Featured

ಬೆಂಗಳೂರು: ಹಿಟ್ ಅಂಡ್ ರನ್ : ಚಾಲಕನನ್ನು ರಸ್ತೆಯಲ್ಲಿ 1 ಕಿ.ಮೀ ಎಳೆದೊಯ್ದ ಬೈಕ್ ಸವಾರ – Vishwanews24

ಬೆಂಗಳೂರು: ಹಿಟ್ ಅಂಡ್ ರನ್ : ಚಾಲಕನನ್ನು ರಸ್ತೆಯಲ್ಲಿ 1 ಕಿ.ಮೀ ಎಳೆದೊಯ್ದ ಬೈಕ್ ಸವಾರ

ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿ ಇಂದು ದೆಹಲಿಯ ಕಾರ್ ಬೈಕ್ ಗೆ ಹಿಟ್ ಅಂಡರ್ ರನ್ ಮಾದರಿಯಲ್ಲಿಯೇ ಭೀಕರ ಅಮಾನವೀಯ ಕೃತ್ಯವೊಂದು ನಡೆದಿದೆ. ಕಾರ್ ಗೆ ಡಿಕ್ಕಿಯಾಗಿದ್ದಕ್ಕೆ ಗಲಾಟೆ ಮಾಡಿ ಬೈಕ್ ಹಿಂಪದಿ ಹಿಡಿದಂತ ವ್ಯಕ್ತಿಯನ್ನೇ ಒಂದು ಕಿಲೋಮೀಟರ್ ದೂರದವರೆಗೆ ಬೈಕ್ ಸವಾರ ಎಳೆದೊಯ್ದಿರೋ ಡೆಡ್ಲಿ ಕೃತ್ಯ ನಡೆದಿದೆ.

ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಲ್ಲಿ ಬೈಕ್ ಸವಾರನೊಬ್ಬ ಟಾಟಾ ಸುಮೋಗೆ ಡಿಕ್ಕಿ ಹೊಡೆದಿದ್ದನು. ಈ ವೇಳೆ ಸುಮೋ ಚಾಲಕ ಬೈಕ್ ಸವಾರನನ್ನು ಪ್ರಶ್ನಿಸಿ, ಗಲಾಟೆ ಮಾಡಿದ್ದಾನೆ. ಈ ವೇಳೆ ಬೈಕ್ ಸವಾರ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಬೈಕ್ ಸೀಟ್ ಹಿಂಪದಿಯ ಹಿಡಿಯನ್ನು ಜಗ್ಗಿ ಹಿಡಿದಿದ್ದಾನೆ.

ಇದನ್ನೂ ಲೆಕ್ಕಿಸದೇ ಬೈಕ್ ಸವಾರ ಮಾತ್ರ ಮಾಗಡಿ ರಸ್ತೆ ಟೋಲ್ ಗೇಟ್ ನಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಸುಮಾರು ಒಂದು ಕಿಲೋಮೀಟರ್ ದೂರು ರಸ್ತೆಯಲ್ಲಿ ಧರಧರ ಎಳೆದೊಯ್ದಿದ್ದಾನೆ.

ಇದನ್ನು ಗಮನಿಸಿದಂತ ಸಾರ್ವಜನಿಕರು, ಬೈಕ್ ಸವಾರನನ್ನು ತಡೆದು, ಪ್ರಶ್ನಿಸಿದ್ದಾರೆ. ಅಲ್ಲದೇ ಅಮಾನವೀಯ ರೀತಿಯಲ್ಲಿ ವಯಸ್ಸಾಗಿದ್ದಂತ ಕಾರು ಚಾಲಕ ಬೈಕ್ ಹಿಂದೆ ಹಿಡಿದಿದ್ದರೂ ಎಳೆದೊಯ್ದು ಕೃತ್ಯವೆಸಗಿದಂತ ಬೈಕ್ ಸವಾರನಿಗೆ ಧರ್ಮದೇಟು ನೀಡಿದರು.

ಸಾರ್ವಜನಿಕರ ಒಡೆತದಿಂದಾಗಿ ಬೈಕ್ ಸವಾರ ಅಸ್ವಸ್ಥಗೊಂಡಿದ್ದನು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಬೈಕ್ ಸವಾರ, ಕಾರು ಚಾಲಕ ಇಬ್ಬರನ್ನು ಆಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

20 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

20 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

21 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

21 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

22 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

22 hours ago