ಕುಂದಾಪುರ: ಬೆಂಗಳೂರು – ಕುಂದಾಪುರ ನಡುವೆ ಭೂಕುಸಿತ ಹಾಗೂ ಹಲವು ವಾಹನ ಸಂಚಾರದ ರಸ್ತೆಗಳು ಬಂದ್ ಆಗಿರುವುದರಿಂದ ರಸ್ತೆ ಸಾರಿಗೆಯನ್ನೇ ನಂಬಿಕೊಂಡಿರುವ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಈ ಎರಡು ಪ್ರಮುಖ ಸ್ಥಳಗಳ ನಡುವೆ ಪ್ರಯಾಣಕ್ಕೆ ಅನುಕೂಲವಾಗುವಂತೆ ಉಡುಪಿ ಮತ್ತು ಕುಂದಾಪುರವನ್ನು ಬೆಂಗಳೂರಿಗೆ ಪಡೀಲ್ ಬೈಪಾಸ್ ಮೂಲಕ ಸಂಪರ್ಕಿಸಲು ವಿಶೇಷ ರಾತ್ರಿ ರೈಲು ಸೇವೆಯನ್ನು ಆರಂಭಿಸಬೇಕು ಎಂದು ರೈಲ್ವೇ ಇಲಾಖೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿಗೆ ಸ್ಪಂದನೆ ದೊರಕಿದೆ.
ಪರಿಣಾಮವಾಗಿ ಬೆಂಗಳೂರು ಮಂಗಳೂರು ರೈಲಿಗೆ ಮಡಗಾಂವ್ ಮಂಗಳೂರು ಜಂಕ್ಷನ್ ಮದ್ಯೆ ಮೂರು ದಿನಗಳ ವಿಶೇಷ ಲಿಂಕ್ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಈ ರೈಲುಗಳಿಗೆ ಗೋವಾದಿಂದ ಕುಂದಾಪುರ ಮಾರ್ಗವಾಗಿ ಸಂಪರ್ಕ ರೈಲು ಸೇವೆ ಆರಂಭಿಸಲು ರೈಲ್ವೇ ಇಲಾಖೆ ಅಸ್ತು ಎಂದಿದೆ. ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಇಂಜಿನ್ ಬದಲಾವಣೆ, ನೀರು ತುಂಬುವಿಕೆಯಂತ ವಿಳಂಭಧ ಕಾರಣದಿಂದ ಪ್ರತ್ಯೇಕ ಲಿಂಕ್ ರೈಲಿಗಾಗಿ ಮಾಡಲಾಗಿದ್ದ ಸಂಸದರ ಪತ್ರಕ್ಕೆ ರೈಲ್ವೇ ಸಚಿವಾಲಯ ಸ್ಪಂದಿಸಿದೆ. ಇದರಿಂದಾಗಿ ಬೆಂಗಳೂರು ಮಂಗಳೂರು ವಿಶೇಷ ರೈಲು ಬಂದ ಕೆಲವೇ ಹೊತ್ತಲ್ಲಿ ಉಡುಪಿ ಕುಂದಾಪುರ ಮಾರ್ಗವಾಗಿ ಗೋವಾ ಕಡೆ ತೆರಳಲಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…