ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತವನ್ನಾಗಿಸಬೇಕಿದೆ. ಹಾಗಾಗಿ ಮಾಜಿ ಸಚಿವರಾದ ರಮಾನಾಥ್ ರೈ ಹಾಗೂ ಯು.ಟಿ.ಖಾದರ್ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರನ್ನು ಬಿಜೆಪಿಗೆ ಕರೆ ತನ್ನಿ ಎಂದು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ಪುತ್ತೂರಿನ ಕಬಕದಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಕಾಂಗ್ರೆಸ್ ಸಧ್ಯದಲ್ಲಿಯೇ ನಶಿಸಿಹೋಗಲಿದೆ. ಬಿಜೆಪಿ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವತ್ತೂ ಸ್ವಾಗತವಿದೆ ಎಂದರು.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಕರೆತರುವ ಕೆಲಸ ಮಾಡಬೇಕು. ರಮಾನಾಥ್ ರೈ, ಖಾದರ್ ಅವರನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬರುವಂತಾಗಬೇಕು. ಈ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಸರಿಲ್ಲದಂತೆ ಮಾಡಬೇಕಿದೆ ಎಂದರು.
ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…
ಉಡುಪಿ: ಎಸ್.ಟಿ ಮೋರ್ಚಾದ ನೂತನ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಣೆ ಉಡುಪಿ: ಭಾರತೀಯ ಜನತಾ ಪಾರ್ಟಿಯ ಎಸ್.ಟಿ ಮೋರ್ಚಾ ಜಿಲ್ಲಾ…
ದೇಶದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪಠ್ಯ ಪರಿಷ್ಕರಣೆ.. ಮೊದಲ ಬಾರಿಗೆ NCERT 9ನೇ ಕ್ಲಾಸ್‌ನಲ್ಲಿ ತುರ್ತು ಪರಿಸ್ಥಿತಿ ಪಠ್ಯ…
ಮಂಗಳೂರು: ಜೂ.29ರಿಂದ ಜು.6ರವರೆಗೆ ದೇಶದಾದ್ಯಂತ ವಿಶೇಷ ಸಹಕಾರ ಸಪ್ತಾಹ ಆಚರಣೆ ಮಂಗಳೂರು: ಸುಮಾರು 122 ವರ್ಷಗಳ ಇತಿಹಾಸವಿರುವ ರಾಷ್ಟ್ರದ ಸಹಕಾರ…
ಉಡುಪಿ: ಬಡಗುಬೆಟ್ಟು ಸೊಸೈಟಿಯಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ; 15 ಲಕ್ಷ ಮೌಲ್ಯದ ಪರಿಕರ ವಿತರಣೆ ಉಡುಪಿ: ಸಹಕಾರ…
ಇಂದು ಮಂಗಳೂರಿಗೆ ಶಾರುಕ್ ಖಾನ್ ಆಗಮನ : ಸಾರ್ವಜನಿಕರಿಗೆ ಪೋಲಿಸರ ಮಾರ್ಗಸೂಚಿ ಪ್ರಕಟ ಮಂಗಳೂರು: ನಗರದಲ್ಲಿ ಗುರುವಾರ ಆಯೋಜಿಸಲಾಗಿರುವ ಬಹುನಿರೀಕ್ಷಿತ…