Featured

ಬೆಂಗಳೂರು : ಭರ್ಜರಿ ಆಫರ್​ ನೊಂದಿಗೆ  18 ಜಟ್ಕಾ ಕಟ್ ಅಂಗಡಿಗಳು ಓಪನ್‌  – Vishwanews24

ಬೆಂಗಳೂರು : ಯುಗಾದಿ ಹಬ್ಬ ಮುಸ್ಲಿಂ ವ್ಯಾಪಾರಿಗಳಿಗೆ ಠಕ್ಕರ್ – ಭರ್ಜರಿ ಆಫರ್​ ನೊಂದಿಗೆ  18 ಜಟ್ಕಾ ಕಟ್ ಅಂಗಡಿಗಳು ಓಪನ್‌

ಬೆಂಗಳೂರು : ನಗರದಲ್ಲಿ ನಿನ್ನೆ ಭಕ್ತಿಭಾವದಿಂದ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಯುಗಾದಿ ಹಬ್ಬದ ಮಾರನೇ ದಿನ ಅಂದರೆ, ಚೈತ್ರ ಶುದ್ಧ ದ್ವಿತೀಯದಂದು ಹೊಸತೊಡಕು ಎಂದು ಆಚರಿಸಲು ಸಜ್ಜಾಗಿದ್ದಾರೆ.

ನಾನ್‌ವೆಜ್‌ ಪ್ರಿಯರು ಹೊಸ ತೊಡಕು ಸಂಭ್ರಮದಲ್ಲಿ ತೊಡಗಿದ್ದು ಮಾಂಸ ಖರೀದಿಗಾಗಿ ಬೆಳಗ್ಗೆ 6 ಗಂಟೆಯಿಂದಲೂ ಮಾಂಸದಂಗಡಿಗಳ ಎದುರು ಮುಗಿಬಿದ್ದಿದ್ದಾರೆ.

ಕುರಿ‌ಮಾಂಸ ಕಳೆದ ವರ್ಷಕ್ಕಿಂತ ಈ ಬಾರಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಒಂದು ಕೆಜಿಗೆ 700 ರೂ ದರ ನಿಗದಿ ಮಾಡಲಾಗಿದೆ. ಕಳೆದ ಬಾರಿ ನಾಲ್ಕು ಜಟ್ಕಾ ಕಟ್ ಶಾಪ್​ಗಳನ್ನು ತೆರೆಯಲಾಗಿತ್ತು. ಆದರೆ ಈ ಬಾರಿ 18 ಜಟ್ಕಾ ಕಟ್ ಅಂಗಡಿಗಳು ಓಪನ್‌ ಆಗಿದ್ದು, ಅದರಲ್ಲಿ ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯ್ ನಗರ, ಗೆದ್ದಲಹಳ್ಳಿ, ಯಲಹಂಕ, ಇಂದಿರಾನಗರ, ಟ್ಯಾನರಿ ರಸ್ತೆ, ಹೊರಮಾವು, ಅನ್ನಪೂರ್ಣೇಶ್ವರಿನಗರ ತೆರೆಯಲಾಗಿದೆ ಎಂದು ವರದಿಯಾಗಿದೆ.

ಹಲಾಲ್ ಬಾಯ್ಕಾಟ್ ಅಭಿಯಾನದ ಹಿನ್ನೆಲೆ ರಾಜಸ್ಥಾನದ ಅಜ್ಮೇರ್ ನಿಂದ 200, ಬಾಸವನಬಾಗೇವಾಡಿ, ಮಧುಗಿರಿಯಿಂದ 400. ಒಟ್ಟು 600 ಕುರಿ ಮತ್ತು ಮೇಕೆಗಳುಬೆಂಗಳೂರಿಗೆ ಬಂದಿವೆ. ಅಷ್ಟೇ ಅಲ್ಲದೇ ವ್ಯಾಪಾರದ ಹಿತ ದೃಷ್ಟಿಯಿಂದ ಆನ್ಲೈನ್ ಮತ್ತು ಡೋರ್ ಡೆಲಿವರಿ ವ್ಯವಸ್ಥೆಕೂಡ ಕಲ್ಪಿಸಲಾಗಿದೆ.

