Featured

ಬೆಂಗಳೂರು : 7 ಮಕ್ಕಳ ನಾಪತ್ತೆ ಪ್ರಕರಣ : ಮೂವರು ಮಕ್ಕಳು ಪತ್ತೆ – Vishwanews24

ಬೆಂಗಳೂರು : 7 ಮಕ್ಕಳ ನಾಪತ್ತೆ ಪ್ರಕರಣ : ಮೂವರು ಮಕ್ಕಳು ಪತ್ತೆ – Vishwanews24

ಪೊಲೀಸರಿಗೆ ಸುಳಿವು ಕೊಟ್ಟ ಚಿಂದಿ ಆಯುವ ವ್ಯಕ್ತಿ..

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 7 ಮಂದಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಪತ್ತೆಯಾಗಿದ್ದಾರೆ.

ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂವರು ಮಕ್ಕಳು ಇಂದು ಪತ್ತೆಯಾಗಿದ್ದಾರೆ. ಪರಿಕ್ಷಿತ್, ಕಿರಣ್ ಹಾಗೂ ನಂದನ್ ಪತ್ತೆಯಾದ ಮಕ್ಕಳು.

ಈ ಮೂವರು ಮಕ್ಕಳು ಕಬ್ಬಡ್ಡಿಯಲ್ಲಿ ಸಾಧನೆ ಮಾಡೋದಾಗಿ ಪತ್ರ ಬರೆದಿಟ್ಟು ಮನೆ ತೊರೆದಿದ್ದರು. ಇದೀಗ ಚಿಂದಿ ಆಯುವ ವ್ಯಕ್ತಿಯೊಬ್ಬರು ನೀಡಿದ ದೂರಿನನ್ವಯ ಸಿಸಿಟಿವಿ ಹುಡುಕಾಡಿ ಪೊಲೀಸರು ಮಕ್ಕಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಳಗ್ಗೆ 7.30 ರ ಸಮಯದಲ್ಲಿ ಈ ಮೂವರು ಆನಂದ್ ರಾವ್ ಸರ್ಕಲ್ ಬಳಿ ಕಾಣಿಸಿಕೊಂಡಿದ್ದರು. ಕೂಡಲೇ ಬಾಗಲಗುಂಟೆ ಪೊಲೀದರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಸದ್ಯ ಮಕ್ಕಳು ಉಪ್ಪಾರಪೇಟೆ ಪೊಲೀಸರ ರಕ್ಷಣೆಯಲ್ಲಿದ್ದು, ಬಾಗಲಗುಂಟೆ ಪೊಲೀಸರು ಬಂದ ತಕ್ಷಣ ಮಕ್ಕಳನ್ನ ಒಪ್ಪಿಸಲಿದ್ದಾರೆ.

ಶನಿವಾರ ಮನೆ ಬಿಟ್ಟ ನಂತರ ಮಕ್ಕಳು ಕೆಂಗೇರಿಗೆ ಬಂದಿದ್ದಾರೆ. ಕೆಂಗೇರಿಯಿಂದ ಮೈಸೂರಿಗೆ ಹೋಗಿದ್ದಾರೆ. ಮೈಸೂರಿನಲ್ಲಿ ಒಂದು ದಿನ ಕಳೆದಿರುವ ಮಕ್ಕಳು, ಮೈಸೂರು ದಸರಾದಲ್ಲಿ ನಡೆಯುತ್ತಿದ್ದ ದೇಶೀಯ ಕ್ರೀಡೆಗಳನ್ನು ನೋಡಿದ್ದಾರೆ. ನಿನ್ನೆ ರಾತ್ರಿ ಮೈಸೂರಿಂದ ಮಕ್ಕಳು ಬೆಂಗಳೂರಿಗೆ ಬಂದಿದ್ದಾರೆ. ಮೆಜೆಸ್ಟಿಕ್ ನಿಂದ ಕಂಠೀರವ ಸ್ಟೇಡಿಯಂ ವರೆಗೆ ಜಾಗಿಂಗ್ ಹೋಗಿದ್ದ ಮಕ್ಕಳು, ಕಂಠೀರವ ಸ್ಟೇಡಿಯಂ ಬಳಿ ಪ್ರಾಕ್ಟೀಸ್ ಗೇಮ್ ಗಳನ್ನ ನೋಡ್ಕೊಂಡು ಆನಂದರಾವ್ ಸರ್ಕಲ್ ಕಡೆ ವಾಪಸ್ಸಾಗಿದ್ದರು. ಈ ವೇಳೆ ಮಕ್ಕಳು ಚಿಂದಿ ಆಯುವ ವ್ಯಕ್ತಿ ಮುಖಾಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಚಿಕ್ಕಮಗಳೂರು : ತನ್ನ ತೀಕ್ಷ್ಣ ನೆನಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಮೂರು ವರ್ಷದ ಆರ್ವಿ -Vishwanews24

