Featured

ಬೃಹತ್ ಜಾಹಿರಾತು ಫಲಕ ಬಿದ್ದು 3 ಸಾವು, ಐವರಿಗೆ ಗಂಭೀರ ಗಾಯ..

ಮುಂಬೈ: ಬೃಹತ್ ಜಾಹಿರಾತು ಫಲಕವೊಂದು ಬಿದ್ದು, ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಪತ್ನಿಯ ಚಿತಾಭಸ್ಮ ಬಿಟ್ಟು ಬರುತ್ತಿದ್ದ ಶಿವಾಜಿ ಪರದೇಶಿ (40) ಸೇರಿದಂತೆ ಶಾಮ್‍ರಾವ್ ಕಾಸರ್ (70) ಹಾಗೂ ಶಾಮ್‍ರಾವ್ ದೋತ್ರೆ (48) ಮೃತ ದುರ್ದೈವಿಗಳು. ಈ ಅವಘಡದಲ್ಲಿ ಐವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಯ ವಿವರ :ಪುಣೆಯ ರೈಲ್ವೇ ನಿಲ್ದಾಣದ ಸಮೀಪದ ಸಿಗ್ನಲ್‍ನಲ್ಲಿ ವಾಹಗಳು ನಿಂತಿದ್ದವು. ಈ ವೇಳೆ ಪಕ್ಕದಲ್ಲಿಯೇ ಇದ್ದ ಬೃಹತ್ ಜಾಹಿರಾತು ಫಲಕ ವಾಹನಗಳ ಮೇಲೆ ಬಿದ್ದಿದೆ. ಫಲಕ ಬಿದ್ದ ತೀವ್ರತೆಗೆ ವಾಹನದಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದು, ಎರಡು ಆಟೋಗಳು ಜಖಂಗೊಂಡಿವೆ.

ಸುಮಾರು ದಿನಗಳಿಂದ ಜಾಹಿರಾತು ಫಲಕವನ್ನು ದುರಸ್ತಿಗೊಳಿಸದೆ ಹಾಗೆ ಬಿಡಲಾಗಿತ್ತು. ಹೀಗಾಗಿ ಈ ಅವಘಡ ಸಂಭವಿಸಿದ್ದು, ಅದರ ಗುತ್ತಿಗೆದಾರರು ಹಾಗೂ ಕೆಲಸಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದೃಷ್ಟವಶಾತ್ ಎಂದಿನಂತೆ ಟ್ರಾಫಿಕ್ ಹೆಚ್ಚಾಗಿರಲಿಲ್ಲ. ಹೀಗಾಗಿ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸ್ ಉಪಆಯುಕ್ತ ಬಿ.ಸಿಂಗ್ ತಿಳಿಸಿದ್ದಾರೆ.

ರೈಲ್ವೇ ಇಲಾಖೆಯು ಕಳೆದ ಕೆಲವು ವರ್ಷಗಳಿಂದ ಜಾಹಿರಾತು ಎಜೆನ್ಸಿಗಳಿಗೆ ಫಲಕಗಳನ್ನು ಗುತ್ತಿಗೆ ನೀಡಿತ್ತು. ಆದರೆ ಅವರು ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ್ದ ಪರಿಣಾಮ ಅವಘಡ ಸಂಭವಿಸಿದೆ. ಈ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುಣೆ ವಿಭಾಗೀಯ ರೈಲ್ವೇ ಮಾನೇಜರ್ ಮಿಲಿಂದ್ ಡಿಯೋಸ್ಕರ್ ಹೇಳಿದ್ದಾರೆ.

ಇನ್ನು ಮುಂದೆ ಮುಂಜಾಗ್ರತ ಕ್ರಮವಾಗಿ ಜಾಹಿರಾತು ಫಲಕಗಳ ನಿರ್ವಹಣೆ ಮಾಡದ ಏಜೆನ್ಸಿಗಳ ಪರವಾನಿಗೆ ರದ್ದು ಮಾಡುತ್ತೇವೆ. ಜೊತೆಗೆ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆಸ್ಪತ್ರೆಯ ವೆಚ್ಚ ಪಾವತಿಸುತ್ತೇವೆ ಎಂದು ಮಿಲಿಂದರ್ ಭರವಸೆ ನೀಡಿದ್ದಾರೆ.

Vishwa News 24

Recent Posts

ಬೈಕಂಪಾಡಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ – vishwanews24

ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…

4 hours ago

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  – vishwanews24

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…

4 hours ago

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ – vishwanews24

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್​​ ಕಲಾಪ…

5 hours ago

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು – vishwanews24

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…

5 hours ago

ಹಿಂದೂ ಸಂಘಟನೆಗಳ ಮುಖಂಡರಿಗೆ ಜಿಲ್ಲೆ ಪ್ರವೇಶ ನಿಷೇಧ: ಉಡುಪಿ ಜಿಲ್ಲಾ ವಿಹಿಂಪ–ಬಜರಂಗದಳ ತೀವ್ರ ಖಂಡನೆ – vishwanews24

ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…

6 hours ago

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರ ಪ್ರವೇಶ ನಿರ್ಬಂಧ: ವಿಹಿಂಪ ಖಂಡನೆ – vishwanews24

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…

6 hours ago