Featured

ಬೆಳಗಾವಿ ಮನೆ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ – Vishwanews24

ಬೆಳಗಾವಿ ಮನೆ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ – Vishwanews24

ಬೆಳಗಾವಿ : ಕರ್ನಾಟಕ ರಾಜ್ಯದ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮಳೆಗೆ ಹಳೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಆರು ಮಂದಿ ಮತ್ತು ಪಕ್ಕದ ಮನೆಯ ಬಾಲಕಿ ಸೇರಿ ಏಳು ಮಂದಿ ಮೃತಪಟ್ಟ ಘಟನೆ ನಿನ್ನೆ ನಡೆದಿತ್ತು. ಘಟನೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು 2ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಹಳೆ ಗೋಡೆ ಒದ್ದೆ ಆಗಿತ್ತು. ಆ ಗೋಡೆ ಬೀಳುವುದನ್ನು ನೋಡಲು ಹೋಗಿದ್ದಾಗ ಈ ದುರಂತ ಸಂಭವಿಸಿತ್ತು. ಸುರೇಶ್ ಖಾನಗಾವಿ ಕುಟುಂಬದ ಲಕ್ಷ್ಮಿ ಅರ್ಜುನ್ ಖಾನಗಾವಿ(15), ಶಾಂತವ್ವ ಭೀಮಪ್ಪ ಖಾನಗಾವಿ(50), ಅರ್ಜುನ್ ಹನಮಂತ ಖಾನಗಾವಿ, ಸತ್ಯವ್ವ ಅರ್ಜುನ್ ಖಾನಗಾವಿ(45), ಪೂಜಾ ಅರ್ಜುನ್ ಖಾನಗಾವಿ(8), ಸವಿತಾ ಭೀಮಪ್ಪ ಖಾನಗಾವಿ(28) ಮತ್ತು ಪಕ್ಕದ ಮನೆಯ ಬಾಲಕಿ ಕಾಶವ್ವ ವಿಠ್ಠಲ ಕೊಳೆಪ್ಪನವರ(8) ಸಾವನ್ನಪ್ಪಿದ್ದರು. ಈ ಘಟನೆ ಬಗ್ಗೆ ಟ್ವಿಟ್ಟರ್‍ ನಲ್ಲಿ ಸಂತಾಪ ಸೂಚಿಸಿ 2 ಲಕ್ಷ ರೂ. ಪರಿಹಾರವನ್ನು ಮೋದಿ ಘೋಷಿಸಿದ್ದಾರೆ.

ಸುರೇಶ್ ಖಾನಗಾವಿ ಕುಟುಂಬ ತಮ್ಮ ಹಳೆಯ ಮನೆಯನ್ನು ಬೀಳಿಸಿ ಹೊಸ ಮನೆ ಕಟ್ಟುವ ಸಿದ್ಧತೆಯಲ್ಲಿದ್ದರು. ಅದಕ್ಕಾಗಿಯೇ ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ಅಲ್ಲೇ ವಾಸವಾಗಿದ್ದರು. ಗೋಡೆ ಕುಸಿಯುತ್ತಿದ್ದಂತೆ ಪ್ರಾಣ ರಕ್ಷಣೆಗೆ ಓಡಿದರೂ ಪ್ರಾಣ ಉಳಿಯಲಿಲ್ಲ. ಅಂಗಡಿಗೆ ಹೋಗಿದ್ದ ಮನೆಯ ಯಜಮಾನ ಸುರೇಶ್ ಖಾನಗಾವಿ ಮತ್ತು ಇನ್ನೊಬ್ಬ ಪುತ್ರ ಮಾತ್ರ ಬದುಕುಳಿದಿದ್ದಾರೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಡಗರ ಸಂಭ್ರಮದ ಮಂಗಳೂರು ದಸರಾಗೆ ಸಂಭ್ರಮದ ಚಾಲನೆ -Vishwanews24

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago