Featured

ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಮೂರೂ ವರ್ಷದಲ್ಲಿ ನನಗೆ ಹಿತಕರವಾಗದ ಹಾಗೆ ಉಸಿರುಗಟ್ಟಿಸುವ ವಾತಾವರಣವಿತ್ತು : ಪ್ರಮೋದ್ ಮಧ್ವರಾಜ್ – Vishwanews24

ಬಿಜೆಪಿ ಯಾವುದೇ ಭರವಸೆ ನನಗೆ ಕೊಟ್ಟಿಲ್ಲ ; ನಾನಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ

ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ವಿಧಾನ ಸಭಾ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಸ್ಥಾನ ಲಭಿಸುವಲ್ಲಿ ನಾನು ಅಳಿಲ ಸೇವೆ ಮಾಡ್ತೇನೆ

ನಾನು ಸ್ವತಂತ್ರವಾಗಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇನೆ..

ಗ್ರಾಮೀಣ ಮಟ್ಟದಲ್ಲಿ ಈಗಾಗಲೇ ಬಿಜೆಪಿಗೆ ಶಕ್ತಿ ತುಂಬಕ್ಕಂತ ಕಾರ್ಯಕರ್ತರಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿದ್ದ ಸಮಸ್ಯೆ ಸರಿಪಡಿಸದೆ ಇರುವ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ.

ನಾನು ಯಾವುದೇ ರಾಷ್ಟ್ರಕಾರಣಕ್ಕೆ ಹೊರಟವ ಅಲ್ಲ,

ನಾನು ಹಳ್ಳಿಯ ರಾಜಕಾರಣ ಕೆಲಸ ಮಾಡಲು ಹೊರಟವ

ಉಡುಪಿ,: “ನಾನಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಬಿಜೆಪಿ ಯಾವುದೇ ಭರವಸೆ ನನಗೆ ಕೊಟ್ಟಿಲ್ಲ, ಇದು ಸ್ಪಷ್ಟ ವಿಚಾರ. ಒಬ್ಬ ಬಿಜೆಪಿ ಕಾರ್ಯಕರ್ತನಾಗಿ 2023 ವಿಧಾನ ಸಭಾ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಸ್ಥಾನ ಲಭಿಸುವಲ್ಲಿ ನಾನು ಅಳಿಲ ಸೇವೆ ಮಾಡ್ತೇನೆ” ಎಂದು ಬಿಜೆಪಿಗೆ ಸೇರ್ಪಡೆಗೊಂಡ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕರ್ನಾಟಕ ರಾಜ್ಯಾದ್ಯಂತ ಪಕ್ಷ ಎಲ್ಲಿ ಕೆಲಸ ಮಾಡಲು ಹೇಳುತ್ತೋ ಅಲ್ಲಿ ಕೆಲಸ ಮಾಡುತ್ತೇನೆ, ವಿಶೇಷವಾಗಿ ಮೀನುಗಾರ ಸಮುದಾಯವಿದ್ದಲ್ಲಿ ಅಲ್ಲಿ ಸ್ಪರ್ಧಿಸುವ ಗೆಲ್ಲಿಸುವ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುವೆ ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ ಎಂದರು.

2018 ರಲ್ಲಿ ಭಾರತೀಯ ಪಕ್ಷವನ್ನು ಸೇರ್ಪಡೆ ಆಗಬೇಕು ಎಂದು ಹೇಳಿದಾಗ, ಆಗ ಸೇರಿದಿದ್ರೆ ನನ್ನಷ್ಟು ದ್ರೋಹಿ ಬೇರೆ ಯಾರು ಇಲ್ಲ ಎಂದು ಆಗ ಮಂತ್ರಿಯಾಗಿದ್ದಾಗ ಬಿಜೆಪಿ ನನ್ನ ಆಹ್ವಾನದ ಬಗ್ಗೆ ವಿಚಾರ ಬಂದಾಗ ಹೇಳಿದ್ದೆ. ಈಗ ನಾನು ಯಾವುದೇ ಅಧಿಕಾರದಲ್ಲಿಲ್ಲ, ಚುನಾಯಿತ ಪ್ರತಿನಿಧಿ ಅಲ್ಲ. ನಾನು ಸ್ವತಂತ್ರವಾಗಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

