Former CM and JDS leader HD Kumarswamy addressing a press conference on the upcoming By Elections in Karnataka at JDS Office, in Bengaluru on Wednesday 13th November 2019 Pics: www.pics4news.com
ಬೆಂಗಳೂರು: ಬಿಜೆಪಿ ವಿರುದ್ದ ಹನುಮ ಜಯಂತಿ ದಿನದಿಂದಲೇ ಹೋರಾಟ ಆರಂಭಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಜೆಡಿಎಸ್ ಜನರಿಗೆ ಯಾಕೆ ಬೇಕು ಎಂಬುದನ್ನು 2023ಕ್ಕೆ ನಿರ್ಣಯಿಸಲಿದ್ದಾರೆ. ಬಿಜೆಪಿ ಆಡಳಿತದಿಂದಾಗಿ ರಾಜ್ಯಕ್ಕೆ ಹಲವು ಅನ್ಯಾಯವಾಗಿದ್ದು, ಇದಕ್ಕಾಗಿ ಮಿಷನ್ 123 ರೋಡ್ ಮ್ಯಾಪ್ ಮಾಡಿದ್ದೇವೆ. ರೈತರ ಹೊಲಕ್ಕೆ ನೀರು ನೀಡುವ ಭರವಸೆಯೊಂದಿಗೆ ಹೋರಾಟ ಪ್ರಾರಂಭಿಸಲಾಗುವುದು ಎಂದರು.
ಹಿಜಾಬ್, ಹಲಾಲ್ ವಿವಾದ ಎಬ್ಬಿಸಿ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಪ್ರತಿಭಟಿಸಲು ಕಾಂಗ್ರೆಸ್ಸಿಗರಿಗೆ ಧ್ವನಿಯೇ ಇಲ್ಲದಂತಾಗಿದೆ. ಹೀಗಾಗಿ ನಾವೇ ಇದರ ವಿರುದ್ಧ ನಿಲ್ಲುವುದು ಅಗತ್ಯವಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನ್ಯಾಯಪರವಾಗಿ ಇರುತ್ತೇವೆ ಎಂದವರು ತಿಳಿಸಿದರು.
ಕಾಶ್ಮೀರಿ ಫೈಲ್‍ಗೆ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡಿದಂತೆ ಸಚಿವರ ಕೊಠಡಿಯಲ್ಲಿರುವ ಕಡತಗಳಿಗೆ ಶೇ.100ರಷ್ಟು ರಿಯಾಯಿತಿ ಕೊಟ್ಟರೆ ರಾಜ್ಯದ ಭವಿಷ್ಯ ಚೆನ್ನಾಗಿರಲಿದೆ. ಇಂಧನ ಬೆಲೆ, ಸಿಮೆಂಟ್, ಕಬ್ಬಿಣ, ಅಡುಗೆ ಅನಿಲದ ಬೆಲೆ ಏರಿಕೆಯಿಂದಾಗಿ ಬಡವರ ಬದುಕು ಸಂಕಷ್ಟದೆಡೆಗೆ ಸಾಗಿದೆ. ಇದರ ವಿರುದ್ದ ಹೋರಾಡುವುದಕ್ಕೆ ವಿಶ್ವಹಿಂದು ಪರಿಷತ್ ಮುಂದಾಗಲಿ ಎಂದು ಇದೇ ವೇಳೆ ಅವರು ವಾಗ್ದಾಳಿ ನಡೆಸಿದರು.
ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಪಕ್ಷದ ಮುಖಂಡರಾದ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…