ಶುಕ್ರವಾರ ಶಾಲೆಯಲ್ಲಿಯೇ ಮನೆ ಬಿಡೋ ನಿರ್ಧಾರ ಮಾಡಿದ್ದ ಮಕ್ಕಳು, ಅದರಂತೆ ಶನಿವಾರ ಬೆಳಗ್ಗೆ 5.30 ಕ್ಕೆ ಮನೆಯಿಂದ ಹೊರಟಿದ್ದಾರೆ. ಜಾಗಿಂಗ್ ಹೋಗಿ ಬರೋದಾಗಿ ಬಂದಿದ್ದ ಮೂವರು ಮಕ್ಕಳು, ಮನೆಯಿಂದ ಬರುತ್ತಾ ಮೂವರು ತಲಾ ಒಂದೊಂದು ಸಾವಿರ ತಂದಿದ್ದಾರೆ. ಮೊದಲು ಮಂಗಳೂರಿಗೆ ಹೋಗೋಣ ಎಂದು ಪ್ಲಾನ್ ಮಾಡಿಕೊಂಡಿದ್ದಾರೆ. ನಂತರ ಪ್ಲಾನ್ ಬದಲಾಯಿಸಿ ಮೈಸೂರು ಬಸ್ ಹತ್ತಿದ್ದಾರೆ. ಮೈಸೂರು ಬಸ್ ಸ್ಟಾಪ್‍ನಲ್ಲಿ ಶನಿವಾರ ಇಡೀ ದಿನ ಉಳಿದುಕೊಂಡಿದ್ದಾರೆ. ಮೈಸೂರಿಗೆ ತೆರಳಿ ದಸರಾ ಹಬ್ಬ ನೋಡಿಕೊಂಡು ಬಂದಿದ್ದಾರೆ. ಭಾನುವಾರ ಕೂಡ ಮೈಸೂರಿನಲ್ಲಿ ಕಾಲ ಕಳೆದಿದ್ದಾರೆ. ಮತ್ತೆ ಭಾನುವಾರ ರಾತ್ರಿ ಮೈಸೂರಿನಿಂದ ಟ್ರೈನ್ ಹತ್ತಿದ್ದಾರೆ. ಬೆಳಗ್ಗೆ ಆನಂದ್ ರಾವ್ ಸರ್ಕಲ್ ಬಳಿ ಬಂದಿದ್ದು, ಪೇಪರ್ ಆಯುವ ವ್ಯಕ್ತಿ ಬಳಿ ಕೆಲಸ ಕೇಳಿದ್ದಾರೆ. ಮಕ್ಕಳ ನಾಪತ್ತೆ ಪ್ರಕರಣ ವಿಚಾರ ತಿಳಿದಿದ್ದ ಪೇಪರ್ ಆಯುವ ವ್ಯಕ್ತಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳ ರಕ್ಷಣೆ ಮಾಡಿದ್ದಾರೆ.

 

Vishwa News 24

Recent Posts

ಉಡುಪಿ: ಕಾಕ್ರೋಚ್ ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ  ನಡೆಯುತ್ತಿದೆ: ಸುನಿಲ್ ಕುಮಾರ್ ಆರೋಪ – vishwanews24

ಉಡುಪಿ: ಕಾಕ್ರೋಚ್’ ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ  ನಡೆಯುತ್ತಿದೆ: ಸುನಿಲ್ ಕುಮಾರ್ ಆರೋಪ ಉಡುಪಿ: ಚಳವಳಿಯ ಹೆಸರಿನಲ್ಲಿ ದೇಶದಲ್ಲಿ…

10 hours ago

ಕಾಪು : ಉದ್ಯಮಿ ಸಖೇಂದ್ರ ಬಿ. ಸುವರ್ಣ ಹೃದಯಾಘಾತದಿಂದ ನಿಧನ – vishwanews24

ಕಾಪು : ಉದ್ಯಮಿ ಸಖೇಂದ್ರ ಬಿ. ಸುವರ್ಣ ಹೃದಯಾಘಾತದಿಂದ ನಿಧನ ಕಾಪು : ಕಾಪುವಿನ ಹಿರಿಯ ಉದ್ಯಮಿ, ಧಾರ್ಮಿಕ, ಸಾಮಾಜಿಕ…

10 hours ago

ಜು.29ರಂದು ಕಿನ್ನಿಮುಲ್ಕಿಯಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್‌ನ ನೂತನ ಶಾಖೆ ಉದ್ಘಾಟನೆ – vishwanews24

ಜು.29ರಂದು ಕಿನ್ನಿಮುಲ್ಕಿಯಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್‌ನ ನೂತನ ಶಾಖೆ ಉದ್ಘಾಟನೆ ಉಡುಪಿ: ನಗರದ ಕಿನ್ನಿಮುಲ್ಕಿಯ ಶಾಂತಾ ಬಿಲ್ಡಿಂಗ್‌ನಲ್ಲಿ ಕಿದಿಯೂರು ಕ್ರೆಡಿಟ್…

12 hours ago

ಪಡುಬಿದ್ರಿ : ಆ.1ರಂದು ಹೆಜಮಾಡಿ ಟೋಲ್ ವಿರುದ್ದ ಬೃಹತ್ ಹೋರಾಟ: ಪೋಸ್ಟರ್ ಬಿಡುಗಡೆ – vishwanews24

ಪಡುಬಿದ್ರಿ : ಆ.1ರಂದು ಹೆಜಮಾಡಿ ಟೋಲ್ ವಿರುದ್ದ ಬೃಹತ್ ಹೋರಾಟ: ಪೋಸ್ಟರ್ ಬಿಡುಗಡೆ ಪಡುಬಿದ್ರಿ : ಹೆಜಮಾಡಿ ಟೋಲ್ನಲ್ಲಿ ಸ್ಥಳೀಯ…

12 hours ago

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ – vishwanews24

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ ಮಂಗಳೂರು: ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜುಲೈ…

12 hours ago

ಮಂಗಳೂರು : ಮೀನುಗಾರ ಮುಖಂಡನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ – vishwanews24

ಮಂಗಳೂರು : ಮೀನುಗಾರ ಮುಖಂಡನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮಂಗಳೂರು : ನಗರ ಹೊರವಲಯದ ಬೈಕಂಪಾಡಿಯ…

13 hours ago