ಇನ್ನು ರಾಜೀನಾಮೆ ಪತ್ರದಲ್ಲೂ ಉಲ್ಲೇಖ ಮಾಡಿದ್ದೇನೆ. ಪಕ್ಷಕ್ಕೆ ದುಡಿದ್ದೇನೆ. ಪಕ್ಷ ನನಗೂ ಕೊಡುಗೆ ಕೊಟ್ಟಿದೆ. ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಮೂರೂ ವರ್ಷದಲ್ಲಿ ನನಗೆ ಹಿತಕರವಾಗದ ಹಾಗೆ ಉಸಿರುಗಟ್ಟಿಸುವ ವಾತಾವರಣವಿದ್ದು, ಪಕ್ಷದ ವರಿಷ್ಟರಲ್ಲಿ ಪರಿಸ್ಥಿತಿಯನ್ನು ಸರಿಪಡಿಸಿ ಎಂದು ಸಮಸ್ಯೆಯನ್ನು ಹೇಳಿದಾಗ, ಸರಿಪಡಿಸದೆ ಇರುವ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅದರ ಹೊರತಾಗಿ ಈ ವೈರಲ್ ಆಗುತ್ತಿರುವ ಹಿಂದಿನ ವಿಡಿಯೋ ಮತ್ತು ಇವತ್ತಿನ ನಿರ್ಧಾರಕ್ಕೂ ಯಾವ ಸಂಬಂಧವಿಲ್ಲ ಎಂದರು.

1978ರಲ್ಲಿ ಇಂದಿರಾಗಾಂಧಿ ವಿರುದ್ಧ ವೀರೇಂದ್ರ ಪಾಟೀಲ್ ಸ್ಪರ್ಧೆ ಮಾಡುತ್ತಾರೆ, ಇಂದಿರಾಗಾಂಧಿಯನ್ನು ಟೀಕೆ ಮಾಡುತ್ತಾರೆ. ಎರಡೇ ವರ್ಷದಲ್ಲಿ ಅವರದೇ ಸಂಪುಟದಲ್ಲಿ ಪಾಟೀಲ್ ಕೈಗಾರಿಕಾ ಮಂತ್ರಿ ಆಗ್ತಾರೆ. ಇದೆಲ್ಲ ರಾಜಕೀಯದಲ್ಲಿ ಇರುವಂತದ್ದೇ. ವಿರೋಧ ಪಕ್ಷದಲ್ಲಿದ್ದುಕೊಂಡು ಆಡಳಿತ ಪಕ್ಷವನ್ನು ಮೆಚ್ಚಿಸಲಾಗುತ್ತ? ಈಗ ಆ ವಿಡಿಯೋವನ್ನು ಹರಿಯಬಿಡುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಅವರು ಅರಿತುಕೊಳ್ಳಬೇಕು ಎಂದಿದ್ದಾರೆ.

ಇನ್ನು ನಮ್ಮ ಬೆಂಬಲಿಯಾಗರು ಕಾಂಗ್ರೆಸ್ ಸೇರಲು ಆಸಕ್ತರಿದ್ದಾರೆ, ಆದರೆ ಬೂತ್ ಮಟ್ಟದಲ್ಲಿ ಗ್ರಾಮೀಣ ಮಟ್ಟದಲ್ಲಿ ಈಗಾಗಲೇ ಬಿಜೆಪಿಗೆ ಶಕ್ತಿ ತುಂಬಕ್ಕಂತ ಕಾರ್ಯಕರ್ತರಿದ್ದಾರೆ. ಅವರ ಮನಸ್ಸನ್ನು ಓಲೈಸಿ ಒಪ್ಪಿಗೆ ಪಡೆದು ಸೇರ್ಪಡೆ ಮಾಡಬೇಕಾಗುತ್ತದೆ. ಸ್ಥಳೀಯ ನಾಯಕರ, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ಮುಂದೆ ನಿರ್ಧಾರ ಮಾಡುತ್ತೇವೆ. ನಾನು ಯಾವುದೇ ರಾಷ್ಟ್ರಕಾರಣಕ್ಕೆ ಹೊರಟವ ಅಲ್ಲ, ನಾನು ಹಳ್ಳಿಯ ರಾಜಕಾರಣ ಕೆಲಸ ಮಾಡಲು ಹೊರಟವ ಎಂದು ಹೇಳಿದ್ದಾರೆ.

Vishwa News 24

Recent Posts

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ – vishwanews24

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…

8 hours ago

ಮಹಾರಾಷ್ಟ್ರ : ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ- vishwanews24

ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…

8 hours ago

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  – vishwanews24

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…

8 hours ago

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ – vishwanews24

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…

8 hours ago

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ – vishwanews24

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…

9 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

3 days ago