ಬೆಳಪು ಸೇವಾ ಸಹಕಾರಿ ಸಂಘದಲ್ಲಿ ಜನರಿಕ್ ಔಷಧಿ ಕೇಂದ್ರ ಸ್ಥಾಪನೆ : ದೇವಿಪ್ರಸಾದ್ ಶೆಟ್ಟಿ -Vishwanews24

ಬೆಳಪು ಸೇವಾ ಸಹಕಾರಿ ಸಂಘದಲ್ಲಿ : ಜನರಿಕ್ ಔಷಧಿ ಕೇಂದ್ರ ಸ್ಥಾಪನೆ : ದೇವಿಪ್ರಸಾದ್ ಶೆಟ್ಟಿ -Vishwanews24

ಬೆಳಪು ಸೇವಾ ಸಹಕಾರಿ ಸಂಘ ಎಲ್ಲೂರು-ಉಚ್ಚಿಲ-ಬೆಳಪು ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಬೇಕಾಗುವ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಹಲವಾರು ಜನಪರ ಯೋಜನೆಗಳನ್ನು ಜ್ಯಾರಿಗೊಳಿಸಿದೆ. ಇದರೊಂದಿಗೆ ಇದೀಗ ಭಾರತ ಸರಕಾರದ “ಜನರಿಕ್ ಔಷಧಿ” ಕೇಂದ್ರವನ್ನು ಕರ್ನಾಟಕ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್‌ರವರ ವಿಶೇಷ ಮುತುವರ್ಜಿಯಿಂದ ಸಹಕಾರಿ ರಂಗದಲ್ಲಿ ಪ್ರಥಮವಾಗಿ ಬೆಳಪು ಸಂಘದಲ್ಲಿ ಪ್ರಾರಂಭಿಸಲಾಗುವುದೆAದು ಬೆಳಪು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪುರವರು ತಿಳಿಸಿದ್ದಾರೆ.

ಭಾರತ ಸರಕಾರದ ಪ್ರಧಾನ ಮಂತ್ರಿಗಳ ಬಹು ಅಪೇಕ್ಷಿತ ಯೋಜನೆ ಗ್ರಾಮೀಣ ಭಾಗದ ಬಡಜನರಿಗೆ ಕಡಿಮೆ ದರದಲ್ಲಿ ಜೌಷಧ ಒದಗಿಸುವುದು. ಈಗಾಗಲೇ ಇದು ಅನುಷ್ಠಾನಗೊಂಡರೂ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಖಾಸಗಿ ಲಾಬಿಗಳ ಒತ್ತಡದಿಂದ ಇದು ಕುಂಠಿತವಾಗಿತ್ತು. ಇದೀಗ ಡಾ| ಎಂ. ಎನ್. ರಾಜೇಂದ್ರಕುಮಾರ್‌ರವರ ಚಿಂತನೆಯೊಂದಿಗೆ

ಕರ್ನಾಟಕ ರಾಜ್ಯದ ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ‘ಜನರಿಕ್ ಔಷಧಿ ಕೇಂದ್ರ ಸ್ಥಾಪನೆ’ ಯಾದರೆ ಜನರ ಮನೆ ಬಾಗಿಲಿಗೆ ಕಡಿಮೆ ದರದಲ್ಲಿ ಎಲ್ಲಾ ಔಷಧಿಗಳು ಲಭ್ಯವಾಗುತ್ತದೆ. ಸಹಕಾರಿ ರಂಗದಲ್ಲಿ ಸೇವಾ ಮನೋಭಾವನೆಯಿಂದ ಉತ್ತಮ ಗುಣಮಟ್ಟದ ಔಷಧಿಗಳು ಲಭ್ಯವಾಗುವುದಲ್ಲದೆ ಕಟ್ಟಕಡೆಯ ಜನರಿಗೆ ತಲುಪುತ್ತದೆ. ಇದರಿಂದ ಯೋಜನೆ ಅರ್ಥಪೂರ್ಣವಾಗುತ್ತದೆಂದು ಇದೀಗ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವರಾದ ಸದಾನಂದ ಗೌಡರವರ ಸಹಕಾರದಿಂದ ಮಂಜೂರಾತಿ ದೊರಕಿದೆಂದು ಶೆಟ್ಟಿ ತಿಳಿಸಿದ್ದಾರೆ.

ಜನರಿಕ್ ಔಷಧಿ ಕೇಂದ್ರದ ಮಂಜೂರಾತಿ ಪತ್ರವನ್ನು ಮೊನ್ನೆ ಮಂಗಳೂರಿನಲ್ಲಿ ನಡೆದ ೬೭ನೇ ಸಹಕಾರಿ ಸಪ್ತಾಹದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಕರ್ನಾಟಕ ಸಹಕಾರಿ ಸಚಿವರಾದ ಎಸ್. ಟಿ.ಸೋಮಶೇಖರ್‌ರವರು ಬೆಳಪು ಸಿ.ಎ. ಬ್ಯಾಂಕಿನ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪುರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಬಿ.ಜೆ.ಪಿ ಅಧ್ಯಕ್ಷರು ಹಾಗೂ ಮಂಗಳೂರಿನ ಸಂಸದರಾದ ನಳಿನ್ ಕುಮಾರ್ ಕಟೀಲು, ಕರ್ನಾಟಕ ಸಹಕಾರ ಮಾರಾಟ ಮಹಾ ಮಂಡಲದ ಅಧ್ಯಕ್ಷರಾದ ಡಾ| ಎಂ.ಎನ್.ರಾಜೇAದ್ರಕುಮಾರ್ ರವರು, ರಾಜ್ಯ ಸಹಕಾರ ಇಲಾಖಾ ನಿಬಂಧಕರಾದ ಜಿಹಾ ಉಲ್ಲಾ, ಮಂಗಳೂರಿನ ಶಾಸಕರಾದ ವೇದವ್ಯಾಸ ಕಾಮತ್, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ, ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ, ದ.ಕ. ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಮಂಗಳೂರು ಸಹಕಾರಿ ಯೂನಿಯನ್ ಅಧ್ಯಕ್ಷರಾದ ಕೌಶಲ್ ಪ್ರಸಾದ್ ರೈ, ಸ್ಕಾಡ್ಸ್ನ ಅಧ್ಯಕ್ಷರಾದ ರವೀಂದ್ರ ಕಾಂಬ್ಳಿ ಸಹಿತ ಇತರರು ಉಪಸ್ಥಿತರಿದ್ದರು.

Vishwa News 24

Recent Posts

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

1 hour ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

1 hour ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 hours ago

ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! vishwanews24

ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…

3 hours ago

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ – vishwanews24

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ ಕೊಪ್ಪಳ: ಗೂಡ್ಸ್‌ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…

3 hours ago