತಾರಕ್‌, ಪರಿವಾರ ಸಂಘಟನೆ (ವಿಹಿಂಪ, ಬಜರಂಗ ದಳ, ಹಿಂಜಾವೇ, ಬಿಎಂಎಸ್‌, ಕಿಸಾನ್‌ ಸಂಘ, ಸಹಕಾರ ಭಾರತಿ)ಯಿಂದ ಒಬ್ಬ ಉಸ್ತುವಾರಿ ಹಾಗೂ ಬಿಜೆಪಿಯಿಂದ ಒಬ್ಬ ಪ್ರತಿನಿಧಿಯುಳ್ಳ ತಂಡ ರಚಿಸಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ, ಮಹಾಶಕ್ತಿ ಕೇಂದ್ರಗಳೆಂದು ಪ್ರತೀ ಜಿ.ಪಂ. ಕ್ಷೇತ್ರ, ಮೂರ್ನಾಲ್ಕು ಮತಗಟ್ಟೆ (ಬೂತ್‌)ಗಳಿಗೆ ಒಂದು ಶಕ್ತಿಕೇಂದ್ರ ಹೀಗೆ ಪ್ರತೀ ಮತಗಟ್ಟೆಗೂ ಇಂಥ ತಂಡ ನಿಯೋಜಿಸಲಾಗಿದೆ. ಅಂದರೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ 7-8 ಮಹಾಶಕ್ತಿ ಕೇಂದ್ರಗಳು, 50-70 ಶಕ್ತಿ ಕೇಂದ್ರಗಳಿರುತ್ತವೆ. ಪಕ್ಷ, ಪರಿವಾರ ಸಂಘಟನೆಗಳನ್ನು ಜತೆಗೊಯ್ದು ಆಂತರಿಕ ಭಿನ್ನಮತ ಹೋಗಲಾಡಿಸಿ ಪ್ರತಿ ಮತದಾರರನ್ನು ಕಾರ್ಯಕರ್ತರು ತಲುಪುವಂತೆ ಸಮನ್ವಯ ಸಾಧಿಸುವುದು ಅವರ ಕರ್ತವ್ಯ.

ಪೇಜ್‌ ಪ್ರಮುಖ್‌
ಮತದಾರರ ಪಟ್ಟಿಯ ಪ್ರತಿ ಪುಟಕ್ಕೊಬ್ಬ ಪೇಜ್‌ ಪ್ರಮುಖ್‌ರನ್ನು ನಿಯೋಜಿಸಿದ್ದು, ಅವರು ನೇಮಿಸಲ್ಪಟ್ಟವ ಆ ಪುಟದ ಅಷ್ಟೂ ಮನೆಗಳಿಗೆ ಭೇಟಿ ನೀಡಿ ಅವುಗಳನ್ನು ಬಿಜೆಪಿ ಮತಗಳಾಗಿ ಪರಿವರ್ತಿಸಲು ಪ್ರಯತ್ನಿಸಬೇಕು. ಇದಲ್ಲದೇ ವಾಟ್ಸಪ್‌ ಗ್ರೂಪ್‌, ಫೇಸ್‌ಬುಕ್‌ ಪೇಜ್‌ಗಳ ಪ್ರಚಾರ ತಂತ್ರ ಪ್ರತ್ಯೇಕ.

ದಕ್ಷಿಣ ಕನ್ನಡ ಹಾಗೂ ಉಡುಪಿ ಸಹಿತ ರಾಜ್ಯದಲ್ಲಿ ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಬಲಿಷ್ಠವಾಗಿರುವಲ್ಲಿ 3 ತಿಂಗಳಿನಿಂದ ಹಾಗೂ ಉಳಿದೆಡೆ 6 ತಿಂಗಳಿನಿಂದ ತಂಡ ಕಾರ್ಯ ಪ್ರವೃತ್ತವಾಗಿದೆ. ದ.ಕ., ಉಡುಪಿ, ಕೊಡಗಿಗೆ ಆರ್‌ಎಸ್‌ಎಸ್‌ನ ವಿಭಾಗ ಕಾರ್ಯವಾಹ ನಾ. ಸೀತಾರಾಮ್‌ ಅವರು ಮುಖ್ಯಸ್ಥರಾಗಿದ್ದಾರೆ. ಸಂಘದ ವಿಸ್ತಾರಕ್‌ರನ್ನು ತವರು ಪ್ರದೇಶ ಬಿಟ್ಟು ಬೇರೆಡೆಗೆ ನಿಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಒದಗಿ ಸಲು ಉತ್ತರಪ್ರದೇಶ ಚುನಾವಣೆಗೆ ಬಳಸಿದ ಬೈಕ್‌ಗಳನ್ನು ಕಳೆದ ಜುಲೈನಲ್ಲಿ ರಾಜ್ಯಕ್ಕೆ ತರಿಸಲಾಗಿತ್ತು. ಆದರೆ ಅವುಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಬಳಸುತ್ತಿಲ್ಲ.