2 ಕೆಜಿ ಮಟನ್, 2 ಕೆಜಿ ಚಿಕನ್, 6 ಮೊಟ್ಟೆ 1999 ರೂ ಕಾಂಬೋ ನೀಡಲಾಗುತ್ತಿದೆ. ಹಿಂದವೀ ಮೀಟ್ ಮಾರ್ಟ್ 1200 ಸಾವಿರ ಕೆಜಿ ಜಟ್ಕಾ ಕಟ್ ರೆಡಿ ಮಾಡಿದೆ. ಗುಡ್ಡೆ ಮಾಂಸ ಕೆಜಿ- 650, ಕೆಜಿ ಮಟನ್- 700, ಚಿಕನ್- 130 ರಿಂದ 140 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ರೇಟ್‌ ಎಷ್ಟೇ ಅಗಿದ್ದು ವರ್ಷಕ್ಕೆ ಒಮ್ಮೆ ಬರುವ ಹೊಸತೊಡಕಿನ ಹಬ್ಬವನ್ನು ಆಚರಣೆ ಮಾಡಲೇ ಬೇಕಾಗುತ್ತದೆ ಎಷ್ಟೆ ಇದ್ದರು ನಾವು ಹಬ್ಬ ಮಾಡುತ್ತೇವೆ ಎಂದು ಗ್ರಾಹಕರು ತಿಳಿಸುತ್ತಿದ್ದಾರೆ.

ಒಟ್ಟಾರೆಯಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಚಿಲ್ಲಿ ಚಿಕನ್, ಪೆಪ್ಪರ್ ಚಿಕನ್, ಫಿಶ್ ಕರಿ, ಫಿಶ್ ಫ್ರೈ, ತಲೆ ಕಾಲ್ ಮಾಂಸ, ಕಾಲ್ ಸೂಪ್ ಹೇಗಪ್ಪಾ ಮಾಡುವುದು ಎಂದು ನಾನ್ ವೆಜ್ ಪ್ರಿಯರು ಯೋಚನೆ ಮಾಡತ್ತಿದ್ದರೆ, ಇತ್ತ ವ್ಯಾಪಾರಿಗಳು ಫುಲ್ ಖುಷಿಯಾಗಿದಂತೂ ಸುಳ್ಳಲ್ಲ.

Vishwa News 24

Recent Posts

ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆ ಭೀಕರ ರಸ್ತೆ ಅಪಘಾತ :  11 ಮಂದಿ ಸಾವು – vishwanews24

ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆಭೀಕರ ರಸ್ತೆ ಅಪಘಾತ :  11 ಮಂದಿ ಸಾವು ಥಾಣೆ: ವ್ಯಾನ್ ಹಾಗೂ…

8 hours ago

ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು – vishwanews24

ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು ಮೀನುಗಳ ಕೊರತೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕರಾವಳಿಯ ಮೀನುಗಾರರು ಮಂಗಳೂರು(ದಕ್ಷಿಣ ಕನ್ನಡ):…

10 hours ago

ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ : ಪರಮೇಶ್ವರ್ – vishwanews24

ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ : ಪರಮೇಶ್ವರ್ ಬೆಂಗಳೂರು: ಅದೇನು ಗ್ಯಾಂಬ್ಲಿಂಗ್ ಅಲ್ಲ, ಹಿರಿಯ ಶಾಸಕರು ಸಚಿವ…

11 hours ago

ಕಾರ್ಕಳ : ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ – 82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ: ಡಾ.ಎಂಎನ್‌ಆರ್ – vishwanews24

ಕಾರ್ಕಳ : ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ: ಡಾ.ಎಂ.ಎನ್.ರಾಜೇಂದ್ರಕುಮಾರ್ 82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ: ಡಾ.ಎಂಎನ್‌ಆರ್ ಕಾರ್ಕಳ: ಕಾರ್ಕಳದ…

11 hours ago

ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ – vishwanews24

ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ, ಎರಡು ವಾಹನ ವಶ ಮೂಡುಬಿದಿರೆ: ಅತ್ಯಂತ ಹಿಂಸಾತ್ಮಕವಾಗಿ ಹಾಗೂ…

11 hours ago

ರಾಜ್ಯದ ಹಲವೆಡೆ ಇಂದು, ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ : ಹವಾಮಾನ ಇಲಾಖೆ – vishwanews24

ರಾಜ್ಯದ ಹಲವೆಡೆ ಇಂದು, ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ : ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹಲವೆಡೆ ಇಂದು…

12 hours ago