Featured

ಬಿಜೆಪಿ ವಿರುದ್ಧ ಹೋರಾಡಲು ನಾವೆಲ್ಲರೂ ಒಗ್ಗೂಡಬೇಕೆಂದು ನಾನು ಭಾವಿಸುತ್ತೇನೆ :ಮಮತಾ ಬ್ಯಾನರ್ಜಿ -Vishwanews24

ಕೋಲ್ಕತಾ,: ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಕಾಂಗ್ರೆಸ್, ಸಿಪಿಎಂ ಹಾಗೂ ಟಿಎಂಸಿ ಪರಸ್ಪರ ಕೈಜೋಡಿಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕರೆ ನೀಡಿದ್ದಾರೆ.

ರಾಜ್ಯ ವಿಧಾನಸಭಾ ಕಲಾಪದ ವೇಳೆ ಮಾತನಾಡುತ್ತಿದ್ದ ಅವರು, ಬಿಜೆಪಿಗೆ ಮತ ನೀಡಿದಲ್ಲಿ ಏನೇನಾಗುತ್ತದೆ ಎಂಬುದನ್ನು ಉತ್ತರ 24 ಪರಗಣ ಜಿಲ್ಲೆಯ ಭಟ್‌ಪಾರಾ ನಗರದ ಜನತೆ ಕಾಣುತ್ತಿದ್ದಾರೆ ಎಂದರು.

” ಬಿಜೆಪಿ ವಿರುದ್ಧ ಹೋರಾಡಲು ನಾವೆಲ್ಲರೂ (ಟಿಎಂಸಿ,ಕಾಂಗ್ರೆಸ್ ಹಾಗೂ ಸಿಪಿಎಂ) ಒಗ್ಗೂಡಬೇಕೆಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾವು ರಾಜಕೀಯವಾಗಿ ಕೈಜೋಡಿಸಬೇಕೆಂದು ಅರ್ಥವಲ್ಲ. ಆದರೆ ರಾಷ್ಟ್ರೀಯ ಮಟ್ಟದ ಸಾಮಾನ್ಯ ವಿಷಯಗಳ ವಿಚಾರವಾಗಿ ನಾವು ಒಟ್ಟಾಗಬಹುದಾಗಿದೆ” ಎಂದವರು ಹೇಳಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಪ್ರತಿಭಟನೆಯ ಬಿರುಗಾಳಿಯನ್ನು ಎಬ್ಬಿಸಿರುವ ‘ಕಟ್ ಮನಿ’ (ಲಂಚ) ವಿವಾದದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಮಮತಾ ಪಕ್ಷದ ಕಾರ್ಯಕರ್ತರನ್ನು ಶಿಸ್ತಿನಲ್ಲಿರಿಸಲು ಯತ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.ಆದರೆ ಪುರಾವೆಗಳಿಲ್ಲದೆ ಯಾರ ವಿರುದ್ಧ ಕಳಂಕ ಹೊರಿಸಲು ಸಾಧ್ಯವಿಲ್ಲ ಎಂದರು.

ಟಿಎಂಸಿಯ ಚುನಾಯಿತ ಪ್ರತಿನಿಧಿಗಳು ಫಲಾನುಭವಿಗಳಿಂದ ಕಟ್ ಮನಿ ಸ್ವೀಕರಿಸಬಾರದೆಂದು ಮಮತಾ ಭಾಷಣವೊಂದರಲ್ಲಿ ತಿಳಿಸಿದ್ದಾರೆ. ಅವರ ಈ ಹೇಳಿಕೆಯನ್ನು ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡು ರಾಜ್ಯಾದ್ಯಂತ ಚಳವಳಿ ನಡೆಸುತ್ತಿದೆ.

ಆಡಳಿತಾರೂಢ ಟಿಎಂಸಿ ಪಕ್ಷದ ಚುನಾಯಿತ ಪ್ರತಿನಿಧಿಗಳು ಸರಕಾರ ವಿವಿಧ ಯೋಜನೆಗಳ ಫಲಾನುಭವಿಗಳಿಂದ ತೆಗೆದುಕೊಳ್ಳುತ್ತಿದ್ದಾರೆನ್ನಲಾದ ಕಟ್ ಮನಿ (ಲಂಚ)ಯನ್ನು ಹಿಂದಿರುಗಿಸುವಂತೆ ಆಗ್ರಹಿಸಿ ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಬಿಜೆಪಿಯು ಪ್ರತಿಭಟನೆ ಹಾಗೂ ಧರಣಿಗಳನ್ನು ನಡೆಸುತ್ತಿದೆ.

ಸದನದಲ್ಲಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮಮತಾ ಅವರು ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಅಪರಿಚಿತವಾದ ಸಂಸ್ಕೃತಿಯೊಂದನ್ನು ತರಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದರು.

 

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

2 days ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago