ಬೆಂಗಳೂರು: ಪತಿ ಮಹಾಶಯ ತನ್ನ ಸ್ನೇಹಿತರ ಜತೆಗೆ ಹಾಸಿಗೆ ಹಂಚಿಕೊಳ್ಳುವಂತೆ ಬೆದರಿಸಿ, ಆ ಖಾಸಗಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಟೆಕ್ಕಿ ಪತ್ನಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಥಣಿಸಂದ್ರದ ನಿವಾಸಿ 34 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ ಜಾನ್ (36) ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರುದಾರ ಮಹಿಳೆಯು 2011ರಲ್ಲಿ ಪತಿ ಜಾನ್‌ನನ್ನು ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗನಿದ್ದಾನೆ. ಮದುವೆಯಾದಾಗಿನಿಂದ ಜಾನ್ ಮದ್ಯಪಾನ ಮಾಡಿ ಬಂದು ಹಲ್ಲೆ ನಡೆಸಿ ಹಿಂಸೆ ಕೊಡುತ್ತಿದ್ದ.
2015ರಲ್ಲಿ ತನ್ನ ಸ್ನೇಹಿತರೊಂದಿಗೆ ಮಲಗುವಂತೆ ಒತ್ತಾಯ ಮಾಡುತ್ತಿದ್ದು ನಾನು ಒಪ್ಪದಿದ್ದಾಗ ಹಲ್ಲೆ ನಡೆಸಿ ಹಿಂಸೆ ಕೊಡುತ್ತಿದ್ದ. ಪತಿಯ ಹಿಂಸೆ ತಾಳಲಾರದೇ ಪತಿಯ ಇಬ್ಬರು ಸ್ನೇಹಿತರ ಜತೆಗೆ ಹಲವಾರು ಬಾರಿ ದೈಹಿಕ ಸಂಪರ್ಕ ಹೊಂದಿದ್ದೇನೆ. ಪತಿಯ ಸ್ನೇಹಿತರ ಜೊತೆಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಹಾಗೂ ಫೋಟೊವನ್ನು ಪತಿ ಜಾನ್ ತನಗೆ ಗೊತ್ತಾಗದಂತೆ ಆತನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದ. ಇತ್ತೀಚೆಗೆ ನನಗೆ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವುದು ಇಷ್ಟವಾಗದೇ ಇದರಿಂದ ದೂರ ಉಳಿದಿದ್ದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ವಿಚ್ಛೇದನ ಕೇಳಿದಕ್ಕೆ ಬ್ಲಾಕ್‌ಮೇಲ್: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದರಿ 2019ರಿಂದ ನಮ್ಮೊಂದಿಗೆ ವಾಸಿಸುತ್ತಿದ್ದಳು. ಇಷ್ಟಕ್ಕೆ ಸುಮ್ಮನಾಗದ ಪತಿ ನಿನ್ನ ತಂಗಿಯನ್ನು ನನ್ನ ಜೊತೆ ಮಲಗಲು ಹೇಳು ಎಂದು ಒತ್ತಾಯಿಸುತ್ತಿದ್ದ. ಇದರಿಂದ ಮನನೊಂದು ಪತಿಯಿಂದ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದೆ.
ವಿಚ್ಛೇದನ ಕೇಳಿದಾಗಲೆಲ್ಲಾ ಖಾಸಗಿ ವಿಡಿಯೋ ಮತ್ತು ಫೋಟೋ ತೋರಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ. ಡಿ.4ರಂದು ಮತ್ತೆ ವಿಚ್ಛೇದನ ಕೇಳಿದಾಗ 2 ಖಾಸಗಿ ಫೋಟೋಗಳನ್ನು ನನ್ನ ವಾಟ್ಸ್ಆಯಪ್ಗೆ ಕಳುಹಿಸಿದ್ದ. ಇವುಗಳನ್ನು ನಿನ್ನ ಸ್ನೇಹಿತರಿಗೆ, ನಿನ್ನ ತಂದೆ ತಾಯಿಗೆ ಕಳುಹಿಸಿ, ಇಂಟರ್ನೆಟ್ ಗ್ರೂಪ್‌ಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಪತಿ ಮದ್ಯಪಾನದ ಜತೆಗೆ ಗಾಂಜಾ ಸೇವನೆ ಮಾಡುತ್ತಿದ್ದು, ಮನೆಯಲ್ಲಿ 2 ಪಾಟ್‌ಗಳಲ್ಲಿ ಗಾಂಜಾ ಸಸ್ಯ ಬೆಳೆಸಿದ್ದಾನೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…