Featured

ಬುಲ್ಡೋಜರ್ ಕಾನೂನು ತರೋಕೆ ಇದು ಉತ್ತರ ಪ್ರದೇಶ ಅಲ್ಲ : ಡಿ ಕೆ ಶಿ – Vishwanews24

ಕರ್ನಾಟಕವನ್ನು ಯುಪಿಗೆ ಹೋಲಿಸಬೇಡಿ..

ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ..

ದಾವಣಗೆರೆ: ಬುಲ್ಡೋಜರ್ ಕಾನೂನು ತರೋಕೆ ಇದು ಉತ್ತರ ಪ್ರದೇಶ ಅಲ್ಲ.ಕರ್ನಾಟಕವನ್ನು ಯುಪಿಗೆ ಹೋಲಿಸಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿ ಬೇರೆ, ಬೇರೆ ವಿಷಯಗಳಿದ್ದವು ಅದಕ್ಕೆ ಬುಲ್ಡೋಜರ್ ಮಾದರಿ ಮಾಡುತ್ತಿದೆ ಅಲ್ಲಿನ ಸರ್ಕಾರ, ಆದರೆ ಕರ್ನಾಟಕದಲ್ಲಿ ಪ್ರಜ್ಞಾವಂತರಿದ್ದಾರೆ. ಬಿಜೆಪಿ ಸರ್ಕಾರ ಯಾಕಾದರೂ ಬಂದಿದೆ ಎಂದು ಜನ ಕೊರಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅವರು ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ. ಶಾಸಕರನ್ನು ಖರೀದಿ ಮಾಡಿ ಅಧಿಕಾರ ನಡೆಸುತ್ತಿದ್ದಾರೆ. ಇದನ್ನು ಸದನದಲ್ಲೇ ಶಾಸಕ ಶ್ರೀನಿವಾಸಗೌಡ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲದಿಂದ ಬಿಜೆಪಿ ಸರ್ಕಾರ ಜನ್ಮ ತಾಳಿದೆ. ಹೀಗಾಗಿ ಔಷಧಿ, ಗೊಬ್ಬರ, ನೇಮಕಾತಿ ಎಲ್ಲದರಲ್ಲೂ ದುಡ್ಡು ಹೊಡೆಯುತ್ತಿದ್ದಾರೆ.

ಕಾಮಗಾರಿಗಳಲ್ಲಿ ಶೇ.40 ಕಮಿಷನ್ ಪಡೆಯುತ್ತಿದ್ದಾರೆ. ಇವರು ಇವತ್ತು ಇರ್ತಾರೆ ನಾಳೆ ಹೋಗ್ತಾರೆ. ಆದರೆ, ಇದು ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದೆ. ಪ್ರಸ್ತುತವಾಗಿ ನಡೆಯುತ್ತಿರುವ ಧರ್ಮ ದಂಗಲ್‍ನಿಂದಾಗಿ ಬಿಜೆಪಿ ನಾಯಕರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಮುಸ್ಲಿಂರಿಗೆ ಪ್ರಧಾನ ಮಂತ್ರಿ ಆಗುವ ಅರ್ಹತೆ ಇದೆ, ಏಕೆ ಮುಸ್ಲಿಮರು ರಾಷ್ರಪತಿಯಾಗಿಲ್ವಾ, ವಿಜ್ಞಾನಿಗಳಾಗಿಲ್ವಾ, ಯಾಕೆ ಅವರ ಮೇಲೆ ಸುಮ್ಮನೆ ಭೇದ ಭಾವ ಮಾಡುತ್ತೀರಿ? ಬಿಜೆಪಿ ಕಷ್ಟಕಾಲದಲ್ಲಿ ಬಡವರ ಹೊಟ್ಟೆ ಮೇಲೆ ಬರೆ ಹಾಕಿದೆ. ಎಲ್ಲಾದರೂ ಗಾಡಿ ನಿಂತರೆ ಪಂಚರ್ ಯಾರು ಹಾಕುತ್ತಾರೆ? ಸಂವಿಧಾನ ಕಿತ್ತು ಹಾಕಲು ನಿಮ್ಮಿಂದ ಆಗತ್ತಾ?, ದೇಶ ಶಾಂತಿಯ ತೋಟವೆಂದು ನಾವು ಬದುಕಬೇಕು ಎಂದು ಅಭಿಪ್ರಾಯಪಟ್ಟರು.

ಹಲಾಲ್, ಪಲಾಲ್ ಎಲ್ಲ ಮಾಡಿದ್ದು ಬಿಜೆಪಿಯವರೇ. ನಮ್ಮ ಭಾಗದಲ್ಲಿ ಕಬ್ಬಾಳಮ್ಮ ದೇವಸ್ಥಾನ ಇದೆ ಅಲ್ಲಿ ಸಾವಿರ ಮರಿ ಕಡಿಯುತ್ತಾರೆ. ಕಡಿದಿದ್ದ ಮರಿಗಳನ್ನು ಮುಸ್ಲಿಂರೇ ಕ್ಲಿನ್ ಮಾಡುತ್ತಾರೆ. ಕೋಲಾರ, ರಾಮನಗರದಲ್ಲಿ ಮಾವಿನ ತೋಪಿಗೆ ಔಷಧಿ ಹೊಡೆಯುವರು ಯಾರು? ಚಿತ್ರದುರ್ಗದಲ್ಲಿ ಕುರಿಗಳ ವ್ಯಾಪಾರ ಆಗುತ್ತಿಲ್ಲ ಎನ್ನುವ ವರದಿ ನೋಡಿದೆ, 8 ಸಾವಿರಕ್ಕೆ ಮಾರಾಟವಾಗುತ್ತಿದ್ದ ಕುರಿಗಳು 3-4 ಸಾವಿರಕ್ಕೆ ಮಾರುತ್ತಿದ್ದಾರೆ. ಈಗ ಬಿಜೆಪಿಯವರು ಕುರಿಗಳನ್ನು ತಗೊಂಡು ಹೋಗುತ್ತಾರಾ?. ಇದರ ಪರಿಣಾಮ ಸಂತೆ, ಜಾತ್ರೆಗಳ ಮೇಲೆ ಬಿದ್ದಿದೆ ಎಂದು ಕಿಡಿಕಾರಿದರು.

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

5 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

7 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

7 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

7 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

8 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

8 hours ago