Featured

ಬಿಜೆಪಿ ಬಡ, ಮಧ್ಯಮ ವರ್ಗದವರ ಬದುಕನ್ನು ದುರ್ಬಲ ಮಾಡಲು ಹೊರಟಿದೆ : ಈಶ್ವರ್ ಖಂಡ್ರೆ – vishwanews24

ಮೋದಿ ದುರಾಡಳಿತದ ವಿರುದ್ಧ ಮಾತಾಡಲು ಬಿಜೆಪಿಗರಿಗೆ ಸವಾಲು..

ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು..

ವಾಣಿಜ್ಯ ಸಿಲಿಂಡರ್ ದರ ಏರಿಕೆಗೆ ಈಶ್ವರ್ ಖಂಡ್ರೆ ಆಕ್ರೋಶ

ಬೆಂಗಳೂರು: ಪಂಚ ರಾಜ್ಯಗಳ ಮತದಾನ ಮುಗಿದ ಕೂಡಲೇ ಕೇಂದ್ರ ಬಿಜೆಪಿ ಸರ್ಕಾರ ವಾಣಿಜ್ಯ ಬಳಕೆ ಅಡುಗೆ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ದರ ಹೆಚ್ಚಳ ಮಾಡಿದ್ದು, ತನ್ನ ಬಡವರ ವಿರೋಧಿ ನೀತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ  ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 1ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದರ  ಸುಮಾರು 1,300 ರೂ. ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಊಟ, ತಿಂಡಿ, ಕಾಫಿ, ಟೀ ದರ ಹೆಚ್ಚಳ ಮಾಡುತ್ತಾರೆ. ಇದರ ಹೊರೆ ಶ್ರೀಸಾಮಾನ್ಯನ ಮೇಲೆ ಬೀಳಲಿದೆ. ಮತದಾನ ಮುಗಿದ ಕೂಡಲೇ ಕೇಂದ್ರ ಬಿಜೆಪಿ  ಸರ್ಕಾರ ಬಡ, ಮಧ್ಯಮವರ್ಗದವರ ಬದುಕನ್ನು ದುರ್ಬರ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: 

ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಅಡುಗೆ ಅನಿಲ ಪೂರೈಕೆ ಆಗದೆ ಈಗಾಗಲೇ ಹಲವು ಹೋಟೆಲ್‌ಗಳು ಬಂದ್ ಆಗಿದ್ದು, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಈ ಸನ್ನಿವೇಶದಲ್ಲಿ 993 ರೂ. ಪ್ರತಿ ಸಿಲಿಂಡರ್ ಗೆ ಹೆಚ್ಚಳ ಮಾಡುವ ಮೂಲಕ ಕಾರ್ಮಿಕ ದಿನದಂದು ಕೇಂದ್ರ ಸರ್ಕಾರ ತನ್ನ ಕಾರ್ಮಿಕ ವಿರೋಧಿ ನೀತಿ ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರತಿ ಸಾಲಲ್ಲಿ ನಿಂತರೂ ಸಿಎನ್‌ಜಿ ಅನಿಲ ಸಿಗದೆ ತತ್ತರಿಸಿರುವ ಆಟೋ ಚಾಲಕರ ಮೇಲೂ ಕೇಂದ್ರ ಸರ್ಕಾರ ಗದಾ ಪ್ರಹಾರ ಮಾಡಿದೆ. ಯುಪಿಎ ಕಾರ್ಯಕಾಲದಲ್ಲಿ ಅಡುಗೆ ಅನಿಲ ದರ 10-15 ರೂ. ಹೆಚ್ಚಳವಾದರೆ, ರೂಪಾಯಿ ಮೌಲ್ಯ ಡಾಲರ್ ಎದುರು ಕೆಲವೇ ಪೈಸೆ ಕುಸಿತವಾದರೂ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ನಾಯಕರು ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಅವರು ಈಗ ತಮ್ಮ ತಾಕತ್ತು ಪ್ರದರ್ಶಿಸಲಿ, ಪ್ರಧಾನಿ ನರೇಂದ್ರ ಮೋದಿ ದುರಾಡಳಿತದ ವಿರುದ್ಧ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: 

Vishwa News 24

Recent Posts

ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ: ಕೇಂದ್ರ ಸರ್ಕಾರ ಆದೇಶ – vishwanews24

ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ: ಕೇಂದ್ರ ಸರ್ಕಾರ ಆದೇಶ ಬೆಂಗಳೂರು: ಅಡುಗೆ ಎಣ್ಣೆ ಮೇಲಿನ ಆಮದು ಸುಂಕ…

17 hours ago

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಸೆ.28 ರಂದು ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸಲು ಕೋರ್ಟ್‌ ಆದೇಶ – vishwanews24

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಸೆ.28 ರಂದು ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸಲು ಕೋರ್ಟ್‌ ಆದೇಶ ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ…

17 hours ago

ಬರ ಪರಿಸ್ಥಿತಿ : ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಮಂತ್ರಿಗಳ ಕರ್ತವ್ಯ : ಸಿಎಂ – vishwanews24

ಬರ ಪರಿಸ್ಥಿತಿ : ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಮಂತ್ರಿಗಳ ಕರ್ತವ್ಯ : ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು : “ಕರ್ನಾಟಕದಲ್ಲಿ 200ಕ್ಕೂ…

18 hours ago

ವಾಕ್ ವಿತ್ ಕಮಿಷನರ್: ಮಂಗಳೂರಿನ ಹಂಪನಕಟ್ಟೆಯಲ್ಲಿ ಹೋಟೆಲ್ ಪರಿಶೀಲನೆ – vishwanews24

ವಾಕ್ ವಿತ್ ಕಮಿಷನರ್: ಮಂಗಳೂರಿನ ಹಂಪನಕಟ್ಟೆಯಲ್ಲಿ ಹೋಟೆಲ್ ಪರಿಶೀಲನೆ.. ಟ್ರೇಡ್ ಲೈಸೆನ್ಸ್ ಹಾಗೂ ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಫುಟ್‌ಪಾತ್ ಒತ್ತುವರಿ…

18 hours ago

ಮಂಗಳೂರು : ಎಂಡಿಎಂಎ ಮಾರಾಟಕ್ಕೆ ಯತ್ನ ; ಆರೋಪಿ ಬಂಧನ – vishwanews24

ಮಂಗಳೂರು : ಎಂಡಿಎಂಎ ಮಾರಾಟಕ್ಕೆ ಯತ್ನ ; 23.20 ಗ್ರಾಂ ಮಾದಕ ವಸ್ತು ವಶ, ಆರೋಪಿ ಬಂಧನ ಮಂಗಳೂರು: ಮಂಗಳೂರು…

18 hours ago

ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ  – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಉಡುಪಿ: ಟೀಂ ಇಂಡಿಯಾದ…

18 hours ago