ಸಂಘದಿಂದ ನಿಯೋಜಿತರಾದವರು ಪಕ್ಷದ ಹಣ ಅಪೇಕ್ಷಿಸುವಂತಿಲ್ಲ. ಪಕ್ಷದ ಕಾರ್ಯಕ್ರಮ, ಸಮಾವೇಶ ದಲ್ಲಿ ಭಾಗಿಯಾಗುವಂತಿಲ್ಲ. ಎಲ್ಲಿಯೂ ಪಕ್ಷದ ಧ್ವಜ, ಚಿಹ್ನೆ ಬಳಸು ವಂತಿಲ್ಲ. ಜತೆಗಿರುವ ಪರಿವಾರ ಸಂಘಟನೆಗಳ ಕಾರ್ಯಕರ್ತರ ಅಥವಾ ಬಿಜೆಪಿ ಕಾರ್ಯಕರ್ತರ ಕೆಲಸ ಮತ ಯಾಚನೆ. ಮತದಾನದಲ್ಲಿ ಭಾಗವಹಿಸುವಂತೆ ವಿನಂತಿ, ದೇಶಭಕ್ತಿ ಇತ್ಯಾದಿ ಕುರಿತುಷ್ಟೇ ಸ್ವಯಂ ಸೇವಕರು ಮಾತನಾಡಬಹುದು. ಈ ಮೊದಲು ಸಂಸತ್‌ ಚುನಾವಣೆ ಸಂದರ್ಭ ಸಂಘ ಪರಿವಾರದ ಕಾರ್ಯಕರ್ತರು “ಸ್ವಯಂ’ ಆಗಿ ನೇರ ಮತಯಾಚನೆಗೆ ಇಳಿಯುತ್ತಿದ್ದರು. ರಾಜ್ಯ ಚುನಾವಣೆಯಲ್ಲಿ ಈ ರೀತಿ ಇದೇ ಮೊದಲು ಎನ್ನುತ್ತಾರೆ ಸಂಘದ ಮುಖಂಡರೊಬ್ಬರು.

 

Vishwa News 24

Recent Posts

ಕಾಪು : ಟೈಮಿಂಗ್ಸ್ ವಿಚಾರದಲ್ಲಿ  ಉದ್ದೇಶಪೂರ್ವಕ ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ ; ನಾಲ್ವರ ಬಂಧನ -vishwanews24

ಕಾಪು : ಟೈಮಿಂಗ್ಸ್ ವಿಚಾರದಲ್ಲಿ  ಉದ್ದೇಶಪೂರ್ವಕ ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ - ನಾಲ್ವರ ಬಂಧನ ಕಾಪು : ಕಾಪು…

7 hours ago

ಯುವಜನರಲ್ಲಿ ಹೆಚ್ಚುತ್ತಿರುವ HIV ಸೋಂಕು: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯ ..! vishwanews24

ಯುವಜನರಲ್ಲಿ ಹೆಚ್ಚುತ್ತಿರುವ HIV ಸೋಂಕು: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯ ..! ಬೆಂಗಳೂರು: ಯುವ ಜನರಲ್ಲಿ ಹೆಚ್‌ಐವಿ ಸೋಂಕಿನ…

9 hours ago

ಸಚಿವ ಯು.ಟಿ. ಖಾದರ್ ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ – vishwanews24

ಸಚಿವ ಯು.ಟಿ. ಖಾದರ್ ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

10 hours ago

ಸಿ. ಟಿ. ರವಿ ಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಸರಕಾರ : ಯಶ್ಪಾಲ್ ಸುವರ್ಣ – vishwanews24

ಸಿ. ಟಿ. ರವಿ ಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕಲು ಮುಂದಾದ ಕಾಂಗ್ರೆಸ್ ಸರಕಾರ :…

10 hours ago

ಮಂಗಳೂರು: ಡಿವೈಡರ್‌ಗೆ ಬಸ್  ಡಿಕ್ಕಿ; 35 ಪ್ರಯಾಣಿಕರು ಅಪಾಯದಿಂದ ಪಾರು – vishwanews24

ಮಂಗಳೂರು: ಡಿವೈಡರ್‌ಗೆ ಬಸ್  ಡಿಕ್ಕಿ; 35 ಪ್ರಯಾಣಿಕರು ಅಪಾಯದಿಂದ ಪಾರು ಮಂಗಳೂರು : ಖಾಸಗಿ ಎಕ್ಸ್‌ಪ್ರೆಸ್ ಬಸ್ಸೊಂದು ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ…

10 hours ago

ಕಾಪು  : ಟೈಮಿಂಗ್ಸ್ ವಿಚಾರದಲ್ಲಿ ಜಗಳ: ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ – vishwanews24

 ಕಾಪು  : ಟೈಮಿಂಗ್ಸ್ ವಿಚಾರದಲ್ಲಿ ಜಗಳ: ಎಕ್ಸ್‌ಪ್ರೆಸ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಗುದ್ದಾಟ ಕಾಪು: ಎರಡು ಎಕ್ಸ್‌ಪ್ರೆಸ್ ಬಸ್ಸುಗಳು ಪ್ರಯಾಣಿಕರು…

10 hours ago