Featured

ಬೆಂಗಳೂರು : ಬ್ರಿಟನ್ ವೈರಸ್ ದೃಢ ಹಿನ್ನಲೆ : 28 ದಿನ ಅಪಾರ್ಟ್ಮೆಂಟ್  ಸೀಲ್ ಡೌನ್ -Vishwanews24

ಬೆಂಗಳೂರು : ಬ್ರಿಟನ್ ವೈರಸ್ ದೃಢ ಹಿನ್ನಲೆ : ತಾಯಿ, ಮಗಳು ವಾಸವಿರುವ  ಅಪಾರ್ಟ್ಮೆಂಟ್ 28 ದಿನ ಸೀಲ್ ಡೌನ್ -Vishwanews24

ಬೆಂಗಳೂರು: ಬ್ರಿಟನ್ ನಿಂದ ನಗರಕ್ಕೆ ಹಿಂದಿರುಗಿದ್ದಂತ ತಾಯಿ, ಮಗಳು ಹಾಗೂ ಮತ್ತೋರ್ವ ವ್ಯಕ್ತಿ ಸೇರಿದಂತೆ ಮೂವರಿಗೆ ಯುಕೆ ಕೊರೋನಾ ರೂಪಾಂತರ ವೈರಸ್ ಸೋಂಕು ದೃಢಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ತಾಯಿ, ಮಗಳು ವಾಸವಿರುವಂತ ಅಪಾರ್ಟ್ಮೆಂಟ್ ಅನ್ನು 28 ದಿನಗಳ ಕಾಲ ಸೀಲ್ ಡೌನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಇಂದು ಐಸಿಎಂಆರ್ ಬ್ರಿಟನ್ ರೂಪಾಂತರ ವೈರಸ್ ಬೆಂಗಳೂರಿನ ಮೂವರಿಗೆ ತಗುಲಿರುವುದು ದೃಢಪಟ್ಟ ಹಿನ್ನಲೆಯಲ್ಲಿ, ತಾಯಿ, ಮಗಳು ವಾಸವಿರುವಂತ ವಸಂತಪುರದ ಅಪಾರ್ಟ್ಮೆಂಟ್ ಗೆ ತೆರಳಿ ಅಪಾರ್ಟ್ಮೆಂಟ್ ನಲ್ಲಿರುವಂತ ನಿವಾಸಿಗಳ ಮನವೊಲಿಸುವಂತ ಪ್ರಯತ್ನಕ್ಕೆ ಇಳಿದಿದ್ದಾರೆ. ತಾಯಿ, ಮಗಳು ಸಂಪರ್ಕಿತರನ್ನು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಿದೆ.

ಇನ್ನೂ ವಸಂತ ಪುರದ ತಾಯಿ ಮಗಳು ವಾಸವಿರುವಂತ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಸಾಂಸ್ಥಿಕ ಕ್ವಾರಂಟೈನ್ ಗೆ ಮನವಿ ಮಾಡಿರುವಂತ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು, 28 ದಿನಗಳ ಕಾಲ ಅಪಾರ್ಟ್ಮೆಂಟ್ ಸೀಲ್ ಡೌನ್ ಮಾಡಲು ನಿರ್ಧರಿಸಿದೆ.

ಈ ಅಪರ್ಟ್ಮೆಂಟ್‌ ನಿವಾಸಿಗಳನ್ನ ಹೋಟೆಲ್‌ʼನಲ್ಲಿ ಕ್ವಾರೆಂಟೈನ್‌ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಅಂಬುಲೆನ್ಸ್‌ ಸಮೇತ ಆಗಮಿಸಿದ್ದರು. ಆದ್ರೆ, ಇದಕ್ಕೊಪ್ಪದ ಸ್ಥಳೀಯರು, ತಮ್ಮನ್ನ ನಾವು ನಮ್ಮ ಮನೆಯಲ್ಲಿಯೇ ಕ್ವಾರೆಂಟೈನ್‌ ಆಗ್ತೇವೆ. ಬೇಕಿದ್ರೆ, ಇಡೀ ಅಪರ್ಟಮೇಂಟ್‌ ಸೀಲ್‌ ಡೌನ್‌ ಮಾಡಿ ಎಂದು ಒತ್ತಾಯ ಮಾಡಿದ್ರು. ನಿವಾಸಿಗಳ ಒತ್ತಾಯಕ್ಕೆ ಮಣಿದ ಬಿಬಿಎಂಪಿ ಅಧಿಕಾರಿಗಳು ಅಪರ್ಟ್ಮೆಂಟ್‌ ಸೀಲ್‌ ಮಾಡಲು ನಿರ್ಧಾರಿಸಿದೆ.

