Featured

ಬೆಳಪು ಕೈಗಾರಿಕಾ ಪಾರ್ಕಿನಲ್ಲಿ ಕೆ.ಐ.ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ – vishwanews24

ಬೆಳಪು ಕೈಗಾರಿಕಾ ಪಾರ್ಕಿನಲ್ಲಿ ಕೆ.ಐ.ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ

10ನೇ ಸೆಪ್ಟೆಂಬರ್ 2024 ರಂದು ಬೆಳಪು ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಪಣಿಯೂರು ಇಂದ ಬೆಳಪುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುರಿತು ಸಭೆ ಎಸ್ ಎನ್ ಕ್ರಯೋಜೆನಿಕ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಜರಗಿತು .

ಬೆಳಪು ಕೈಗಾರಿಕಾ ಪ್ರದೇಶದಲ್ಲಿ ಸುಮಾರು 54 ಕೈಗಾರಿಕಾ ಕೇಂದ್ರಗಳು ಪ್ರಾರಂಭಗೊಳ್ಳಲಿದ್ದು ಈಗಾಗಲೇ ಹಲವಾರು ಸಣ್ಣ ಕೈಗಾರಿಕೆಗಳು ಪ್ರಾರಂಭವಾಗಿದ್ದು ಪಣಿಯೂರಿನಿಂದ ಬೆಳಪುವಿಗೆ ಬರುವ ಸಂಪರ್ಕ ರಸ್ತೆ ತೀರಾ ಹದೆಗಟ್ಟಿದ್ದು ಇದರ ಅಗಲೀಕರಣ ಗೊಳಿಸಲು ಅಭಿವೃದ್ಧಿಪಡಿಸಲು ಸುಮಾರು 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯನ್ನು KiADB ಯವರು ಸಿದ್ಧಪಡಿಸಿದ್ದು ಸುಮಾರು 2.70 ಎಕರೆ ಜಾಗ ರೈತರಿಂದ ಭೂಸ್ವಾಧೀನ ಪಡಿಸಿಕೊಂಡಿದ್ದು ಗ್ರಾಮಸ್ಥರಿಗೆ ಪರಿಹಾರ ನೀಡದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೆಳಪು ದೇವಿ ಪ್ರಸಾದ್ ಶೆಟ್ಟಿ ಅವರು ತಕ್ಷಣ ಪರಿಹಾರವನ್ನು ರೈತರಿಗೆ ನೀಡಿ ಎಲ್ಲಾ ಸಣ್ಣ ಕೈಗಾರಿಕೆಗಳು ತೀರಾ ನಷ್ಟದಲ್ಲಿ ಇರುವುದರಿಂದ ರಸ್ತೆ ಅಭಿವೃದ್ಧಿಪಡಿಸಿ 6 ಕೋಟಿ ಹೊರೆಯನ್ನ ಕೈಗಾರಿಕಾ ಮಾಲಕರಿಗೆ ಹಾಕುವುದು ಸೂಕ್ತವಲ್ಲ ಇದನ್ನು ಸರಕಾರ, ಸಂಸದರು ,ಶಾಸಕರ ಗಮನಕ್ಕೆ ತಂದು ರಸ್ತೆ ಅಭಿವೃದ್ಧಿಗೊಳಿಸಲು ಕಾರ್ಯ ಮಾಡುತ್ತೇನೆ ಎಂದು ಶೆಟ್ಟಿ ಅವರು ತಿಳಿಸಿದರು.

ಕೈಗಾರಿಕಾ ಪ್ರದೇಶದಲ್ಲಿ ನಿರ್ವಹಣೆ ,ತ್ಯಾಜ್ಯ , ಹರಿಯುವ ನೀರಿನ ಚರಂಡಿಗಳು ಸರಿಯಾಗಿ ಇಲ್ಲದ ಕಾರಣ ರೈತರ ಜಮೀನಿಗೆ ನೀರು ನುಗ್ಗಿ ಕೃತಕ ನೆರೆ ಉದ್ಭವವಾಗಿರುತ್ತದೆ ಎಂದು ಕೆಇಡಿಬಿಯ ಅಧಿಕಾರಿಗಳ ಗಮನಕ್ಕೆ ತಂದರು ಅಲ್ಲದೆ ಶಿವಾಲಯದಿಂದ ಜನರಿಗೆ ಬೆಳಪು ವಿಗೆ ಕಾಲುದಾರಿಯಲ್ಲಿ ಸಂಚರಿಸಲು ಅವಕಾಶ ನೀಡಬೇಕು , ಕೆಐಎಡಿಬಿ ವಲಯದಲ್ಲಿರುವ ಶಿವಾಲಯದ ಅಭಿವೃದ್ಧಿಗೆ ಕೈಗಾರಿಕಾ ಪ್ರದೇಶದ ಮಾಲಕರು ಕೈಜೋಡಿಸಬೇಕು, ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ನೀಡಬೇಕಾಗಿ ಕಾರ್ಖಾನೆಯ ಮಾಲಕರಲ್ಲಿ ವಿನಂತಿಸಿದ್ದರು.

