Featured

ಬೆಂಗಳೂರು:  ಪತ್ನಿಯ ಹಣದಾಹಕ್ಕೆ ಮನನೊಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪತಿ – Vishwanews24

ಬೆಂಗಳೂರು:  ಪತ್ನಿಯ ಹಣದಾಹಕ್ಕೆ ಮನನೊಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪತಿ

ಬೆಂಗಳೂರು: ‘ಪತ್ನಿಗೆ ಹಣದಾಹ ಹೆಚ್ಚು. ಎಷ್ಟು ದುಡಿದರೂ ಆಕೆಗೆ ಇನ್ನಷ್ಟು ಹಣಬೇಕಾಗಿತ್ತು. ಜೀವನದಲ್ಲಿ ನೆಮ್ಮದಿಯೇ ಇಲ್ಲ. ಜೀವನದಲ್ಲಿ ಇಂತಹ ಹೆಂಗಸು ನನಗೆ ಬೇಡ. ಮಗನೇ ನಿಮ್ಮ ಅಮ್ಮ ಸರಿಯಿಲ್ಲ. ಆಕೆ ಜತೆ ಇರಬೇಡ…’ ಎಂದು ಡೆತ್​ನೋಟ್​ ಬರೆದಿಟ್ಟು ವ್ಯಕ್ತಿಯೊಬ್ಬ ಸಾವಿನ ಮನೆಯ ಕದ ತಟ್ಟಿರುವ ಘಟನೆ ಹನುಮಂತನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪತ್ನಿಯ ಹಣದಾಹಕ್ಕೆ ಮನನೊಂದ ಪತಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಹೆಸರು ಅಣ್ಣಯ್ಯ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಣ್ಣಯ್ಯ ಮತ್ತು ಉಮಾ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಮಗ ಇದ್ದಾನೆ. ಅಣ್ಣಯ್ಯ ಬನಶಂಕರಿಯ ಬಾರ್​ವೊಂದರಲ್ಲಿ ಕ್ಯಾಶಿಯರ್​ ಆಗಿದ್ದ. ಉಮಾ ಮನೆಯಲ್ಲೇ ಇರುತ್ತಿದ್ದರು. ದಂಪತಿ ಶ್ರೀನಿವಾಸನಗರದಲ್ಲಿ ವಾಸವಾಗಿದ್ದರು.

ಕಾಂಗ್ರೆಸ್ ಮುಖಂಡ ರವಿರಾಜ ಕೊರವಿ ಬಿಜೆಪಿ ಸೇರ್ಪಡೆ – Vishwanews24

ಈ ಮಧ್ಯೆ ಪತ್ನಿ ಉಮಾ ಹೆಚ್ಚಿನ ಹಣಕ್ಕಾಗಿ ಪತಿ ಅಣ್ಣಯ್ಯಗೆ ಪೀಡಿಸುತ್ತಿದ್ದಳು. ಅದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಇದರಿಂದ ಬೇಸತ್ತ ಅಣ್ಣಯ್ಯ ಡೆತ್​ನೋಟ್​ ಬರೆದಿಟ್ಟು ಮನೆಯಲ್ಲಿ ಫ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಣ್ಣಯ್ಯ ಬರೆದ ಡೆತ್​ನೋಟ್​ ವೈರಲ್​ ಆಗಿದೆ. ‘ಜೀವನದಲ್ಲಿ ನನಗೆ ನೆಮ್ಮದಿಯೇ ಇಲ್ಲ. ನನ್ನ ಸಾವಿಗೆ ನನ್ನ ಹೆಂಡತಿಯೇ ಕಾರಣ. ಏಕೆಂದರೆ ಅವಳಿಗೆ ದುಡ್ಡೇ ಮುಖ್ಯ. ನಾನು ಏನೇ ಕೆಲಸ ಮಾಡಿದರೂ ನನ್ನ ಹೆಂಡತಿಗೆ ಇಷ್ಟ ಇಲ್ಲ. ಆದರೂ ಅವಳಿಗೆ ದುಡ್ಡು ಬೇಕು. ಎಷ್ಟು ದುಡಿದರೂ ಆಕೆಗೆ ಇನ್ನಷ್ಟು ಹಣಬೇಕಾಗಿತ್ತು. ದೇವರೇ ಇಂತಹ ಹೆಂಗಸು ನನಗೆ ಬೇಡ. ಯಾವ ಹುಡುಗರಿಗೂ ಇಂತಹ ಹೆಂಡತಿ ಸಿಗೋದು ಬೇಡ. ಜೀವನದಲ್ಲಿ ಇಂತಹ ಹೆಂಗಸು ನನಗೆ ಬೇಡ. ಮಗನೇ ನಿಮ್ಮ ಅಮ್ಮ ಸರಿಯಿಲ್ಲ. ಆಕೆ ಜತೆ ಇರಬೇಡ… ಮಿಸ್​ ಯೂ ಮಗನೇ’ ಎಂದು ಅಣ್ಣಯ್ಯ ಡೆತ್​ನೋಟ್​ ಬರೆದಿದ್ದಾರೆ.

🌀 ಕ್ಲಿನಿಕ್​ಗೆ ಬರುತ್ತಿದ್ದ ಮಹಿಳೆಯರ ಖಾಸಗಿ ಅಂಗಗಳ ರಹಸ್ಯ ವಿಡಿಯೋ ಫೋಟೋ ಸೆರೆ ಹಿಡಿದು ವಿಕೃತಿ.. 🌐 ಬೆಂಗಳೂರಿನ ನಕಲಿ ವೈದ್ಯನ ನಕಲಿ ವೈದ್ಯನ ಬಂಧಿಸಿದ ಪೊಲೀಸರು..

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

1 day ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

1 day ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

1 day ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

1 day ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

1 day ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

1 day ago