ದು 25 ಫ್ಲಾಟ್​ಗಳಿರುವ ಅಪಾರ್ಟ್​ಮೆಂಟ್ ಆಗಿದ್ದು, ಇಲ್ಲಿನ ನಿವಾಸಿಗಳಲ್ಲಿ ಬಹುತೇಕರು ಐಟಿ-ಬಿಟಿ ಉದ್ಯೋಗಿಗಳು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇಬ್ಬರು, ದ್ವಿತೀಯ ಸಂಪರ್ಕದಲ್ಲಿ 35 ಮಂದಿ ಇರುವುದು ಗೊತ್ತಾಗಿದೆ. ಸುಮಾರು 40 ಮಂದಿಯನ್ನು ಅಪಾರ್ಟ್​ಮೆಂಟ್​ನಿಂದ ಶಿಫ್ಟ್​ ಮಾಡಿ, ಸಾಂಸ್ಥಿಕ ಕ್ವಾರಂಟೈನ್ ಮಾಡುವ ಉದ್ದೇಶದಿಂದ ಇಲ್ಲಿಗೆ ಬಿಬಿಎಂಪಿ ಅಧಿಕಾರಿಗಳು ಆಗಮಿಸಿದ್ದರು. ಆದರೆ ನಿವಾಸಿಗಳು ಮಾತ್ರ ಯಾವುದೇ ಒತ್ತಾಯಕ್ಕೂ ಜಗ್ಗಲಿಲ್ಲ.

ನೀವು ಬೇಕಿದ್ದರೆ ಅಪಾರ್ಟ್​ಮೆಂಟ್​ನ್ನು ಸೀಲ್​ಡೌನ್ ಮಾಡಿ.. ನಾವು ಇಲ್ಲೇ ಇರುತ್ತೇವೆ. ನೀವು ಹೋಟೆಲ್​ಗಳಿಗೆ ಕರೆದುಕೊಂಡು ಹೋಗುತ್ತೀರಿ.. ಆದರೆ ಅಲ್ಲಿನ ಪರಿಸ್ಥಿತಿ ಏನು ಎಂಬುದು ನಮಗೆ ಗೊತ್ತು. ಹಿಂದೆಲ್ಲ ಕ್ವಾರಂಟೈನ್​ ಆಗಿದ್ದವರ ಪರಿಸ್ಥಿತಿ ಹೇಗಿತ್ತು ಎಂಬುದೂ ನಮಗೆ ಗೊತ್ತು. ನೀವು ಕನಿಷ್ಠ ಸೌಲಭ್ಯವನ್ನೂ ನಮಗೆ ಕೊಡೋದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಂತೂ ನಮಗೆ ಚಿಕ್ಕಮಕ್ಕಳಿದ್ದಾರೆ. ಅವರನ್ನೆಲ್ಲ ಕರೆದುಕೊಂಡು ಬರಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರದ ಹೊಸ ನಿಯಮದಂತೆ ಕ್ವಾರಂಟೈನ್​ ಮಾಡಬೇಕು ಎಂದು ಆರೋಗ್ಯ ಸಿಬ್ಬಂದಿ ಎಷ್ಟೇ  ಹೇಳಿದರೂ ಅಪಾರ್ಟ್​ಮೆಂಟ್ ನಿವಾಸಿಗಳು ಮಾತ್ರ ಅಪಾರ್ಟ್​ಮೆಂಟ್​ ಬಿಟ್ಟು ಕದಲುತ್ತಿಲ್ಲ.

ಸೀಲ್​ಡೌನ್​ಗೆ ನಿರ್ಧಾರ
ಕೊನೆಗೂ ಆರೋಗ್ಯ ಸಿಬ್ಬಂದಿಯೇ ಸೋಲಬೇಕಾಯಿತು. ಇಡೀ ಅಪಾರ್ಟ್​ಮೆಂಟ್​ನ್ನು ಸೀಲ್​ಡೌನ್​ ಮಾಡಿ, ನಿವಾಸಿಗಳು ಅಲ್ಲಿಯೇ ಉಳಿಯುವಂತೆ ಮಾಡಿದ್ದಾರೆ. 14 ದಿನಗಳವರೆಗೆ ವಸಂತನಗರದ ಅಪಾರ್ಟ್​ಮೆಂಟ್​ ಸೀಲ್​​ಡೌನ್​ ಆಗಲಿದ್ದು, ಅದನ್ನು ಮತ್ತೂ 14 ದಿನಗಳ ಕಾಲ ವಿಸ್ತರಿಸುವ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಪಾರ್ಟ್​ಮೆಂಟ್​ ಗೇಟ್​ಗೆ ಬೀಗ ಹಾಕಲಾಗಿದ್ದು, ‘ನಾವೀಗ ಗೃಹ ಬಂಧನದಲ್ಲಿ ಇದ್ದೇವೆ..’ ಎಂದು ಭಿತ್ತಿಪತ್ರ ಅಂಟಿಸಿದ್ದಾರೆ. ಅಪಾರ್ಟ್​​ಮೆಂಟ್​ ಸಂಪರ್ಕಿಸುವ ರಸ್ತೆಯನ್ನೂ ಸಹ ಕ್ಲೋಸ್ ಮಾಡಲಾಗಿದೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

4 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

5 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

5 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

5 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

5 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

5 days ago