Featured

ಬಿಜೆಪಿ-ಆರೆಸ್ಸೆಸ್ ನಡುವಿನ ತಿಕ್ಕಾಟದಿಂದಾಗಿ ನಳಿನ್ ಕುಮಾರ್‌ ಗೆ ಡಮ್ಮಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದೆ :ಐವನ್ ಡಿಸೋಜ -Vishwanews24

ಮಂಗಳೂರು: ತಮ್ಮ ವಿರೋಧಿಗಳ ನಡುವೆ ರಾಜಕೀಯವಾಗಿ ಹುಳಿ ಹಿಂಡುವ ಕೆಲಸವನ್ನು ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಿವಿಮಾತು ಹೇಳಿದ್ದಾರೆ.

ಡಿಕೆಶಿ ಬಂಧನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡ ಇದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ತಿರುಗೇಟು ನೀಡಿರುವ ಐವನ್ ಡಿಸೋಜ, ತಮ್ಮ ಮಾತಿನ ಮೇಲೆ ನಳಿನ್ ಹಿಡಿತವಿಟ್ಟು ಮಾತನಾಡಲಿ. ನಿಮ್ಮ ಪಕ್ಷದವರು ಒಂದು ನಿಲುವನ್ನು ತೆಗೆದುಕೊಳ್ಳಲಿ. ಆ ಮೇಲೆ ಬೇರೆಯವರು ಏನು ಮಾತನಾಡುತ್ತಾರೆ ಅನ್ನುವದನ್ನು ಯೋಚಿಸಿ ಎಂದು ದೂರಿದ್ದಾರೆ.

ನಳಿನ್ ಅವರು ಹಾಗೆ ಹೇಳುವ ಮೊದಲು ಅದಕ್ಕೆ ಅವರಲ್ಲಿ ಏನು ಆಧಾರ ಇದೆ ಎಂಬುದನ್ನು ಬಹಿರಂಗಪಡಿಸಲಿ. ಅದು ಬಿಟ್ಟು ತಮ್ಮ ವಿರೋಧಿಗಳ ನಡುವೆ ರಾಜಕೀಯವಾಗಿ ಹುಳಿ ಹಿಂಡುವ ಕೆಲಸವನ್ನು ಮಾಡಬಾರದು ಎಂದು ಹೇಳಿದ್ದಾರೆ.

ನಳಿನ್ ಕುಮಾರ್‌ ಕಟೀಲ್‌ಗೆ ಬಿಜೆಪಿ-ಆರೆಸ್ಸೆಸ್ ನಡುವಿನ ತಿಕ್ಕಾಟದಿಂದಾಗಿ ಡಮ್ಮಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದೆ. ನಳಿನ್ ಸ್ಥಾನಮಾನ ಏನೆಂಬುದು ಕರಾವಳಿ ಜನರಿಗೆ ಗೊತ್ತಿದೆ. ಅದನ್ನು ಅವರು ಈಗ ರಾಜ್ಯಮಟ್ಟದಲ್ಲಿ ತೋರಿಸುತ್ತಿದ್ದಾರೆ. ಅವರು ಬಾಯಿ ಬಿಟ್ಟಷ್ಟು ಬಿಜೆಪಿಗೆ ಹಾನಿ. ಜಿಲ್ಲೆಗೆ ಬೆಂಕಿ ಹಾಕುತ್ತೇನೆ ಎಂದು ಹೇಳಿದ ಸಂಸದರು ಇವರು. ಆದ್ದರಿಂದ ಯಾರ ಮೇಲಾದರೂ ಆರೋಪ ಮಾಡುವಾಗ ಎಚ್ಚರ ವಹಿಸಿ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Vishwa News 24

Recent Posts

ಮಧ್ಯಪ್ರಾಚ್ಯ ಬಿಕ್ಕಟ್ಟು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ : ಆರ್‌ಬಿಐ ಗವರ್ನರ್ -vishwanews24

ಮಧ್ಯಪ್ರಾಚ್ಯ ಬಿಕ್ಕಟ್ಟು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ : ಆರ್‌ಬಿಐ ಗವರ್ನರ್ ನವದೆಹಲಿ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟು…

7 minutes ago

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ – vishwanews24

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ ನವದೆಹಲಿ: ಹಲವು ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಕ್ಕೆ ತೆರೆ ಬಿದ್ದಿದ್ದು ಕೇರಳದ ನೂತನ…

14 minutes ago

ಹಿಜಾಬ್‌ಗೆ ಗ್ರೀನ್ ಸಿಗ್ನಲ್ : ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳ ಭಾರೀ ವಿರೋಧ ; ರಾಜ್ಯಾದ್ಯಂತ  ಉಗ್ರ ಪ್ರತಿಭಟನೆ ಎಚ್ಚರಿಕೆ – vishwanews24

ಹಿಜಾಬ್‌ಗೆ ಗ್ರೀನ್ ಸಿಗ್ನಲ್ : ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳ ಭಾರೀ ವಿರೋಧ ; ರಾಜ್ಯಾದ್ಯಂತ  ಉಗ್ರ ಪ್ರತಿಭಟನೆ ಎಚ್ಚರಿಕೆ…

20 minutes ago

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

1 day ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

2 days ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago