ಬೆಂಗಳೂರು: ಮನೆ ಕೆಲಸಕ್ಕೆ ನೇಪಾಳ ಮೂಲದ ಜನರನ್ನ ನೇಮಿಸಿಕೊಂಡಿದ್ದೀರಾ, ಹಾಗಾದ್ರೆ ಹುಷಾರಾಗಿರಿ. ಬೆಂಗಳೂರು ಪೊಲೀಸರೇ ಈ ಮಾತು ಹೇಳ್ತಿದ್ದಾರೆ.
ಈ ವರ್ಷದ 11 ತಿಂಗಳಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಶ್ರೀಮಂತರ ಮನೆಗಳಲ್ಲಿ ಕಳ್ಳತನವಾಗಿದೆ. ಅವುಗಳಲ್ಲಿ ಬಹುತೇಕ ಮನೆಗಳಲ್ಲಿ ಕಳ್ಳತನ ಮಾಡಿರೋದು ನೇಪಾಳಿ ಮೂಲದವರೇ ಅನ್ನೋದು ಒಪ್ಪಿಕೊಳ್ಳಲೇಬೇಕಾದ ಸತ್ಯ ಸಂಗತಿ. ತುಂಬಾ ನಂಬಿಕಸ್ಥರಂತೆ ವರ್ತಿಸೋ ನೇಪಾಳಿ ಮೂಲದ ಕೆಲವರು, ಬೆಳಗಾಗೊ ಹೊತ್ತಿಗೆ ಮನೆಯನ್ನೆಲ್ಲಾ ಗುಡಿಸಿ ಗುಂಡಾತರ ಮಾಡಿ ಎಸ್ಕೇಪ್ ಆಗಿರ್ತಾರೆ. ದರೋಡೆ ವಿಚಾರ ಪೊಲೀಸರ ಕಿವಿ ತಲುಪೋ ಹೊತ್ತಿಗೆ ಆರೋಪಿಗಳು ಅರಾಮಾಗಿ ನೇಪಾಳ ಬಾರ್ಡರ್ ಕ್ರಾಸ್ ಆಗಿರ್ತಾರೆ. ಹಾಗಾಗಿ ನೇಪಾಳಕ್ಕೆ ಹೋದ ಕಳ್ಳರು, ಕದ್ದ ಐಟಂ ವಾಪಸ್ ಸಿಗೋದು ಬಹುತೇಕ ಡೌಟು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನ ಹನುಮಂತ ನಗರದಲ್ಲಿಇಂತಹದ್ದೊಂದು ಘಟನೆ ನಡೆದಿದೆ. ಇಲ್ಲಿನ ಶ್ರೀಮಂತ ಉದ್ಯಮಿಯೊಬ್ಬರ ಮನೆಯಲ್ಲಿ ನೇಪಾಳ ಮೂಲದ ಲಲಿತ್ ಮತ್ತು ಬಹದ್ದೂರ್ ಅನ್ನೋರು ಕೆಲಸಕ್ಕಿದ್ರು. ತುಂಬಾ ನಂಬಿಕಸ್ಥರಾಗಿದ್ದ ಕಾರಣ ಮನೆಯವರಿಗೆ ಯಾವುದೇ ಡೌಟ್ ಬಂದಿರಲಿಲ್ಲ. ಕಳೆದ ವಾರ ಉದ್ಯಮಿ ಕುಟುಂಬ ಸಮೇತ ಸಿಂಗಾಪುರ್ ಟ್ರಿಪ್ ಹೋಗಿದ್ರು. ಅವರು ವಿದೇಶಕ್ಕೆ ಹಾರುತ್ತಿದ್ದಂತೆ, ದಂಪತಿ ಮನೆಯಲ್ಲಿಟ್ಟಿದ್ದ 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ಡೈಮಂಡ್ ರಿಂಗ್, ವಜ್ರದ ವಸ್ತುಗಳು ಸೇರಿ ಬರೋಬ್ಬರಿ ಎರಡೂವರೆ ಕೋಟಿಯಷ್ಟು ಮೌಲ್ಯದ ವಸ್ತುಗಳನ್ನು ದೋಚಿ ಸೈಲೆಂಟ್ ಆಗಿ ನೇಪಾಳ ಸೇರ್ಕೊಂಡಿದ್ದಾರೆ. ವಾಪಸು ಮನೆಗೆ ಬಂದು ನೋಡುವಷ್ಟರಲ್ಲಿ ಕೆಲಸಗಾರರ ಕೈಚಳಕ ಗೊತ್ತಾಗಿ ಸಿಸಿಟಿವಿ ಚೆಕ್ ಮಾಡಿದ್ದಾರೆ. ಎರಡು ಬ್ಯಾಗ್‌ಗಳಲ್ಲಿ ಲೆಗೇಜ್ ರೀತಿಯಲ್ಲಿ ಹಣ, ಚಿನ್ನಾಭರಣ ತುಂಬಿಕೊಂಂಡು ಎಸ್ಕೇಪ್ ಆಗಿರೋದು ಪತ್ತೆಯಾಗಿದೆ.
ಈ ಸಂಬಂಧ ಹನುಮಂತನಗರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹಾಗಾಗಿ ದೂರದ ನೇಪಾಳಿಗಳು, ಸೇರಿದಂತೆ ಅಪರಿಚಿತರನ್ನು ಮನೆ ಕೆಲಸಕ್ಕೆ ನೇಮಿಸುವ ಮುನ್ನ ಎಚ್ಚರವಾಗಿರುವಂತೆ ಸಲಹೆ ನೀಡಿದ್ದಾರೆ.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…