ಉಡುಪಿ: ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಧರ್ಮದರ್ಶಿ ಗುರೂಜೀ ಸಾಯಿ ಈಶ್ವರ್ ಇವರು ಆಧ್ಯಾತ್ಮಿಕ ಸಾಧಕರಿಗಾಗಿ ಕರಾವಳಿಯ ಪ್ರಥಮ ಆಧ್ಯಾತ್ಮಿಕ ಆನ್ರೈಡ್ ಮೊಬೈಲ್ ಆ್ಯಪ್ ಅನ್ನು ಮಹಾಯೋಗಿ ಶ್ರೀ ಶ್ರೀ ಚಾಪ್ಪಮ್ಮ ದೇವಿಯವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ.
ತಾ|| 16 ಸೆಪ್ಟಂಬರಂದು ರಾಯಚೂರಿನ ಸಿಂಧನೂರಿನ ಕಲ್ಮಂಗಿಯಲ್ಲಿರುವ “ಅಮ್ಮನವರ ಕುಟೀರ” ಇಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗುವು ಎಂದು ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರ ಪ್ರಕಟಣೆಯಲ್ಲಿ ತಿಳಿದಿರುತ್ತಾರೆ.
ಗುರೂಜಿ ಸಾಯಿಈಶ್ವರ್ ಸದಾ ಅಸಹಾಯಕರ ಪರವಾಗಿ ಶ್ರಮಿಸುವವರು ಶ್ರೀ ಸಾಯಿ ಬಾಬಾರ ಪರಮಭಕ್ತರು, ಆರಾಧಕರು. ನೊಂದವರಿಗೆ ಸಾಂತ್ವಾನ ನುಡಿಯುವವರು. ಹಸಿದವರಿಗೆ ತುತ್ತು ಅನ್ನ ನೀಡಿದವರು. ಜಿಜ್ಞಾಸುಗಳಿಗೆ ಆಧ್ಯಾತ್ಮದ ಬೆಳಕು ಚೆಲ್ಲಿದವರು. ಆಧ್ಯಾತ್ಮ ವಲಯದಲ್ಲಿ ಇವರು ಮಾದರಿ ಆಧ್ಯಾತ್ಮ ಪರಿಚಾರಕರು.
ಈಗಲೇ ಹಲವು ಲಾಕ್ ಡೌನ್ ಸಮಯದಲ್ಲಿ ಆನ್ಲೈನ್ ಮೂಲಕ ಮಕ್ಕಳಿಗೆ “ನನ್ನ ಮನೆಯೇ ನನ್ನ ಗುರುಕುಲ” ಎಂಬ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿರುವಂತೆ ನಂತರ ಆನ್ಲೈನ್ ಮೂಲಕ “ಆತ್ಮ ಶುದ್ಧಿ ಕ್ರಿಯಾ ಧ್ಯಾನ” ಮಾಡಿದ್ದು ಇದರಲ್ಲಿ ಐದುನೂರಕ್ಕೂ ಹೆಚ್ಚು ಜನರು ಭಾಗವಹಿಸಿರುವರು, ನಂತರ “ಪಾಕೆಟ್ ಪೆಂಡುಲಂ” ತರಬೇತಿ ಶಿಬಿರವನ್ನು ಆನ್ಲೈನ್ ಮೂಲಕ ಎರಡು ಅವದಿಯಲ್ಲಿ ಮಾಡಿದ್ದು ಎಲ್ಲವೂ ಯಶಸ್ವಿಯಾಗಿರುತ್ತದೆ.
ಇದೀಗ ಲೋಕಾರ್ಪಣೆ ಮಾಡಲಾಗುವ ಆನ್ಡ್ರೈಡ್ ಆ್ಯಪ್ ನಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಲು ಬೇಕಾಗುವ ವ್ಯವಸ್ಥೆಯೂ ಇರುತ್ತದೆ. ಈ ಆಫ್ ಮೂಲಕ ಭೌತಿಕ, ಐಶ್ವರ್ಯ, ಆರೋಗ್ಯ, ಶಾಂತಿ, ಧ್ಯಾನ, ಯೋಗ, ಸಾಂತ್ವನ ಮತ್ತು ಆಧ್ಯಾತ್ಮಿಕ ಮಾಹಿತಿಗಳ ಕಣಜವೇ ಆಧ್ಯಾತ್ಮಿಕ ಸಾಧಕರಿಗೆ ಸಿಗಲಿದೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…