ಕೈಗಾರಿಕಾ ಪ್ರದೇಶದ ವಿವಿಧ ಸಮಸ್ಯೆಗಳ ಬಗ್ಗೆ ಹಾಗೂ ಕೈಗಾರಿಕಾ ಸ್ಥಳಗಳ ಕ್ರಯಾಸಾದನವನ್ನ ಮಾಡಿ ಕೈಗಾರಿಕಾ ಮಾಲೀಕರಿಗೆ ನೀಡಬೇಕಾಗಿ ಎಸ್ ಎನ್ ಕ್ರಯೋಯೋಜನಿಕ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ನಟರಾಜ ಹೆಗ್ಡೆ ಕೆ ಐ ಡಿ ಬಿ ಯ ಅಧಿಕಾರಿಗಳ ಗಮನಕ್ಕೆ ತಂದರು.

ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವ ಬಡ ಜನರಿಗೆ ಸರಕಾರದ ತೀರ್ಮಾನದಂತೆ ಗುಡಿ ಕೈಗಾರಿಕಾ ಯೋಜನೆ ಅಡಿಯಲ್ಲಿ ವಾಸಿಸುತ್ತಿದ್ದ ಸ್ಥಳವನ್ನು ಮಂಜೂರು ಮಾಡಿ ಕೊಡಿಸುವಂತೆ , ಅಲ್ಲದೆ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಪಾವತಿಸುವಂತೆ ಡಾ ದೇವಿ ಪ್ರಸಾದ್ ಶೆಟ್ಟಿ ಅವರು ವಿನಂತಿಸಿದ್ದು ಇದಕ್ಕೆ KIADB ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳು ಧ್ವನಿಗೂಡಿಸಿದ್ದರು.

ಆರು ಕೋಟಿ ವೆಚ್ಚದಲ್ಲಿ ಕೈಗಾರಿಕಾ ರಸ್ತೆ ಅಭಿವೃದ್ಧಿಪಡಿಸುವ ಮೊತ್ತವನ್ನು ಕೈಗಾರಿಕಾ ಮಾಲೀಕರಿಗೆ ಹೊರೆಯಾಗದ ರೀತಿಯಲ್ಲಿ ಸರಕಾರ ಬರಿಸುವಂತೆ ಮಾನ್ಯ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ ಯ ವರಲ್ಲಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತೆ ದೂರವಾಣಿ ಮುಖಾಂತರ ಮಾತನಾಡಿದ ಶೆಟ್ಟಿ ಅವರು ಅದಕ್ಕೆ ಸಂಸದರು ಒಪ್ಪಿಗೆಯನ್ನ ನೀಡಿದ್ದು ಕಾಪಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಯವರು ರಸ್ತೆ ಕಾಮಗಾರಿಗೆ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದರು .

ಬೆಳಪು ಕೈಗಾರಿಕಾ ಪ್ರದೇಶದ ಕೈಗಾರಿಕಾ ವಲಯದ ಮಾಲಕರು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ರಾಜು, ಸಹಾಯಕ ಆಯುಕ್ತರು, ವಿಶೇಷ ಭೂಸ್ವಾಧೀನ ಅಧಿಕಾರಿ, ಶ್ರೀ ನಾಗರಾಜ್, ಜಂಟಿ ನಿರ್ದೇಶಕರು, ಡಿಐಸಿ ಉಡುಪಿ,
ಶ್ರೀ ಸೀತಾರಾಮ ಶೆಟ್ಟಿ ಡಿಐಸಿ ಉಡುಪಿ, ಕೆಐಡಿಬಿಯ ಅಧಿಕಾರಿಗಳಾದ ದತ್ತಾತ್ರಿ. ಇಂಜಿನಿಯರ್ ಗಣಪತಿ ,ರತ್ನಾಕರ್, ಹಾಗೂ ಕೈಗಾರಿಕಾ ಪ್ರದೇಶದ ಮಾಲಕರುಗಳಾದ ವಸಂತ ಹೆಗ್ಡೆ, ಹರೀಶ್ ನಾಯಕ್ ಕಾಪು ,ಸುಧಾಕರ್ ಶೆಟ್ಟಿ ಮಕರ, ದಿನಕರ್ ಬಾಬು, ಕಿರಣ್ ಹೆಗ್ಡೆ, ಭೂಷಣ್ ರಾವ್, ನಾಗರಾಜ್ ಪ್ರಭು, ಸುರೇಶ್ ಶೆಟ್ಟಿ ಅಯೋಧ್ಯಾ,ದುರ್ಗಾ ನಾಯ್ಕ, ಇನ್ನಿತರರು ಉಪಸ್ಥಿತರಿದ್ದರು

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago